ಹೀಗೆ ಪಾಸ್ತಾ ಮಾಡಿದರೆ ಯಾವ ಸಾಸ್, ರೆಡಿಮೇಡ್‌ ಮಸಾಲೆ ಬೇಕಾಗಿಲ್ಲ, ರುಚಿ ತುಂಬಾ ಚೆನ್ನಾಗಿರುತ್ತೆ

Posted By:

ಮಕ್ಕಳು ಅಮ್ಮಾ ಪಾಸ್ತಾ ಮಾಡು ಅಂದಾಗ ಈ ಪಾಸ್ತಾ-ಗೀಸ್ತಾವೆಲ್ಲಾ ನಮಗೆ ಮಾಡೋಕೆ ಬರಲ್ಲ ಎಂದು ಹೇಳಬೇಡಿ, ಅಮ್ಮಾ.....ನೀನು ಮಾಡಿದ ಪಾಸ್ತಾ ಇದೆಯಲ್ಲಾ ಸೂಪರ್ ಅಮ್ಮಾ ಅನ್ನುವಂತೆ ನೀವು ಯಾವುದೇ ಹೊರಗಡೆ ಸಾಸ್‌ ಬಳಸದೆ ಪಾಸ್ತಾ ಮಾಡಬಹುದು. ಇದೊಂದು ಸುಲಭದ ರೆಸಿಪಿಯಾಗಿದೆ, ಅಲ್ಲದೆ ಹೀಗೆ ಪಾಸ್ತಾ ಸೂಪರ್ ಆಗಿರುತ್ತೆ, ಇನ್ನು ಕ್ರೀಮಿ-ಕ್ರೀಮಿಯಾಗಿ ಬೇಕೆಂದರೆ ಚೀಸ್‌ ಕೂಡ ಸೇರಿಸಿದರೆ ಇನ್ನೂ ಸೂಪರ್, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

how to prepare pasta

ಬೇಕಾಗುವ ಸಾಮಗ್ರಿ
ಪಾಸ್ತಾ 1 ಕಪ್

ಪೇಸ್ಟ್ ಮಾಡಲು
1 ಕ್ಯಾರೆಟ್
1 ಟೊಮೆಟೊ
1 ಕ್ಯಾಪ್ಸಿಕಂ
1 ಈರುಳ್ಳಿ 1 ಚಮಚ

ಪಾಸ್ತಾ ರೆಡಿ ಮಾಡುವಾಗ
ಎಣ್ಣೆ 3-4 ಚಮಚ
1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
1 ಚಮಚ ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಕ್ಯಾಪ್ಸಿಕಂ (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಚಮಚ ಕಾಳು ಮೆಣಸಿನ ಪುಡಿ
1 ಚಮಚ ಒರೆಗ್ನೋ ಪುಡಿ
1 ಚಮಚ ಚಿಲ್ಲಿ ಫ್ಲೇಕ್ಸ್
ಚೀಸ್
ಮಾಡಿಟ್ಟ ಪೇಸ್ಟ್
ಪಾಸ್ತಾ

ಇದಕ್ಕೆ ತರಕಾರಿ ಕೂಡ ಹಾಕುವುದರಿಂದ ತರಕಾರಿ ಕೂಡ ಮಕ್ಕಳ ಹೊಟ್ಟೆ ಸೇರುತ್ತೆ.

ಸ್ಟೆಪ್ 1
ಮೊದಲಿಗೆ ನೀವು ಎಷ್ಟು ಬೇಕೋ ಅಷ್ಟು ಪಾಸ್ತಾ ತಗೊಂಡು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ (7-8 ನಿಮಿಷ ಬೆಂದರೆ ಸಾಕು.
ಬೆಂದ ಮೇಲೆ ಅದಕ್ಕೆ ನೀರು ಸೇರಿಸಿ ಸೋಸಿ, ಹೀಗೆ ಮಾಡುವುದರಿಂದ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.

ಸ್ಟೆಪ್ 2

  • ಪಾತ್ರೆ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ, ಅದಕ್ಕೆ ಒಂದು ಈರುಳ್ಳಿ ಕತ್ತರಿಸಿ ಹಾಕಿ ಸೌಟ್‌ನಿಂದ ಆಡಿಸುತ್ತಾ 2-3 ನಿಮಿಷ ಬೇಯಿಸಿ.
  • ಈಗ ಹಸಿಮೆಣಸು ಸೇರಿಸಿ
  • ನೀವು ಒಂದು ಕ್ಯಾರೆಟ್, 1 ಕ್ಯಾಪ್ಸಿಕಂ 1 ಟೊಮೆಟೊ (ಎಲ್ಲಾ ಕತ್ತರಿಸಿದ್ದು) ಸೇರಿಸಿ, 5 ಗೋಡಂಬಿ, 5 ಬಾದಾಮಿ ಸೇರಿಸಿ 5-6 ನಿಮಿಷ ಫ್ರೈ ಮಾಡಿ. ನಂತರ ತರಕಾರಿ ಬೇಯಲಿ (ಬಯಲು ಸ್ವಲ್ಪ ನೀರು ಸೇರಿಸಿ)
  • ಈಗ ಬೆಂದ ತರಕಾರಿ, ಸ್ವಲ್ಪ ನೀರು-ನೀರಿದ್ದರೂ ತೊಂದರೆಯಿಲ್ಲ, ಎಲ್ಲಾ ಮಿಕ್ಸಿ ಜಾರ್‌ಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ
  • ಈಗ ನೀವು ಗ್ಯಾಸ್‌ ಸ್ಟೌವ್‌ ಮೇಲೆ ಒಂದು ಪಾತ್ರೆ ಇಟ್ಟು ಬಿಸಿ ಮಾಡು, ಪಾತ್ರೆ ಬಿಸಿಯಾದಾಗ 3-4 ಚಮಚ ನೀರು ಹಾಕಿ.
  • ಈಗ ನೀವು ಚಿಕ್ಕದಾಗಿ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿ.
  • ಈಗ ನೀವು ಚಿಕ್ಕದಾಗಿ ಕತ್ತರಿಸಿದ ಕ್ಯಾಪ್ಸಿಕಂ ಬೇಕಿದ್ದರೆ ಸೇರಿಸಬಹುದು.
  • ಈಗ ನೀವು ರುಬ್ಬಿಟ್ಟ ಪೇಸ್ಟ್ ಸೇರಿಸಿ
  • ಈಗ ನೀವು ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ
  • ಅರ್ಧ ಚಮಚ ಒರೆಗ್ನೋ ಪುಡಿ (ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುತ್ತೆ)
  • ಚಿಲ್ಲಿ ಫ್ಲೇಕ್ಸ್ 1 ಚಮಚಸೇರಿಸಿ
  • (ಒರೆಗ್ನೋ, ಚಿಲ್ಲಿ ಫ್ಲೇಕ್ಸ್ ಇಲ್ಲಾಂದ್ರೆ ಬಳಸದೆಯೂ ಇರಬಹುದು)
  • ಒಂದು ಕುದಿ ಬಂದ ತಕ್ಷಣ ಇದಕ್ಕೆ ಬೇಯಿಸಿಟ್ಟ ಪಾಸ್ತಾ ಸೇರಿಸಿ ಮಿಕ್ಸ್ ಮಾಡಿ, ಉಪ್ಪು ಸರಿಯಾಗಿದೆಯೇ ನೋಡಿ, ಚೀಸ್‌ ಸೇರಿಸಿ, ಚೀಸ್‌ ಕರಗುವವರೆಗೆ ಬೇಯಸಿದರೆ ರುಚಿಯಾದ ಪಾಸ್ತಾ ರೆಡಿ.
[ of 5 - Users]
Story first published: Wednesday, January 22, 2025, 20:27 [IST]
X
Desktop Bottom Promotion