Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವುದೇ ತಿಂಡಿ ಇರಲಿ, ಊಟಕ್ಕೂ ಈ ಅಲಸಂದೆ ಗ್ರೇವಿ ಮಾಡಿ..! ಬೊಂಬಾಟ್ ರುಚಿ!
ಬೇಳೆ, ಕಾಳು ಆರೋಗ್ಯಕ್ಕೆ ಎಷ್ಟೊಂದು ಉತ್ತಮ ಅನ್ನೋದನ್ನ ಕೇಳಿದ್ದೇವೆ. ಕಾಳುಗಳಲ್ಲಿ ಅತ್ಯಂತ ಹೆಚ್ಚು ಪ್ರೋಟಿನ್, ಫೈಬರ್ ಸಿಗುತ್ತದೆ. ಹೀಗಾಗಿ ಕಾಳಿನ ಸಾರು, ಕಾಳಿನ ಪಲ್ಯ ಸವಿಯುವುದು ಬಹಳ ಒಳ್ಳೆಯದು. ಹಾಗೆ ಮೊಳಗೆ ಬರಿಸಿರುವ ಎಲ್ಲಾ ಕಾಳುಗಳು ನಮ್ಮ ದೇಹಕ್ಕೆ ಬಹಳ ಉತ್ತಮ. ಹಲವು ರೀತಿಯಲ್ಲಿ ಇವು ನಮ್ಮ ಆರೋಗ್ಯ ಕಾಪಾಡಲಿವೆ.
ಅದರಲ್ಲೂ ಈ ಕಾಳುಗಳಿಂದ ನಾವು ಹಲವು ಬಗೆಯ ಖಾದ್ಯ ಮಾಡಬಹುದು. ಅದರಲ್ಲೂ ಕಾಳುಗಳಿಂದ ಮಾಡುವಂತಹ ಗ್ರೇವಿ ಅಂತು ತುಂಬಾನೆ ರುಚಿಕರವಾಗಿರುತ್ತೆ. ಹೀಗಾಗಿ ನಾವಿಂದು ಅಲಸಂದೆ ಕಾಳಿನಿಂದ ಮಾಡುವಂತಹ ಅದ್ಭುತ ರುಚಿಯ ಈ ಗ್ರೇವಿ ಮಾಡಬಹುದು. ಈ ಅಲಸಂದೆ ಕಾಳಿನಲ್ಲಿ ನೀವು ಊಹಿಸದಷ್ಟು ಲಾಭವಿದೆ. ಇವು ಆರೋಗ್ಯಕ್ಕೆ ಬಹಳ ಅಗತ್ಯವಾದ ಪೋಷಕಾಂಶಗಳ ನೀಡುತ್ತದೆ.

ಹೀಗಾಗಿ ನಾವಿಂದು ಈ ಅಲಸಂದೆ ಕಾಳಿನ ಗ್ರೇವಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಗ್ರೇವಿ ಮಾಡುವುದು ಹೇಗೆ? ಮಾಡುವ ಸುಲಭದ ಉಪಾಯವೇನು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸೂಕ್ತ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಲಸಂದೆ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಅಲಸಂದೆ ಕಾಳು- 200 ಗ್ರಾಮ್
- ಜೀರಿಗೆ
- ಕರಿಬೇವಿನ ಎಲೆಗಳು
- ಹಸಿರು ಮೆಣಸಿನಕಾಯಿ - 2
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಮೆಣಸಿನ ಪುಡಿ
- ಧನಿಯಾ ಪುಡಿ
- ಗರಂ ಮಸಾಲಾ
- ಅರಿಶಿನ ಪುಡಿ
- ಟೊಮೆಟೊ ಪೇಸ್ಟ್ )
- ತೆಂಗಿನಕಾಯಿ ಪೇಸ್ಟ್
- ಉಪ್ಪು
- ಕೊತ್ತಂಬರಿ ಸೊಪ್ಪು
- ಎಣ್ಣೆ
ಅಲಸಂದೆ ಗ್ರೇವಿ ಮಾಡುವ ವಿಧಾನವೇನು?
ಮೊದಲು ಈ ಅಲಸಂದೆ ಕಾಳುಗಳನ್ನು ರಾತ್ರಿಯೇ ಒಂದು ಪಾತ್ರೆಗೆ ಹಾಕಿ ನೆನೆಸಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ಗಟ್ಟಿಯಾಗುತ್ತವೆ. ಚೆನ್ನಾಗಿ ನೆಂದಷ್ಟು ಮೃದುವಾಗಿರುತ್ತದೆ. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಅಲಸಂದೆ ಕಾಳು ಹಾಕಿ ನೀರು ಹಾಕಿ ಇದಕ್ಕೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಸೀಟಿ ಹೊಡೆಯಲು ಬಿಡಿ.
2 ಸೀಟಿ ಹೊಡೆಯಲು ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಈಗ ಇನ್ನೊಂದು ಒಲೆಯಲ್ಲಿ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಬಳಿಕ ಜೀರಿಗೆ, ಕರಿಬೇವು, ಹಸಿ ಮೆಣಸು, ಈರುಳ್ಳಿಯನ್ನು ಕತ್ತರಿಸಿ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಸುಮಾರು 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷದ ಬಳಿಕ 2 ಟೊಮೆಟೋವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಹಾಕಿಕೊಳ್ಳಿ ಹಾಗೆ ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಬೇಯಿಸಿಟ್ಟಿರುವ ಅಲಸಂದೆ ಕಾಳನ್ನು ಹಾಕಿಕೊಳ್ಳಿ. ಬೇಕಾದರೆ ಸ್ವಲ್ಪ ನೀರು ಹಾಕಿಕೊಳ್ಳಿ. ಅಲಸಂದೆ ಬೇಯಿಸಿದ ನೀರನ್ನೆ ಬಳಸಿದರೂ ನಡೆಯುತ್ತದೆ. ಬಳಿಕ ಇದಕ್ಕೆ ತೆಂಗಿನ ಕಾಯಿ ತುರಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಅದನ್ನು ಕೂಡ ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಉಪ್ಪು ಹಾಕಿ ಮುಚ್ಚಳ ಮುಚ್ಚಿ 4 ನಿಮಿಷ ಕುದಿಯಲು ಬಿಡಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಂದು ಸುತ್ತು ತಿರುಗಿಸಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅಲಸಂದೆ ಕಾಳಿನ ಗ್ರೇವಿ ರೆಡಿಯಾಗುತ್ತದೆ. ಇದನ್ನೂ ಊಟಕ್ಕೆ, ಚಪಾತಿಗೆ, ದೋಸೆ, ಇಡ್ಲಿ ಯಾವುದೇ ತಿಂಡಿಗೆ ಸವಿಯಬಹುದು. ಒಮ್ಮೆ ಈ ರುಚಿ ನೋಡಿದರೆ ನೀವು ಕೂಡ ಫಿದಾ ಆಗುತ್ತೀರಿ.



Click it and Unblock the Notifications