Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್ ಲೀಕ್ ಆಗಿ ಸ್ಟೌವ್ ಗಲೀಜಾಗುವುದು ತಡೆಗಟ್ಟುವುದು ಹೇಗೆ?
ಅಡುಗೆ ಮನೆಯಲ್ಲಿ ದೊಡ್ಡ ಸಮಸ್ಯೆಯೆಂದರೆ ಗ್ಯಾಸ್ ಸ್ಟೌವ್ ಕ್ಲೀನ್ ಮಾಡುವುದು. ಅದರಲ್ಲಿಯೂ ಕುಕ್ಕರ್ ಲೀಕೇಜ್ ಇದ್ದರಂತೂ ಮುಗೀತು, ಅನ್ನ-ಸಾರು ಮಾಡುವಾಗ ಕುಕ್ಕರ್‌ನಲ್ಲಿರುವ ನೀರಿನಂಶ ಹೊರಚೆಲ್ಲಿ ಗ್ಯಾಸ್ ಸ್ಟೌವ್ ತುಂಬಾ ಗಲೀಜಾಗುವುದು. ಹೀಗಾದರೆ ಅಡುಗೆ ಮಾಡುವುದೇ ದೊಡ್ಡ ಸವಾಲಾಗುತ್ತದೆ.
ಕುಕ್ಕರ್‌ನಿಂದ ನೀರಿನಂಶ ಹೊರಗಡೆ ಚೆಲ್ಲುವುದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಕುಕ್ಕರ್ ವಿಶಲ್ ಹಾಕುವ ಮೊದಲು ಟಿಶ್ಯೂ ಅನ್ನು ಕುಕ್ಕರ್‌ನ ಮೇಲ್ಭಾಗದಲ್ಲಿ ಹಾಕಿ ನಂತರ ವಿಶಲ್ ಹಾಕಿ, ಅನ್ನ ಅಥವಾ ಸಾರು ಮಾಡುವಾಗ ದ್ರವಾಂಶ ಹೊರಬಂದರೆ ಟಿಶ್ಯೂ ಹೀರಿಕೊಳ್ಳುತ್ತದೆ.
ತೆಂಗಿನ ಚಿಪ್ಪಿನ ಟ್ರಿಕ್
ತೆಂಗಿನಕಾಯಿ ಚಿಪ್ಪಿನ ಕಣ್ಣು ರಂಧ್ರ ಮಾಡಿ, ಅದು ವಿಶಲ್ ಹಾಕಿವ ಸ್ಟೀಲ್ಗೆ
ಸರಿಯಾಗಿರಬೇಕು, ದೊಡ್ಡ ರಂಧ್ರ ಮಾಡಬೇಡಿ, ಈಗ ಚಿಪ್ಪು ಹಾಕಿ ಬಳಿಕ ವಿಶಲ್ ಹಾಕಿ.
ಹೀಗೆ ಮಾಡಿದಾಗ ಕುಕ್ಕರ್‌ನಿಂದ ಹೊರಬಂದ ನೀರಿನಂಶ ಚಿಪ್ಪುವಿನಲ್ಲಿ
ಸಂಗ್ರಹವಾಗುವುದು.
ಇನ್ನು ಕೆಲವರು ಈ ಟ್ರಿಕ್ ಟ್ರೈ ಮಾಡುತ್ತಾರೆ
ಸಾರಿಗೆ ಇಡುವಾಗ ಅದರೊಳಗಡೆ ಒಂದು ಚಿಕ್ಕ ಬೌಲ್ ಇಡುತ್ತಾರೆ, ಇದು ಹೆಚ್ಚಿನ
ದ್ರವಾಂಶ ಹೊರಬರುವುದಿಲ್ಲ, ಆದರೆ ಈ ವಿಧಾನಕ್ಕಿಂತ ಮೇಲಿನ ಎರಡು ಟಿಪ್ಸ್ ತುಂಬಾನೇ
ಸಹಕಾರಿ.
ಈ ಬಗ್ಗೆ ಕೂಡ ಗಮನಹರಿಸಬೇಕು:
ಕುಕ್ಕರ್ ರಬ್ಬರ್ ಚೆಕ್ ಮಾಡಿ
ರಬ್ಬರ್ ಸಡಿಲವಾಗಿದ್ದರೆ ನೀರು ಹೆಚ್ಚು ಹೊರ ಚೆಲ್ಲುತ್ತದೆ. ನೀವು ಕುಕ್ಕರ್
ರಬ್ಬರ್ ತುಂಬಾ ಸಮಯ ಬರಬೇಕೆಂದರೆ ನೀವು ಅಡುಗೆ ಮಾಡಿದ ಬಳಿಕ ರಬ್ಬರ್ ತೆಗೆದು
ತಣ್ಣೀರಿನಲ್ಲಿ ಹಾಕಿಟ್ಟರೆ ಒಳ್ಳೆಯದು, ಈ ರೀತಿ ಮಾಡುವುರಿಂದ ನೀರು ಹೊರ
ಚೆಲ್ಲುವುದನ್ನು ತಡೆಗಟ್ಟಬಹುದು.
ವಿಶಲ್ ಸರಿಯಾಗಿ ಇದೆಯೇ ನೋಡಿ
ವಿಶಲ್‌ನಲ್ಲಿ ಆಹಾರ ಸಿಕ್ಕಾಕಿಕೊಂಡಿದ್ದರೆ ವಿಶಲ್ ಚೆನ್ನಾಗಿ ಬರಲ್ಲ, ನೀವು
ಬ್ರಷ್ ಹಾಕಿ ತಿಕ್ಕಿ ತೊಳೆದಿಡಿ, ಹೀಗೆ ಮಾಡುವುದರಿಂದ ವಿಶಲ್‌ನಿಂದ ಗಾಳಿ
ಸರಿಯಾಗಿ ಹೋಗುವುದು.
ಕುಕ್ಕರ್ ಲಿಡ್‌ಗೆ ಸ್ವಲ್ಪ ಎಣ್ಣೆ ಸವರಿ
ಕುಕ್ಕರ್ ಲಿಡ್‌ಗೆ ಸ್ವಲ್ಪ ಎಣ್ಣೆ ಸವರಿದರೆ ಹೆಚ್ಚು ನೀರಿನಂಶ ಹೊರಗೆ ಹೋಗಲ್ಲ
ಎಂದು ಹೇಳಲಾಗುವುದು.
ಕುಕ್ಕರ್‌ನಲ್ಲಿ ತುಂಬಾ ಆಹಾರ, ನೀರು ಹಾಕಬೇಡಿ
ಕುಕ್ಕರ್‌ನಲ್ಲಿ ಹ್ಯಾಂಡಲ್ ಸ್ಕ್ರೂವ್ ಇರುತ್ತೆ ಅಲ್ಲಿಯವರೆಗೆ ಮಾತ್ರ ಅದರ ಮೇಲೆ
ಹಾಕಿದರೆ ನೀರು ಹೊರಚೆಲ್ಲುತ್ತದೆ.



Click it and Unblock the Notifications