Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎರಡು ವಸ್ತು ಇದ್ದರೆ ಅಲಸಂದೆ ಪಲ್ಯ ರೆಡಿ..! 5 ನಿಮಿಷದಲ್ಲಿ ಮಾಡಬಹುದು!
ಮಧ್ಯಾಹ್ನದ ಊಟ, ಬೆಳಗ್ಗೆ ತಿಂಡಿಗೆ ಪಲ್ಯ ಇದ್ದರೆ ಊಟದ ಮಜವೇ ಬೇರೆ. ಊಟಕ್ಕೆ ರುಚಿ ಬರುವುದೇ ವಿವಿಧ ಪಲ್ಯಗಳಿಂದ. ಪಲ್ಯ ಇಲ್ಲದೆ ಊಟ ಮಾಡುವುದು ಸಪ್ಪೆಯಾಗುತ್ತದೆ. ಅದ್ರಲ್ಲೂ ಬೇಳೆ, ಕಾಳಿನ ಪಲ್ಯವಂತು ಎಲ್ಲಕ್ಕಿಂತ ರುಚಿಯಲ್ಲಿ ಮೇಲು. ಹಾಗೆ ಆರೊಗ್ಯಕ್ಕೂ ಈ ಬೇಳೆ-ಕಾಳುಗಳು ಅತ್ಯುತ್ತಮ.
ಈ ಕಾಳುಗಳಲ್ಲಿ ಅಲಸಂದೆ ಕಾಳು ಆರೋಗ್ಯಕ್ಕೆ ಬಹಳ ಉತ್ತಮ. ಈ ಅಲಸಂದೆಗಳಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಕಡಿಮೆ ಪ್ರಮಾಣದಲ್ಲಿರುತ್ತವೆ. ಹೀಗಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ. ಜೊತೆಗೆ ಅಲಸಂದೆಯಲ್ಲಿ ಡಯೇಟರಿ ಫೈಬರ್ಗಳು ಹೆಚ್ಚಿನ ಅಂಶದಲ್ಲಿ ಇರುತ್ತವೆ.

ಹೀಗಾಗಿ ನಾವಿಂದು ಅಲಸಂದೆ ಕಾಳು ಬಳಸಿ ಮಾಡುವ ರುಚಿಕರ ಪಲ್ಯಕರ ಕುರಿತು ತಿಳಿದುಕೊಳ್ಳೋಣ. ಈ ಪಲ್ಯದಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ನೋಡೋಣ. ಅಲಸಂದೆಯಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಇದು ರೊಗ ರುಜಿನಗಳು ನಿಮ್ಮನ್ನು ಕಾಡದಂತೆ ತಡೆಯುವ ಶಕ್ತಿಯನ್ನೂ ಸಹ ಹೊಂದಿದೆ.
ಹಾಗಾದ್ರೆ ನಾವಿಂದು ಈ ಅಲಸಂದೆ ಕಾಳಿನ ಪಲ್ಯ ಮಾಡುವುದು ಹೇಗೆ ? ಈ ಪಲ್ಯಕ್ಕೆ ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಯಾವ ಪ್ರಮಾಣದಲ್ಲಿ ವಸ್ತುಗಳ ಬಳಸಬೇಕು ಎಂಬುದನ್ನು ನೋಡೋಣ.
ಅಲಸಂದೆ ಕಾಳಿನ ಪಲ್ಯ ಮಾಡಲು ಬೇಕಾಗುವ ವಸ್ತುಗಳು
ಅಲಸಂದೆ ಕಾಳು
ಈರುಳ್ಳಿ
ಚಿಲ್ಕರವೆ ಸೊಪ್ಪು
ಹಸಿ ಮೆಣಸು
ಸಾಸಿವೆ
ಉಪ್ಪು
ಎಣ್ಣೆ
ಕರಿಬೇವು
ಅಲಸಂದೆ ಕಾಳಿನ ಪಲ್ಯ ಮಾಡುವುದು ಹೇಗೆ?
ಮೊದಲು ಒಂದು ಬೌಲ್ನಲ್ಲಿ ಅಲಸಂದೆ ಕಾಳು ಹಾಕಿ ನೆನೆಸಿಡಬೇಕು. ಸುಮಾರು 8 ಗಂಟೆಗಳ ಕಾಳ ನೆನೆಸಿಡಬೇಕು. ಒಂದು ರಾತ್ರಿ ನೆನೆಯಲು ಇಡಿ. ಈಗ ಕುಕ್ಕರ್ನಲ್ಲಿ ನೀರು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಈ ಬಿಸಿ ನೀರಿಗೆ ನೆನೆಸಿಕೊಂಡಿರುವ ಅಲಸಂದೆ ಕಾಳನ್ನು ಹಾಕಿ ಮುಚ್ಚಳ ಮುಚ್ಚಿ,
ಬಳಿಕ ಸಣ್ಣ ಉರಿಯಲ್ಲಿ 5 ಸೀಟಿ ಹೊಡೆಯಲು ಬಿಡಿ. ಬಳಿಕ ಒಲೆ ಆಫ್ ಮಾಡಿ ಗ್ಯಾಸ್ ಖಾಲಿಯಾಗಲು ಬಿಡಿ. ಇನ್ನೊಂದು ಕಡೆ ಚಿಲ್ಕರವೆ ಸೊಪ್ಪು ಸ್ವಚ್ಛ ಮಾಡಿಕೊಂಡು ಅದನ್ನು ಕತ್ತರಿಸಿಕೊಳ್ಳಿ. ಸಣ್ಣದಾಗಿ ಕತ್ತರಿಸಿಕೊಳ್ಳಿ.
ಈಗ ಕುಕ್ಕರ್ ಮುಚ್ಚಳ ತೆಗೆದು ಅದರಿಂದ ಅಲಸಂದೆ ಕಾಳನ್ನು ತೆಗೆದುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಹಸಿ ಮೆಣಸು, ಕರಿಬೇವು, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಹೆಚ್ಚಿಕೊಂಡಿರುವ ಸೊಪ್ಪನ್ನು ಹಾಕಿಕೊಳ್ಳಿ. ಬಳಿಕ ಸ್ವಲ್ಪ ನೀರು ಹಾಕಿಕೊಂಡಿ ಬೇಯಲು ಬಿಡಿ. 2 ರಿಂದ 3 ನಿಮಿಷ ಬೇಯಲು ಬಿಟ್ಟ ಬಳಿಕ ಇದಕ್ಕೆ ಬೆಂದಿರುವ ಅಲಸಂದೆ ಕಾಳು ಹಾಕಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಬೇಯಲು ಬಿಡಿ. 5 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಈಗ ನಿಮ್ಮ ಮುಂದೆ ಅಲಸಂದೆ ಕಾಳಿನ ಪಲ್ಯ ರೆಡಿಯಾಗಿರುತ್ತದೆ.



Click it and Unblock the Notifications