ಮಂಗಳೂರು ಶೈಲಿಯಲ್ಲಿ ಕೋರಿ ಸುಕ್ಕಾ ಮಾಡುವುದು ಹೇಗೆ?

Posted By:

ಮಂಗಳೂರಿನಲ್ಲಿ ಚಿಕನ್ ಅಡುಗೆಯಲ್ಲಿ ಸುಕ್ಕಾ ಇರಲೇಬೇಕು, ಈ ಚಿಕನ್‌ ಪೆಪ್ಪರ್, ಚಿಕನ್‌ ಡ್ರೈಗಿಂತ ಆ ಕಡೆ ಸುಕ್ಕಾ ಇಷ್ಟಪಡುತ್ತಾರೆ, ಈ ಸುಕ್ಕಾ ಟೇಸ್ಟ್‌ ಮಾಡುತ್ತಿದ್ದರೆ ಕೂತಲ್ಲಿ ನಾವೆಷ್ಟು ತಿಂದಿದ್ದೇವೆ ಎಂಬ ಲೆಕ್ಕ ಸಿಗಲ್ಲ ಅಷ್ಟೊಂದು ರುಚಿಯಾಗಿರುತ್ತದೆ. ಮಂಗಳೂರು ಶೈಲಿಯ ಕೋರಿ ಸುಕ್ಕಾ ಮಾಡುವುದು ಹೇಗೆ ಎಂದು ನೋಡೋಣ:

chicken sukka recipe

ಬೇಕಾಗುವ ಸಾಮಗ್ರಿ

ಚಿಕನ್‌ ಒಂದು ಕೆಜಿ (ಬೋನ್‌ಲೆಸ್, ವಿಥ್‌ ಬೋನ್‌ ಬಳಸಬಹುದು, ನಾಟಿ ಕೋಳಿಯಾದರೆ ಇನ್ನೂ ಸೂಪರ್)
ಬ್ಯಾಡಗಿ ಮೆನಸು 8-10
ತೆಮಗಿನ ತುರಿ 1 ಕಪ್‌
ಸ್ವಲ್ಪ ಶುಂಠಿ
ಒಂದು ಈರುಳ್ಳಿ
5-6 ಎಸಳು ಬೆಳ್ಳುಳ್ಳಿ
ಕೊತ್ತಂಬರಿ ಬೀಜ 4 ಚಮಚ
ಸೋಂಪು 1 ಚಮಚ
ಜೀರಿಗೆ 1/2 ಚಮಚ
ಕಾಳುಮೆಣಸು 4-6
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕರೆ
3-4 ಲವಂಗ
ಸ್ವಲ್ಪ ಕರಿಬೇವಿ
1/2 ಚಮಚ ಅರಿಶಿಣ ಪುಡಿ
1 ಚಮಚ ಎಣ್ಣೆ

ಮಾಡುವ ವಿಧಾನ

  • ಮೊದಲು ನೀವು ಸುಕ್ಕಾ ಮಾಡಲು ಮಸಾಲೆ ರೆಡಿ ಮಾಡಿ
  • ತೆಂಗಿನ ತುರಿಯನ್ನು ಒಂದು ಚಮಚ ಎಣ್ಣೆ ಹಾಕಿ ಕೆಂಪಗೆ ಬರುವವಷ್ಟು ಹೊತ್ತು ಹುರಿಯಿರಿ, ಹೀಗೆ ಹುರಿಯುವಾಗ ಸ್ವಲ್ಪ ಹುಣಸೆಹಣ್ಣು ಕೂಡ ಸೇರಿಸಿ ಹುರಿಯಿರಿ
  • ಈಗ ತವಾಗೆ ಬ್ಯಾಡಗಿ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ , ಸೋಂಪು, ಲವಂಗ, ಚಕ್ಕೆ ಎಲ್ಲವನ್ನೂ ಹಾಕಿ ಹುರಿಯಿರಿ,
  • ನಂತರ ಹುರಿದ ಮಸಾಲೆಗೆ ಶುಂಠಿ, ಬೆಳ್ಳುಳ್ಳಿ ಸೇರಿಸಿ ನುಣ್ಣನೆ ರುಬ್ಬಿ.
  • ನೀವು ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್‌ ಶಬ್ದ ಮಾಡುವಾಗ ಈರುಳ್ಳಿ, ಕರಿಬೇವು ಹಾಕಿ, ನಂತರ ಚಿಕನ್ ಹಾಕಿ ಅರಿಶಿಣ ಪುಡಿ, ಉಪ್ಪು ಸೇರಿಸಿ ಬೇಯಸಿ. ಚಿಕನ್‌ ಅರ್ಧ ಬೆಂದಾಗ ರುಬ್ಬಿದ ಮಸಾಲೆ ಹಾಕಿ
  • ನಂತರ ಫ್ರೈ ಮಾಡಿಟ್ಟ ಕಾಯಿ ತುರಿಯನ್ನು ರುಬ್ಬಿ (ಇದನ್ನು ತರಿತರಿಯಾಗಿ ರುಬ್ಬಬಹುದು ಅಥವಾ ನುಣ್ಣನೆ ರುಬ್ಬಬಹುದು)
  • ರುಬ್ಬಿದ ತೆಂಗಿನ ತುರಿಯನ್ನು ಚಿಕನ್‌ ಜೊತೆ ಸೇರಿಸಿ, ಮತ್ತೆ 5 ನಿಮಿಷ ಬೇಯಿಸಿದರೆ ಕೋರಿ ಸುಕ್ಕಾ ರೆಡಿ.
[ of 5 - Users]
Story first published: Friday, July 26, 2024, 16:17 [IST]
X
Desktop Bottom Promotion