Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ಟಾಪ್..! ಮನೆಯಲ್ಲೇ ಲೋಕಲ್ ಟೆಸ್ಟ್ ಬೇಕಾ? ಪನ್ನೀರ್ ಮೊಮೊಸ್ ಮಾಡಿ
ಮನೆಯಲ್ಲೇ ರಸ್ತೆ ಬದಿ ಆಹಾರದ ರುಚಿ ಬೇಕಾ? ಇದನ್ನು ಸುಲಭವಾಗಿ ಮಾಡಬಹುದು. ಹೌದು, ನೋಡಲು ಆಕರ್ಷವಾದ ಈ ತಿಂಡಿ ಇತ್ತೀಚೆಗೆ ನೆಚ್ಚಿನ ಖಾದ್ಯವಾಗಿದೆ. ಹಾಗಂತ, ಇದನ್ನು ರಸ್ತೆ ಬದಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದಲ್ಲ. ಹೀಗಾಗಿ, ನೀವು ಮನೆಯಲ್ಲೇ ತಯಾರಿಸಿ ತಿನ್ನುವುದು ಹೆಚ್ಚು ಸೂಕ್ತ. ಹೌದು, ನೀವು ರಸ್ತೆ ಬದಿ ಸಿಗುವ ತಿಂಡಿಯ ಅಭಿಮಾನಿಯಾಗಿದ್ದರೆ, ಅದನ್ನು ಮನೆಯಲ್ಲಿಯೇ ತಿನ್ನಲು ಬಯಸಿದರೆ, ಪನ್ನೀರ್ ಮೊಮೊಸ್ (Paneer Momos) ಉತ್ತಮ ಆಯ್ಕೆ. ಇದನ್ನು ತಯಾರಿಸುವ ವಿಧಾನ ತಿಳಿಯದೇ ಕೆಲವರು ರಸ್ತೆ ಬದಿ ತಿನ್ನುತ್ತಾರೆ. ಬನ್ನಿ, ಮನೆಯಲ್ಲಿಯೇ ಸುಲಭವಾಗಿ ಹೇಗೆ ಪನ್ನೀರ್ ಮೊಮೊಸ್ (Paneer Momos Recipe) ಮಾಡಬಹುದು ಎನ್ನುವುದನ್ನು ತಿಳಿಯೋಣ.
ಬಹುತೇಕ ಜನರು ಹೆಚ್ಚಾಗಿ ಸಂಜೆ ವಾಕಿಂಗ್ಗೆ ಹೋಗುತ್ತಾರೆ. ತಮ್ಮ ಇಡೀ ದಿನದ ಆಯಾಸ ಹೋಗಲಾಡಿಸಲು ಮತ್ತು ಮನಸ್ಸನ್ನು ಉಲ್ಲಾಸಗೊಳಿಸಲು ಇದು ಉತ್ತಮ ಹವ್ಯಾಸ. ಆದರೆ, ಸಂಜೆಯ ವಾತಾವರಣ (ಹವಾಮಾನ) ತಂಪಾಗಿದ್ದರೆ, ನಮಗೆ ರುಚಿ ರುಚಿಯಾಗಿ ಏನನ್ನಾದರೂ ತಿನ್ನಬೇಕು ಎಂಬ ಆಸೆ ಬರುತ್ತದೆ. ಈ ಪರಿಸ್ಥಿತಿಯಲ್ಲಿ, ಬಿಸಿ ಮೊಮೊಸ್ ಸಿಕ್ಕರೆ, ಅದರ ಮಜವೇ ಬೇರೆ. ಹಲವು ಬಾರಿ ಜನರು ಹೊರಗಡೆ ತಿನ್ನಲು ಇಷ್ಟಪಡುವುದಿಲ್ಲ. ಆಗ ಸಮಯದಲ್ಲಿ, ನೀವು ಮನೆಯಲ್ಲಿ ಪನ್ನೀರ್ ಮೊಮೊಸ್ ತಯಾರಿಸಬಹುದು. ಇದನ್ನು ಟೊಮೆಟೊ ಮತ್ತು ಮೆಣಸಿನಕಾಯಿ ಚಟ್ನಿಯೊಂದಿಗೆ ಸವಿಯಬಹುದು.

ಪನ್ನೀರ್ ಮೊಮೊಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಮೈದಾ ಹಿಟ್ಟು
• ಪನ್ನೀರ್
• ಅಡುಗೆ ಎಣ್ಣೆ
• ಉಪ್ಪು
• ಈರುಳ್ಳಿ
• ಕ್ಯಾಪ್ಸಿಕಂ
• ಬೀನ್ಸ್
• ಕಾಳು ಅಥವಾ ಕಪ್ಪು ಮೆಣಸಿನ ಪುಡಿ
• ಶುಂಠಿ
• ಬೆಳ್ಳುಳ್ಳಿ
ಪನ್ನೀರ್ ಮೊಮೊಸ್ ಮಾಡುವ ವಿಧಾನ
ಈಗ ಪನ್ನೀರ್ ಮೊಮೊಸ್ ಮಾಡಲು ಪ್ರಾರಂಭಿಸೋಣ. ಮೊದಲಿಗೆ ಒಂದು ದೊಡ್ಡ ಬಟ್ಟಲು ತೆಗೆದುಕೊಳ್ಳೋಣ. ಅದಕ್ಕೆ 1 ಕಪ್ ಹಿಟ್ಟನ್ನು ಬೆರೆಸಿಕೊಳ್ಳೋಣ. ಸ್ವಲ್ಪ ಉಪ್ಪು ಮತ್ತು ಒಂದು ಚಮಚ ಎಣ್ಣೆ ಸೇರಿಸಿ, ಹಿಟ್ಟನ್ನು ಮಿಕ್ಸ್ ಮಾಡೋಣ. ಈಗ ಹಿಟ್ಟನ್ನು ಮುಚ್ಚಿ ಪಕ್ಕಕ್ಕೆ ಇಡೋಣ. ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡೋಣ. ಈಗ ಫುಲ್ಲಿಂಗ್ ಮಾಡುವ ಸರದಿ. ಮೊದಲು, ಒಂದು ಬಾಣಲೆಯಲ್ಲಿ (ಪ್ಯಾನ್) ಒಂದು ಚಮಚ ಅಡುಗೆ ಎಣ್ಣೆ ಹಾಕಿ, ಅದರಲ್ಲಿ ನುಣ್ಣಗೆ ಕತ್ತರಿಸಿದ ಒಂದು ಈರುಳ್ಳಿ ಹಾಕೋಣ. ಈಗ ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ, ಹುರಿಯೋಣ. ಈಗ ಅದಕ್ಕೆ ಒಂದು ಕತ್ತರಿಸಿದ ಕ್ಯಾಪ್ಸಿಕಂ ಹಾಕೋಣ.

ನೀವು ಇದರಲ್ಲಿ ನಿಮಗೆ ಇಷ್ಟವಾಗುವ ಬೇರೆ ತರಕಾರಿಯನ್ನು ಸೇರಿಸಬಹುದು. ಇದು ಬೆಂದ ಬಳಿಕ, ಅದಕ್ಕೆ ಪನ್ನೀರ್ ಸೇರಿಸೋಣ. ಹಾಗೆಯೇ ಉಪ್ಪು, ಸೋಯಾ ಸಾಸ್ ಮತ್ತು ಕರಿಮೆಣಸು ಮಿಕ್ಸ್ ಮಾಡೋಣ. ಒಂದು ನಿಮಿಷದ ಬಳಿಕ ಗ್ಯಾಸ್ನಿಂದ ಕೆಳಗೆ ಇಳಿಸೋಣ. ಈಗ ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಎಲೆಗಳನ್ನು ಹಾಕೋಣ. ಇದಾದ ಬಳಿಕ, ಈಗ ಮೊಮೊಸ್ ತಯಾರಿಸಬೇಕು.
ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು, ಅವುಗಳನ್ನು ತೆಳುವಾಗಿ ಸುತ್ತಿಕೊಳ್ಳೋಣ. ಪನ್ನೀರ್ ಸ್ಟಫಿಂಗ್ ಅನ್ನು ಮಧ್ಯದಲ್ಲಿ ಇಟ್ಟು ಮತ್ತು ಅದಕ್ಕೆ ಮೊಮೊಸ್ ಆಕಾರ ನೀಡೋಣ. ಈ ರೀತಿ ಎಲ್ಲಾ ಮೊಮೊಗಳನ್ನು ಇದೇ ರೀತಿ ತಯಾರಿಸಬೇಕು. ಈಗ ಒಂದು ಸ್ಟೀಮರ್ ನಲ್ಲಿ ನೀರು ಹಾಕಿ, ಬಿಸಿ ಮಾಡೋಣ. ಸ್ಟೀಮರ್ ತಟ್ಟೆಗೆ ಎಣ್ಣೆ ಸವರಿ ಅದರ ಮೇಲೆ ಮೊಮೊಸ್ ಇಡಿ. 10 ರಿಂದ 15 ನಿಮಿಷಗಳ ಕಾಲ ಹಬೆಯಲ್ಲಿ (ಸ್ಟೀಮ್) ಬೇಯಿಸೋಣ. ಸ್ಟೀಮ್ ಆದ ಬಳಿಕ, ಅದನ್ನು ತೆಗೆಯಬೇಕು. ಇಷ್ಟು ಮಾಡಿದರೆ ಸಾಕು, ಪನ್ನೀರ್ ಮೊಮೊಸ್ ಸಿದ್ಧ. ಇದನ್ನು ಟೊಮೆಟೊ ಮತ್ತು ಮೆಣಸಿನಕಾಯಿ ಚಟ್ನಿಯೊಂದಿಗೆ ಮಕ್ಕಳಿಗೆ ನೀಡಬಹುದು.



Click it and Unblock the Notifications