Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶೀತ, ಕೆಮ್ಮು ಯಾವುದಿದ್ರೂ ಈ ಹುರುಳಿ ಕಾಳಿನ ಸಾರು ಮಾಡಿ.! ಮಾಡೋದು ಹೇಗೆ?
ನಿತ್ಯವೂ ಬದಲಾಗುತ್ತಿರುವ ಹವಾಮಾನವು ಒಂದಲ್ಲಾ ಒಂದು ರೀತಿಯ ಅನಾರೋಗ್ಯ ಉಂಟು ಮಾಡುತ್ತಲೇ ಇರುತ್ತೆ. ಆಗಾಗ ಮಳೆ, ಚಳಿ, ಬಿಸಿಲು ಎಲ್ಲಾ ಸೇರಿ ದೇಹದ ಸಮತೋಲನ ಹಾಳಾಗುವ ಜೊತೆಗೆ ಶೀತ, ಕೆಮ್ಮು, ಜ್ವರ, ಗಂಟಲು ನೋವು, ಕಫ ಕಟ್ಟುವುದು ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ನಾದು ಎದುರಾಗುತ್ತಿರುತ್ತೇವೆ. ಈ ಸಮಸ್ಯೆಗಳಿಗೆ ಮನೆಯಲ್ಲೇ ಅದರಲ್ಲೂ ನಾವು ಸವಿಯುವ ಆಹಾರದಲ್ಲೇ ಪರಿಹಾರ ಕೂಡ ಇರುತ್ತೆ.
ಶೀತ, ಕೆಮ್ಮು ಬಂದಾಗ ಕಷಾಯ ಮಾಡಿ ಕುಡಿಯುವುದು ಕಾಮನ್, ಅದೇ ರೀತಿ ಇಂತಹ ಸಣ್ಣ ಪುಟ್ಟ ಸಮಸ್ಯೆಯ ನಿವಾರಣೆಗಾಗಿ ಮನೆಯಲ್ಲೇ ನಾವು ಹುರುಳಿಕಾಯಿಯ ಸಾರು ಮಾಡಿ ಸವಿಯಬಹುದು. ಹುರುಳಿ ಕಾಳು ಆರೋಗ್ಯಕ್ಕೆ ಬಹಳ ಉತ್ತಮವಾದ ಕಾಳು. ಇದರಲ್ಲಿ ಅತ್ಯಧಿಕ ಫೈಬರ್ ಇರಲಿದೆ. ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಕಾರಣ ಇದು ತೂಕ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡಲಿದೆ.

ಹುರುಳಿಕಾಳಿನಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಕ್ಯಾಲ್ಸಿಯಂ ಅಧಿಕವಾಗಿದೆ ಇದರಿಂದ ಮೂಳೆಗಳು ಬಲವಾಗಲು ಕಾರಣವಾಗುತ್ತದೆ. ಇದು ರೋಗ ನಿರೋಧಕ ಶಕ್ತಿಗೂ ಬಹಳ ಉತ್ತಮವಾಗಿದ್ದು, ಹೀಗಾಗಿ ಜ್ವರ, ಶೀತ, ಕೆಮ್ಮು, ನೆಗಡಿ ಆದಾಗ ಈ ಹುರುಳಿಯ ಸಾರು ಮಾಡಿ ಸವಿದರೆ ಖಂಡಿತ ನಿವಾರಣೆಯಾಗುತ್ತದೆ. ಹೀಗಾಗಿ ನಾವಿಂದು ಈ ಹುರುಳಿ ಸಾರು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹುರುಳಿ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ತಯಾರಿ ಮೊದಲೇ ಮಾಡಿರಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುರುಳಿ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹುರುಳಿ ಕಾಳು
- ಈರುಳ್ಳಿ
- ಟೊಮೆಟೋ
- ಸಾಂಬಾರ್ ಪುಡಿ
- ಬೆಳ್ಳುಳ್ಳಿ
- ಹುಣಸೆ ಹಣ್ಣು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ಉಪ್ಪು
- ಎಣ್ಣೆ
ಹುರುಳಿ ಸಾರು ಮಾಡುವ ವಿಧಾನವೇನು?
ಮೊದಲು ಹುಣಸೆ ಹುಳ್ಳಿಯನ್ನು ಕೂಡ ನೆನೆಸಿಡಬೇಕು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಹುರುಳಿ ಕಾಳುಗಳ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 5 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ, ಅನಂತರ ಸಾಸಿಗೆ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ.
ಈಗ ಕರಿಬೇವು, ಈರುಳ್ಳಿ ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು. ಹಾಗೆ ಸಣ್ಣದಾಗಿ ಹೆಚ್ಚಿರುವ ಟೊಮೆಟೋ ಹಾಕಿ ಇದಕ್ಕೆ ಉಪ್ಪು ಸಹ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಈ ವೇಳೆ ಸಾಂಬಾರ್ ಪುಡಿಯನ್ನು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. 3 ಸ್ಪೂನ್ ಹಾಕಿಕೊಂಡರೆ ಸಾಕಾಗುತ್ತದೆ. ಚೆನ್ನಾಗಿ ಬೆರೆಸಿದ ಬಳಿಕ ಮೊದಲು ನೆನೆಸಿಟ್ಟ ಹುಣಸೆ ಹುಳಿಯ ರಸವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಅರ್ಧ ಲೀಟರ್ ಅಷ್ಟು ನೀರನ್ನು ಹಾಕಿಕೊಳ್ಳಿ. ಹಾಗೆ ಒಂದು ಕುದಿಬರಲು ಬಿಡಬೇಕು. ಈ ಸಾರು ಕುದಿಬರಲು ಆರಂಭಿಸಿದಾಗ ಮೊದಲು ಹುರಿದುಕೊಂಡಿದ್ದ ಹುರುಳಿಕಾಳನ್ನು ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ 10 ನಿಮಿಷ ಕುದಿಬರಲು ಬಿಡಬೇಕು. ನೀವು ಮುಚ್ಚಳ ಮುಚ್ಚಿಯೂ ಬೇಯಿಸಬಹುದು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ರುಚಿ ರುಚಿಯ ಹುರುಳಿ ಸಾರು ರೆಡಿಯಾಗುತ್ತೆ.
ನೀವು ಕೂಡ ಮನೆಯಲ್ಲಿ ಈ ರೀತಿಯ ಹುರುಳಿ ಸಾರು ಮಾಡಿ ನೋಡಿ. ಇದು ರುಚಿಯು ಚೆನ್ನಾಗಿರುವ ಜೊತೆಗೆ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ.



Click it and Unblock the Notifications