Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರುಚಿ ರುಚಿಯ ಸಬ್ಬಸಿಗೆ ಮಸಾಲೆ ವಡೆ ಮಾಡಿದ್ದೀರಾ? ಈ ರುಚಿ ಸವಿದು ನೋಡಿ!
ನೀವು ಬೆಳಗ್ಗೆ ತಿಂಡಿಯ ಜೊತೆಗೆ ಹಾಗೆ ಊಟದ ಮತ್ತೆ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಜೊತೆಗೆ ವಡೆಯನ್ನು ಸವಿಯಲು ಬಹಳ ಇಷ್ಟಪಡಬಹುದು. ಏಕೆಂದರೆ ವಡೆ ಎಲ್ಲರ ಪ್ರಿಯವಾದ ಕರಿದ ತಿಂಡಿ. ಮಸಾಲೆ ವಡೆ ಜೊತೆಗೆ ಹಸಿ ಮೆಣಸಿನ ಚಟ್ನಿ ಇದ್ದರೆ 4 ರಿಂದ 5 ವಡೆ ಸವಿಯುವವರು ಇದ್ದಾರೆ. ಹೀಗಾಗಿ ರಸ್ತೆ ಬದಿಯಲ್ಲಿ ವಡೆ ನೀಡುವ ಅಂಗಡಿಯ ಮುಂದೆ ಸಾಲು ಸಾಲು ಮಂದಿ ನಿಂತಿರುತ್ತಾರೆ.
ವಡೆ ಹಲವು ಬಗೆಯಲ್ಲಿ ಮಾಡಬಹುದು ಎಂಬುದು ಕೂಡ ನೀವು ತಿಳಿದಿರಬಹುದು. ಹಲವು ರುಚಿಯ ಹಲವು ಬಗೆಯ ವಡೆಯನ್ನು ನೀವು ಕೂಡ ಮನೆಯಲ್ಲಿ ಮಾಡಿ ಸವಿದಿರುತ್ತೀರಿ. ಹೋಟೆಲ್‌ಗಳಲ್ಲಿ ಆದರೆ ಪಲಾವ್, ರೈಸ್ ಬಾತ್, ಟೊಮೆಟೋ ಬಾತ್, ಇಡ್ಲಿ ಜೊತೆಗೂ ಈ ಮಸಾಲೆ ವಡೆಯನ್ನು ನೀಡುವುದು ನೋಡಬಹುದು. ಏಕೆಂದರೆ ಇದರ ಜೊತೆಗೆ ನೀವು ಯಾವುದೇ ಖಾದ್ಯ ಸವಿದರೂ ಅದರ ರುಚಿ ದುಪ್ಪಟ್ಟಾಗುತ್ತೆ.

ನೀವು ಹುರಿಗಡಲೆ, ಬೇಳೆ ಮಸಾಲೆ ವಡೆ ಮಾಡಿರುತ್ತೀರಿ. ಆದ್ರೆ ನಾವಿಂದು ಸಬ್ಬಸಿಗೆ ಸೊಪ್ಪಿನಿಂದ ಮಾಡುವ ಗರಿ ಗರಿಯಾದ ವಡೆ ನೀವು ಸವಿದು ನೋಡಿದರೆ ಅದರ ರುಚಿಗೆ ಮರುಳಾಗುತ್ತೀರಿ. ಅಷ್ಟೊಂದು ರುಚಿಯ ಈ ವಡೆ ನೀವು ಸವಿದು ನೋಡಿ. ಹಾಗಾದ್ರೆ ಸಬ್ಬಸಿಗೆ ಸೊಪ್ಪಿನ ಈ ವಡೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಬ್ಬಸಿಗೆ ಸೊಪ್ಪಿನ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಸಬ್ಬಸಿಗೆ ಸೊಪ್ಪು
- ಕಡಲೆ ಬೇಳೆ
- ಉದ್ದಿನ ಬೇಳೆ
- ಒಣ ಮೆಣಸು
- ದಾಲ್ಚಿನ್ನಿ
- ಲವಂಗ
- ಸೋಂಪು ಕಾಳು
- ಬೆಳ್ಳುಳ್ಳಿ
- ಶುಂಠಿ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಇಂಗು
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಸಬ್ಬಸಿಗೆ ಸೊಪ್ಪಿನ ವಡೆ ಮಾಡುವುದು ಹೇಗೆ?
ಮೊದಲು ಕಡಲೆ ಬೇಳೆ ಹಾಗೂ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಬೇಕು. ಸುಮಾರು 3ರಿಂದ 4 ಗಂಟೆ ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಉದ್ದಿನ ಬೇಳೆ, ಒಣ ಮೆಣಸು, ಚಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ, ಒಂದು ಮುಷ್ಠಿ ಕಡಲೆ ಬೇಳೆ ಹಾಕಿಕೊಂಡು ತರಿ ತರಯಾಗಿ ರುಬ್ಬಿಕೊಳ್ಳಿ.
ನಂತರ ಈ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ. ನಂತರ ಉಳಿದಿರುವ ಕಡಲೆ ಬೇಳೆಯನ್ನು ಈ ಹಿಟ್ಟಿನ ಜೊತೆಗೆ ಹಾಕಿ, ಹಾಗೆ ಒಂದು ಈರುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸು, ಸಣ್ಣದಾಗಿ ಕೊಚ್ಚಿಕೊಂಡಿರುವ ಸಬ್ಬಸಿಗೆ ಸೊಪ್ಪು ಹಾಗೆ ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿಕೊಳ್ಳಿ.
ಹಾಗೆ ಇದಕ್ಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕೈಯಿಂದ ಚೆನ್ನಾಗಿ ಕಲಸಿಕೊಳ್ಳಿ. ನಂತರ ಉಂಡೆ ಕಟ್ಟಿ ಇಟ್ಟುಕೊಳ್ಳಿ. ಒಂದು ನಿಂಬೆ ಹಣ್ಣಿನ ಗಾತ್ರಕ್ಕಿಂತ ಸ್ವಲ್ಪ ಚಿಕ್ಕದಾಗಿ ಉಂಡೆ ಕಟ್ಟಿಕೊಳ್ಳಿ. ಉಂಡೆ ಕಟ್ಟುವಾಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಈಗ ಕೈಯನ್ನು ನೀರಿಗೆ ಅದ್ದಿಕೊಂಡು ಉಂಡೆಯನ್ನು ತಟ್ಟಿ ವಡೆ ಮಾಡಿಕೊಳ್ಳಿ. ನಂತರ 2 ಅಥವಾ 3 ವಡೆಯನ್ನು ಎಣ್ಣೆ ಹಾಕಿ ಚೆನ್ನಾಗಿ ಕರಿದುಕೊಳ್ಳಿ.
ವಡೆಯನ್ನು ಎರಡೂ ಕಡೆ ಚೆನ್ನಾಗಿ ಕರಿದುಕೊಂಡು ನಂತರ ತೆಗೆದು ಎಣ್ಣೆ ಇಳಿಯಲು ಬಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸಬ್ಬಸಿಗೆ ವಡೆ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications