Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಗ್ಯಾಸ್‌ನಲ್ಲಿಯೇ ಮಾಡಬಹುದಾದ ಸರಳ ಕೇಕ್ ರೆಸಿಪಿ
ಅಡುಗೆ ಪ್ರಿಯರಲ್ಲಿ ಅನೇಕರಿಗೆ ಕೇಕ್ ಒಮ್ಮೆ ಟ್ರೈ ಮಾಡಬೇಕು ಎಂದು ಅನಿಸಿರುತ್ತದೆ, ಆದರೆ ಅದಕ್ಕೆ ಬಳಸುವ ಸಾಮಗ್ರಿಗಳೇನು, ಒಂದು ವೇಳೆ ಯೂಟ್ಯೂಬ್ ನೋಡಿ ಅವರು ಹೇಳಿದ ಅಷ್ಟೆಲ್ಲಾ ಸಾಮಗ್ರಿ ತಂದು ಮಾಡಿದರೆ ಸರಿ ಬರುತ್ತಾ ಎಂಬೆಲ್ಲಾ ನೂರೆಂಟು ಡೌಟ್. ಜೊತೆಗೆ ಮನೆಯಲ್ಲಿ ಓವನ್ ಇಲ್ಲದಿದ್ದರೆ ಹೇಗಪ್ಪಾ ಗ್ಯಾಸ್‌ನಲ್ಲಿ ಮಾಡುವುದು ಎಂಬ ಡೌಟ್, ಹೀಗಾಗಿ ಕೇಕ್ ಟ್ರೈ ಮಾಡಬೇಕೆಂದು ಬಯಸಿದರೂ ಸುಮ್ಮನೆ ಏಕೆ ಕಷ್ಟಪಡಬೇಕು ಎಂದು ಕೇಕ್ ಮಾಡುವ ಪ್ಲ್ಯಾನ್ ಅಲ್ಲಿಗೇ ಡ್ರಾಪ್ ಮಾಡಿ ಬಿಟ್ಟಿರುತ್ತೀವಿ.

ಆದರೆ ನಾವಿಲ್ಲಿ ನೀಡಿರುವ ಕೇಕ್ ರೆಸಿಪಿ ಇದೆಯೆಲ್ಲಾ ನಿಮ್ಮೆಲ್ಲ ಡೌಟ್‌ಗಳನ್ನು ಬದಿಗಿಟ್ಟು ಟ್ರೈ ಮಾಡಿ ಸಕ್ಸಸ್ ಆಗುವಿರಿ. ಇದು ಪೇಸ್ಟ್ರಿಯಲ್ಲ, ಸಾಧಾರಣ ಕೇಕ್ ಅಥವಾ ಪ್ಲಮ್ ಕೇಕ್ ರೀತಿಯಲ್ಲಿ ಮಾಡುವ ವಿಧಾನವಾಗಿದೆ. ಇದನ್ನು ಸುಲಭವಾಗಿ ಮಾಡಬಹುದಾಗಿದ್ದು ಸಂಜೆ ಸ್ನ್ಯಾಕ್ಸ್ ಆಗಿ ಬಸಬಹುದು. ಬನ್ನಿ ಗ್ಯಾಸ್ ಮತ್ತು ಕುಕ್ಕರ್ ಬಳಸಿ ಕೇಕ್ ಮಾಡುವುದು ಹೇಗೆ ತಿಳಿಯೋಣ:
Recipe By: Reena
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
2 ಓರಿಯೋ ಅಥವಾ ಹ್ಯಾಪಿ ಬಿಸ್ಕೆಟ್
2 ಪಾರ್ಲೆ ಬಿಸ್ಕೆಟ್
1 ಕಪ್ ಸಕ್ಕರೆ (ಪುಡಿ ಮಾಡಿದ್ದು)
4 ಮೊಟ್ಟೆ
ಸ್ವಲ್ಪ ವೆನಿಲ್ಲಾ ಎಸೆನ್ಸ್ (1 ಚಮಚ)
1 ಕಪ್ ಎಣ್ಣೆ
1 ಚಮಚ ಅಡುಗೆ ಸೋಡಾ
1 ಚಮಚ ಬೇಕಿಂಗ್ ಪೌಡರ್
ಬೇಕಿಂಗ್ ಪಾರ್ಚಮೆಂಟ್ ಪೇಪರ್ (ಎ ಫೋರ್ ಶೀಟ್ ಆದರೂ ಆಗುತ್ತೆ)
ಬೇಯಿಸಲು
ಕುಕ್ಕರ್
ದಪ್ಪ ತಳದ ತವಾ
ಡ್ರೈ ಫ್ರೂಟ್ಸ್
-
ಮಾಡುವುದು ಹೇಗೆ
* ಮೊದಲಿಗೆ ಸಕ್ಕರೆಯನ್ನು ಪುಡಿ ಮಾಡಿ ಒಂದು ಬೌಲ್‌ಗೆ ಹಾಕಿ.
* ಈಗ ಬಿಸ್ಕೆಟ್ಸ್ ಮಿಕ್ಸಿಯಲ್ಲಿ ಪುಡಿ ಮಾಡಿ ಆ ಬೌಲ್ ಸೇರಿಸಿ.
* ಈಗ ಮೊಟ್ಟೆ, ಅಡುಗೆ ಸೋಡಾ, ಬೇಕಿಂಗ್ ಪೌಡರ್, ಒಂದು ಚಿಕ್ಕ ಕಪ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಿಮಗೆ ತುಂಬಾ ಹೊತ್ತು ಮಿಕ್ಸ್ ಮಾಡಲು ಸಾಧ್ಯವಿಲ್ಲ ಎಂದಾರೆ ಮಿಕ್ಸಿಯಲ್ಲಿ ರುಬ್ಬಿ.
*ಈಗ ಕುಕ್ಕರ್‌ನ ತಳಕ್ಕೆ ಎಣ್ಣೆ ಸವರಿ
* ಬೇಕಿಂಗ್ ಪಾರ್ಚ್‌ಮೆಂಟ್ ಪೇಪರ್ ಅಥವಾ ಎ 4 ಪೇಪರ್‌ಗೆ ಎಣ್ಣೆ ಸವರಿ.
* ಈಗ ಗ್ಯಾಸ್ ಉರಿ ಮೇಲೆ ತವಾ ಇಡಿ ಅದು ಸ್ವಲ್ಪ ಬಿಸಿಯಾದ ಮೇಲೆ ಗ್ಯಾಸ್ ಉರಿ ಸಿಮ್ ಮಾಡಿ ಅದರಲ್ಲಿ ಕುಕ್ಕರ್ ಇಟ್ಟು, ಕುಕ್ಕರ್ ಕೆಳಗಡೆ ಪೇಪರ್ ಇಡಿ, ಅದರ ಮೇಲೆ ಮಿಶ್ರಣ ಸುರಿಯಿರಿ, ಮೇಲುಗಡೆ ಡ್ರೈ ಫ್ರೂಟ್ಸ್ ಉದುರಿಸಿ.
* ಈಗ ಕುಕ್ಕರ್ ಮುಚ್ಚಿ, ವಿಶಲ್ ಹಾಕಬೇಡಿ.
* ಕಡಿಮೆ ಉರಿಯಲ್ಲಿ 25 ನಿಮಿಷ ಬೇಯಿಸಿ, ನಂತರ ಕುಕ್ಕರ್ ಮುಚ್ಚಳ ತೆಗೆದು ಒಂದು ಸ್ಪೂನ್‌ನಲ್ಲಿ ಮೆಲ್ಲನೆ ಚುಚ್ಚಿ ನೋಡಿ. ಸ್ಪೂನ್‌ಗೆ ಅಂಟದಿದ್ದರೆ ಕೇಕ್ ಬೆಂದಿದೆ ಎಂದರ್ಥ, ಅಂಟಿದರೆ ಮತ್ತೆ 5-6 ನಿಮಿಷ ಬೇಯಿಸಿ.
* ಈಗ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.
* ನಂತರ ಕೇಕ್ ಅನ್ನು ಪೇಪರ್ ಜೊತೆಗೆ ಮೇಲಕ್ಕೆ ಎತ್ತಿ ತಟ್ಟೆಯಲ್ಲಿ ಹಾಕಿ, ಪೇಪರ್ ತೆಗೆದು ಕತ್ತರಿಸಿ.
ಈ ಕೇಕ್ ಪ್ಲಮ್ ಕೇಕ್‌ನಂತೆ ತುಂಬಾ ರುಚಿಯಾಗಿರುತ್ತೆ.
- ನೀವು ಇದನ್ನು ಮೈಕ್ರೋವೇವ್‌ನಲ್ಲಿ ಮಾಡುವುದಾದರೆ ಮೊದಲು 370 ಡಿಗ್ರಿFಗೆ ಪ್ರೀ ಹೀಟ್ ಮಾಡಿ, ನಂತರ 10 ನಿಮಿಷ ಬೇಯಿಸಿ.
- People - 4
- ಕೊಬ್ಬು - 148ಗ್ರಾಂ
- ಪ್ರೊಟೀನ್ - 63 ಗ್ರಾಂ



Click it and Unblock the Notifications