Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಮನಗೆಲ್ಲುವ ಆಲೂ- ಬ್ರೆಡ್ ಕಟ್ಲೇಟ್ ಸ್ನ್ಯಾಕ್ಸ್ ರೆಸಿಪಿ
Recipes
oi-Reena TK
Posted By: Reena TK
ಮಕ್ಕಳು ಶಾಲೆ ಬಿಟ್ಟು ಬರುವಾಗ ಅವರಿಗೆ ಏನು ತಿನ್ನುವುದಕ್ಕೆ ಕೊಡುವುದು ಎಂದು ಆಲೋಚಿಸುತ್ತೇವೆ, ಈ ಜಿಪ್ಸ್, ಮ್ಯಾಗ್ ಅಂತ ಕೊಡುವ ಬದಲಿಗೆ ಸ್ನ್ಯಾಕ್ಸ್ ಅನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಮಾಡಿ ಆರೋಗ್ಯಕರವಾಗಿ ಮಾಡಿ ನೀಡಬಹುದು. ಕಟ್ಲೇಟ್ ಅನ್ನು ತುಂಬಾ ರೀತಿಯಲ್ಲಿ ಮಾಡಬಹುದು. ಇಲ್ಲಿ ನಾವು ತುಂಬಾ ಸರಳವಾಗಿ ಮಾಡುವ ಆಲೂ-ಬ್ರೆಡ್ ಸ್ನ್ಯಾಕ್ಸ್ ನೀಡಿದ್ದೇವೆ, ಅಲ್ಲದೆ ಸ್ವಲ್ಪ ಭಿನ್ನ ರುಚಿಯಲ್ಲಿಯೂ ಹೇಗೆ ಮಾಡಬಹುದು ಎಂಬುವುದರ ಬಗ್ಗೆ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
ಆಲೂಗಡ್ಡೆ
1/3 ಕಪ್ ಗ್ರೀನ್ ಹಸಿ ಬಟಾಣಿ
8-10 ಕಾಳುಮೆಣಸು
ಹಸಿ ಮೆಣಸು ಅಥವಾ ಖಾರದ ಪುಡಿ(ನಿಮ್ಮ ಖಾರಕ್ಕೆ ತಕ್ಕಂತೆ)
ಸ್ವಲ್ಪ ಗರಂ ಮಸಾಲ
ರುಚಿಗೆ ತಕ್ಕ ಉಪ್ಪು
2-3 ಚಮಚ ಎಣ್ಣೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಬ್ರೆಡ್ ಪುಡಿ ಅರ್ಧ ಕಪ್
ಮಾಡುವ ವಿಧಾನ
- 2-3 ಆಲೂಗಡ್ಡೆ ಸಿಪ್ಪೆ ಸಹಿತ ಸ್ವಲ್ಪ ಉಪ್ಪು ಹಾಕಿ ಬೇಯಿಸಿ
- ಹಸಿ ಬಟಾಣಿ ಪ್ರತ್ಯೇಕ ಬೇಯಿಸಿ
- ಈಗ ಒಂದು ಬೌಲ್‌ಗೆ ನೀವು ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ಸಹಿತ ಹಾಕಿ
- ಅದಕ್ಕೆ ಹಸಿ ಬಟಾಣಿ ಸೇರಿಸಿ
- ನಂತರ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮಿಕ್ಸ್ ಮಾಡಿ
- ಇದಾದ ಬಳಿಕ ಆ ಮಿಶ್ರಣದಿಂದ ಚಪಾತಿಗೆ ಕಟ್ಟುವಷ್ಟು ಗಾತ್ರದಲ್ಲಿ ಉಂಡೆ ಕಟ್ಟಿ
- ನಂತರ ಕೈಯಿಂದಲೇ ಸ್ವಲ್ಪ ರೌಂಡಾಗಿ ತಟ್ಟಿ ಅದನ್ನು ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ
- ಈಗ ತವಾ ಬಿಸಿ ಅದಕ್ಕೆ ಎಣ್ಣೆ ಹಾಕಿ ಈಗ ಈ ಕಟ್ಲೇಟ್ ಅನ್ನು ಸಾಧಾರಣ ಉರಿಯಲ್ಲಿ ಫ್ರೈ ಮಾಡಿ, ಒಂದು ಬದಿ 5 ನಿಮಿಷ ಇಟ್ಟ ಬಳಿಕ ಮತ್ತೊಂದು ಬದಿ ಫ್ರೈಯಾಗಲು ಮಗುಚಿ ಹಾಕಿ, ಈಗ ರೆಡಿಯಾದ ಕಟ್ಲೇಟ್ ಅನ್ನು ಟೊಟೊಟೊ ಸಾಸ್ ಜೊತೆ ಸರ್ವ್ ಮಾಡಬಹುದು.
ಇತರ ಸಲಹೆ
- ನೀವು ಆಲೂಗಡ್ಡೆ ಬದಲಿಗೆ ಈಗ ಸಿಹಿಗೆಣಸಿನ ಸೀಸನ್, ಅದನ್ನು ಹಾಕಿ ಕೂಡ ಮಾಡಬಹುದು. ಇನ್ನು ತರಕಾರಿ ಮಕ್ಕಳು ಕಡಿಮೆ ತಿಂತಾರೆ ಎಂದರೆ ಈ ಕಟ್ಲೇಟ್ ಮಾಡಿ ಕ್ಯಾರೆಟ್, ಬೀನ್ಸ್ ಇವುಗಳನ್ನು ಸ್ವಲ್ಪ ಫ್ರೈ ಮಾಡಿ ಸೇರಿಸಬಹುದು. ಕಟ್ಲೇಟ್ ಡೀಪ್ ಪ್ರೈ ಮಾಡುವುದಕ್ಕಿಂತ ತವಾ ಫ್ರೈ ಮಾಡುವುದು ಒಳ್ಳೆಯದು, ಎಣ್ಣೆಯಂಶ ಹೆಚ್ಚಿರಲ್ಲ.
- ನೀವು ಮೊಟ್ಟೆ ಸೇವಿಸುವವರಾದರೆ ಕಟ್ಲೇಟ್ ಫ್ರೈ ಮಾಡಿ ನಂತರ ಮೊಟ್ಟೆಯಲ್ಲಿ ಹೊರಳಿಸಿ ಮತ್ತೊಮ್ಮೆ 2 ನಿಮಿಷ ಫ್ರೈ ಮಾಡಿದರೆ ಟೇಸ್ಟ್ ಭಿನ್ನವಾಗಿ ಇನ್ನೂ ಟೇಸ್ಟ್ ಆಗಿರುತ್ತದೆ.
- ಇನ್ನು ಚಿಕನ್ ತಿನ್ನುವವರಾದರೆ ಬೇಯಿಸಿದ ಚಿಕನ್ ಕೂಡ ಸೇರಿಸಬಹುದು.
- (ಚಿಕನ್ ಅನ್ನು ಸ್ವಲ್ಪ ಉಪ್ಪು, ಅರಿಶಿಣ, ಕಾಳು ಮೆಣಸು ಹಾಕಿ ಬೇಯಿಸಿಕೊಂಡು ಅದು ಬೆಂದ ಬಳಿಕ ಕೈಯಿಂದ ಬಿಡಿಸಿ ಆ ಚಿಕನ್ ಚೂರುಗಳನ್ನು ಸೇರಿಸಿ).
Comments
[ of 5 - Users]



Click it and Unblock the Notifications