Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಸಾಲೆ ದೋಸೆಯಂತೆಯೇ ಟೇಸ್ಟಿಯಾಗಿರುತ್ತೆ ರಾಗಿ ದೋಸೆ, ಇಡ್ಲಿಯೂ ಮಾಡಬಹುದು
ನೀವು ರಾಗಿ ದೋಸೆ ಅಥವಾ ರಾಗಿ ಇಡ್ಲಿ ಮಾಡಿಲ್ಲ ಎಂದಾದರೆ ಟ್ರೈ ಮಾಡಲೇಬೇಕಾದ ಬ್ರೇಕ್‌ಫಾಸ್ಟ್ ಇದಾಗಿದೆ. ಅಧಿಕ ಪೌಷ್ಠಿಕಾಂಶ ಬ್ರೇಕ್‌ಫಾಸ್ಟ್ ರೆಸಿಪಿ ಇದಾಗಿದ್ದು ಮಕ್ಕಳಿಂದ ಹಿಡಿದು ಎಲ್ಲರಿಗೂ ಒಳ್ಳೆಯದು. ಅದರಲ್ಲಿಯೂ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂಥ ರೆಸಿಪಿ ಇದಾಗಿದೆ.
ಸಾಮಾನ್ಯವಾಗಿ ಮನೆಯಲ್ಲಿ ಮಧುಮೇಹಿಗಳಿದ್ದರೆ ಅವರಿಗೊಂದು ಆಹಾರ ತಯಾರಿಸಬೇಕು, ಇತರರಿಗೆ ಬೇರೆ ಆಹಾರ ತಯಾರಿಸಬೇಕು, ಎರಡೆರಡು ಕೆಲಸ, ಆದರೆ ಈ ಬಗೆಯ ಆಹಾರ ಮಾಡಿದರೆ ಎಲ್ಲರಿಗೂ ಒಳ್ಳೆಯದು ಅಲ್ಲದೆ ಈ ಆಹಾರ ತುಂಬಾ ರುಚಿಯಾಗಿರುವುದರಿಂದ ಎಲ್ಲರೂ ಇಷ್ಟಪಟ್ಟು ತಿಂತಾರೆ ಕೂಡ.

ರಾಗಿ ದೋಸೆಯಾಗಲಿ, ರಾಗಿ ಇಡ್ಲಿಯಾಗಲಿ ನೀವು ಬಿಸಿ ಬಿಸಿ ಇರುವಾಗಲೇ ತಿನ್ನಲು ಸೂಪರ್, ಮಸಾಲೆ ದೋಸೆ ತಣ್ಣಗಾದ ಮೇಲೆ ತಿನ್ನಲು ಹೇಗೆ ಇಷ್ಟವಾಗುವುದಿಲ್ಲವೋ ಅದೇ ರೀತಿ ಇವುಗಳನ್ನು ಕೂಡ ತಣ್ಣಗಾದ ಮೇಲೆ ತಿನ್ನಲು ಇಷ್ಟವಾಗಲ್ಲ, ಆದ್ದರಿಂದ ಬಿಸಿ ಬಿಸಿ ಇರುವಾಗಲೇ ಸವಿಯಿರಿ.
ಬೇಕಾಗುವ ಸಾಮಗ್ರಿ
ಒಂದೂವರೆ ಕಪ್ ರಾಗಿ
ಅರ್ಧ ಕಪ್ ಉದ್ದಿನ ಬೇಳೆ
ಅನ್ನ 1/4 ಕಪ್
ರುಚಿಗೆ ತಕ್ಕ ಉಪ್ಪು
ತುಪ್ಪ / ಎಣ್ಣೆ
ಮಾಡುವ ವಿಧಾನ:
- ರಾಗಿಯನ್ನು 8-10 ನೆನೆ ಹಾಕಿ
- ಉದ್ದಿನ ಬೇಳೆ 8-10 ನೆನೆ ಹಾಕಿ
- ನಂತರ ರಾಗಿಯನ್ನು ತೊಳೆದು ನುಣ್ಣನೆ ರುಬ್ಬಿ
- ಉದ್ದಿನ ಬೇಳೆಯನ್ನು ನುಣ್ಣನೆ ರುಬ್ಬಿ
- ನಂತರ ಅನ್ನವನ್ನು ರುಬ್ಬಿ, ರುಚಿಗೆ ತಕ್ಕ ಉಪ್ಪು ಸೇರಿಸಿ
- ಈ ಎಲ್ಲಾವನ್ನು ಮಿಶ್ರ ಮಾಡಿ 8 ಗಂಟೆ ಹುದುಗು ಬರಲು ಬಿಡಿ
- ನಂತರ ದೋಸೆ ತವಾ ಬಿಸಿ ಮಾಡಿ, ಎಣ್ಣೆ ಸವಿಯಿರಿ ದೋಸೆ ಹುಯ್ಯಿರಿ.
- ನಂತರ ದೋಸೆಗೆ ತುಪ್ಪ ಹಾಕಿ ಬಿಸಿ ಬಿಸಿ ದೋಸೆ ಚಟ್ನಿ ಜೊತೆ ಸರ್ವ್ ಮಾಡಿ.
ನೀವು ರಾಗಿ ದೋಸೆಯನ್ನು ಕೆಂಪು ಚಟ್ನಿ ಜೊತೆ ಅಥವಾ ಟೊಮೆಟೊ ಚಟ್ನಿ ಜೊತೆ ಸರ್ವ್ ಮಾಡಿದರೆ ತಿನ್ನಲು ಸೂಪರ್ ಆಗಿರುತ್ತದೆ.
ರಾಗಿ ಇಡ್ಲಿಯನ್ನೂ ಮಾಡಬಹುದು
ರಾಗಿ ಇಡ್ಲಿ ಮಾಡಲು ಇದೇ ಸಾಮಗ್ರಿ ಸಾಕು
ಇಡ್ಲಿಗೆ ರುಬ್ಬುವಾಗ ತುಂಬಾ ನುಣ್ಣನೆ ರುಬ್ಬಬೇಡಿ, ಸ್ವಲ್ಪ ತರಿತರಿಯಾಗಿ
ರುಬ್ಬಿ, ನಂತರ ಹಿಟ್ಟು ಸ್ವಲ್ಪ ಗಟ್ಟಿಯಾಗಿರಲಿ. ರಾಗಿ ಇಡ್ಲಿ ಕೂಡ ಮೃದುವಾಗಿ
ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications