Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಸಿ ಮೆಣಸು ಹೀಗೆ ಇಟ್ಟರೆ ಎರಡು ತಿಂಗಳಾದರೂ ಹಾಳಾಗಲ್ಲ, ಫ್ರೆಷ್ ಟೇಸ್ಟ್ ಕೊಡುತ್ತೆ
ಕೆಲವರಿಗೆ ಹಸಿ ಮೆಣಸು ಇಲ್ಲ ಎಂದರೆ ಅಡುಗೆ ಮಾಡುವುದು ಸರಿಯೇ ಅನಿಸುವುದಿಲ್ಲ,ಅದರಲ್ಲಿಯೂ ಚಟ್ನಿ, ಪಲ್ಯ ಇವುಗಳನ್ನು ಮಾಡುವಾಗ ಈ ಹಸಿ ಮೆಣಸು ಇಲ್ಲದಿದ್ದರೆ ಸರಿಯಾಗಲ್ಲ, ಇನ್ನು ಚಿತ್ರಾನ್ನ, ಪಲಾವ್ ಇವುಗಳಿಗೆಲ್ಲಾ ಹಸಿ ಮೆಣಸು ಇರಲೇಬೇಕು.
ಈ ಹಸಿ ಮೆಣಸು ತಂದು ಸ್ವಲ್ಪ ದಿನವಾದಾಗ ಬಾಡಲಾರಂಭಿಸುತ್ತದೆ, ಫ್ರಿಡ್ಜ್‌ನಲ್ಲಿಟ್ಟರೂ ವಾರ ಕಳೆಯುತ್ತಿದ್ದಂತೆ ಕೊಳೆತ ರೀತಿಯಲ್ಲಿ ಕಾಣಿಸುವುದು, ಹಸಿ ಮೆಣಸು ತುಂಬಾನೇ ಮೆತ್ತಗಾಗುವುದು ಅಂಥ ಹಸಿ ಮೆಣಸು ಬಳಸಲೂ ಸಾಧ್ಯವಿಲ್ಲ. ಇನ್ನು ಹಸಿ ಮೆಣಸು ಹಾಕಿ ಮಾಡುವ ಅಡುಗೆಗೆ ಒಣ ಮೆಣಸು, ಮೆಣಸಿ ಪುಡಿ ಇದ್ಯಾವುದೂ ಸರಿ ಬರಲ್ಲ, ಬದಲಿಗೆ ಗಾಂಧಾರಿ ಮೆಣಸು ಬಳಸಬಹುದು, ಆದರೆ ಈ ಮೆಣಸು ಕೂಡ ಸಿಗುವುದು ಕಷ್ಟ ಅಲ್ಲದೆ ಹಸಿ ಮೆಣಸಿಗಿಂತ ಹತ್ತು ಪಟ್ಟು ದುಬಾರಿ ಕೂಡ ಹೌದು.
ಆದರೆ ಕೆಲವೊಂದು ಟಿಪ್ಸ್ ಬಳಸಿದರೆ ಹಸಿ ಮೆಣಸು ತಿಂಗಳಾದರೂ ಫ್ರೆಷ್ ಆಗಿರುತ್ತದೆ, ಆ ಟ್ರಿಕ್ಸ್ ಬಗ್ಗೆ ನೋಡೋಣ:

ಹೀಗೆ ಮಾಡಿಟ್ಟರೆ ಹಸಿ ಮನಸು ಎರಡೂ ತಿಂಗಳಿಗಿಂತಲೂ ಹೆಚ್ಚು ಸಮಯ
ಬಳಸಬಹುದು
ನೀವು ಚೆನ್ನಾಗಿರುವ ಹಸಿ ಮೆಣಸು ತಂದು ತೊಳೆದು ಅದರ ತೊಟ್ಟು ಮುರಿಯಬೇಕು, ನಂತರ
ಅದರ ನೀರಿನಂಶ ಹೋಗಲು ರಂಧ್ರಗಳಿರುವ ಪಾತ್ರೆಯಲ್ಲಿ ಹಾಕಿಡಿ ಅಥವಾ ನೀರಿನಂಶ ಹೋಗಲು
ಟವಲ್‌ನಿಂದ ಒರೆಸಲೂ ಬಹುದು, ನಂತರ ನೀವು ಸ್ವಲ್ಪ ಕಲ್ಲುಪ್ಪು ಹಾಕಿ (ಪುಡಿ ಉಪ್ಪು
ಅಲ್ಲ, ಕಲ್ಲುಪ್ಪೇ ಬಳಸಬೇಕು) ರುಬ್ಬಬೇಕು. ನಂತರ ರುಬ್ಬಿದ ಮಿಶ್ರಣವನ್ನು ನೀವು
ಒಂದು ಟಪ್ಪರ್‌ವೇರ್ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಅದರ ಬಾಯಿ ಮಿಚ್ಚಿ
ಫ್ರೀಝರ್‌ನಲ್ಲಿಟ್ಟು ಅಡುಗೆಗೆ ಬಳಸಬಹುದು. ಈ ರೀತಿ ಮಾಡಿದರೆ ಎರಡು ತಿಂಗಳಾದರೂ
ಹಸಿಮೆಣಸು ಟೇಸ್ಟ್ ಅಷ್ಟೇ ಫ್ರೆಷ್ ಆಗಿ ಇರುತ್ತದೆ.
ಇತರ ವಿಧಾನ
ಜಿಪ್ ಇರುವ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿಡಿ
ಈ ವಿಧಾನದಿಂದ ಹಸಿ ಮೆಣಸು ತುಂಬಾ ಸಮಯ ಬಾಳಿಕೆ ಬರುತ್ತದೆ ಹೀಗೆ ಇಡುವ ಮುನ್ನ ಅದರ
ತೊಟ್ಟು ತೆಗೆಯಬೇಕು, ನಂತರ ಅದನ್ನು ಜಿಪ್ ಇರುವ ಪ್ಲಾಸ್ಟಿಕ್‌ನಲ್ಲಿ ಹಾಕಿಟ್ಟು
ಜಿಪ್ ಹಾಕಿಡಿ, ಈ ರೀತಿ ಇಟ್ಟರೆ ನೀವು ತಿಂಗಳವರೆಗೆ ಇಟ್ಟು ಬಳಸಬಹುದು. ಇನ್ನೂ
ಹೆಚ್ಚಿನ ಸಮಯ ಬರಬೇಕೆಂದರೆ ಫ್ರೀಝರ್‌ನಲ್ಲಿಡಬಹುದು.
ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಡಿ
ನೀವು ಹಸಿ ಮೆಣಸು ತೊಳೆದು ಅದರ ನೀರಿನಂಶ ಹೋಗಲು ಸ್ವಲ್ಪ ಹೊತ್ತು ಹರಡಿ ಇಡಿ,
ನಂತರ ಅವುಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ ಮುಚ್ಚಳ ಹಾಕಿ,
ಗಾಳಿಯಾಡಬಾರದು, ಈ ರೀತಿ ಇಟ್ಟರೆ ಎರಡು ವಾರಗಳಿಗಿಂತಲೂ ಹೆಚ್ಚು ಸಮಯ ಫ್ರೆಷ್
ಆಗಿರುತ್ತದೆ.
ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಡಬೇಡಿ
ಕೆಲವರು ಹಸಿ ಮೆಣಸು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಡುತ್ತಾರೆ, ಹೀಗೆ
ಇಡುವುದರಿಂದ ಬೇಗನೆ ಕೊಳೆತು ಹೋಗುವುದು, ಗಾಳಿಯಾಡುವಂತೆ ಹಸಿ ಎಮಣಸು
ಫ್ರಿಡ್ಜ್‌ನಲ್ಲಿಯೂ ಇಡಬಾರದು.
ಹಸಿ ಮೆಣಸು ಹಾಳಾಗಿದೆ ಎಂದು ತಿಳಿಯುವುದು ಹೇಗೆ?
ಹಸಿ ಮೆಣಸಿನ ಬಣ್ಣ ಬದಲಾಗುವುದು, ಅಲ್ಲದೆ ಮೃದುವಾಗುವುದು ಅಲ್ಲದೆ ದುರ್ವಾಸನೆ
ಕೂಡ ಬೀರುವುದು. ಹಾಳಾದ ಹಸಿ ಮೆಣಸು ಅಡುಗೆಗೆ ಬಳಸಿದರೆ ಹೊಟ್ಟೆ ಹಾಳಾಗುವುದು,
ಅವುಗಳನ್ನು ಒಣಗಿಸಲೂ ಸಾಧ್ಯವಿಲ್ಲ, ಬಿಸಾಡಬೇಕಾಗುತ್ತದೆ, ಅದರ ಬದಲಿಗೆ ಹಸಿ
ಮೆಣಸು ಮೇಲಿನಂತೆ ಇಟ್ಟರೆ ವಾರಗಟ್ಟಲೆ ಫ್ರೆಷ್ ಆಗಿರುವುದು.



Click it and Unblock the Notifications