Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಾಮೂನು ರೆಸಿಪಿ: ಈ ಗೈಡ್‌ಲೈನ್ ಪಾಲಿಸಿದರೆ ಜಾಮೂನು ಮಿಕ್ಸ್ ಹದ ಸರಿಯಾಗಿರುತ್ತೆ
ಜಾಮೂನು ಮಿಶ್ರಣ ರೆಡಿಮೇಡ್ ಬರುತ್ತದೆ, ಆದರೆ ಅದಕ್ಕಿಂತ ಮನೆಯಲ್ಲಿ ಮಾಡುವ ಮಿಶ್ರಣ ತುಂಬಾ ಚೆನ್ನಾಗಿರುತ್ತದೆ. ಹಾಗಾಗಿ ಜಾಮೂನ್ ಮಿಕ್ಸ್ ನೀವು ಮನೆಯಲ್ಲಿಯೇ ಮಾಡಬಹುದು, ಜಾಮೂನು ಮಿಶ್ರಣದ ಹದ ಚೆನ್ನಾಗಿರಬೇಕು, ಇಲ್ಲಿ ನಾವು ಜಾಮೂನು ಮಿಕ್ಸ್ ಪರ್ಫೆಕ್ಟ್ ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
100 ಗ್ರಾಂ ಹಾಲಿನ ಪುಡಿ
60 ಗ್ರಾಂ ಮೈದಾ
1/2 ಚಮಚ ಅಡುಗೆ ಸೋಡಾ
2 ಚಮಚ ತುಪ್ಪ
ಹಾಲು
ತುಪ್ಪ
ಸಕ್ಕರೆ
2 ಕಪ್ ಸಕ್ಕರೆ
2 ಕಪ್ ನೀರು
2 ಚಮಚ ಏಲಕ್ಕಿ
1/4 ಚಮಚ ಕೇಸರಿ
1 ಚಮಚ ನಿಂಬೆರಸ
1 ಚಮಚ ರೋಸ್ ವಾಟರ್
ಮಾಡುವ ವಿಧಾನ
ಒಂದು ಬೌಲ್‌ಗೆ ಹಾಲು ಪುಡಿ, 1/2 ಕಪ್ ಮೈದಾ ಹಿಟ್ಟುಮತ್ತು 1/2 ಚಮಚ
ಬೇಕಿಂಗ್ ಪೌಡರ್ ಹಾಕಿ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿದರೆ ಹೋಮ್ ಮೇಡ್
ಜಾಮೂನ್ ಮಿಕ್ಸ್ ರೆಡಿ
ಮಿಶ್ರಣ ಮೃದುವಾಗಬೇಕು, ಬೇಕಿದ್ದರೆ ಒಂದು ಚಮಚ ತುಪ್ಪ ಸೇರಿಸಬಹುದು
ಈಗ ಮಿಶ್ರಣವನ್ನು ದೊಡ್ಡ ಉಂಡೆ ಮಾಡಿ 10 ಬೌಲ್‌ನ ಬಾಯಿ ಮುಚ್ಚಿ 10 ನಿಮಿಷ
ಬಿಡಿ
ಇದೇ ಸಮಯದಲ್ಲಿ ಸಕ್ಕರೆ ಪಾಕ ರೆಡಿ ಮಾಡಿ
2 ಕಪ್ ಸಕ್ಕರೆಗೆ 1 ಕಪ್ ನೀರು ಸೇರಿಸಿ, 2 ಏಲಕ್ಕಿ, ಚಿಟಿಕೆಯಷ್ಟು ಕೇಸರಿ ಎಲ್ಲಾ ಮಿಕ್ಸ್ ಮಾಡಿ ಸಕ್ಕರೆ ಪಾಕ ತಯಾರಿಸಿ. ಸಕ್ಕರೆ ಪಾಕ ಗಟ್ಟಿಯಾಗಿರಬೇಕು, ಸ್ಪೂನ್‌ನಲ್ಲಿ ತೆಗೆಯುವಾಗ ಜೇನು ಬೀಳುತ್ತದೆ ಅಲ್ವಾ ಆ ರೀತಿ ಇರಬೇಕು. ಪಾಕದ ಹದ ಸರಿಯಾಗದಿದ್ದರೆ ಗುಲಾಬ್ ಜಾಮೂನ್ ಸರಿ ಬರಲ್ಲ,ಹಾಗಾಗಿ ಪಾಕದ ಹದ ತುಂಬಾ ಮುಖ್ಯ. ಈಗ ರೆಡಿಯಾದ ಪಾಕ ಮಿಶ್ರಣವನ್ನು ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.
ಈಗ ಜಾಮೂನ್ ರೆಡಿ ಮಾಡಿ
ಮಿಕ್ಸ್ ಮಾಡಿಟ್ಟ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ನೀವು ತಿನ್ನುವ ಜಾಮೂನು ಗಾತ್ರದಲ್ಲಿ ಉಂಡೆ ಮಾಡಬೇಡಿ, ಜಾಮೂನು ಸಕ್ಕರೆ ಪಾಕ ಹೀರಿಕೊಂಡಾಗ ದಪ್ಪವಾಗುತ್ತೆ, ಹಾಗಾಗಿ ಚಿಕ್ಕ-ಚಿಕ್ಕ ಉಂಡೆ ಕಟ್ಟಿ. ನೀವು ಜಾಮೂನು ಗಾತ್ರದಲ್ಲಿ ಉಂಡೆ ಕಟ್ಟಿದರೆ ರೆಡಿಯಾಗಿ ಬರುವಾಗ ಮೊಟ್ಟೆ ಗಾತ್ರಕ್ಕೆ ಬರಬಹುದು, ಹಾಗಾಗಿ ಮೀಡಿಯಂ ಗಾತ್ರದಲ್ಲಿ ಇದ್ದರೆ ಮಾತ್ರ ಚೆನ್ನಾಗಿರುತ್ತದೆ ಅಲ್ವಾ ಹಾಗಾಗಿ ಚಿಕ್ಕ ಚಿಕ್ಕ ಉಂಡೆ ಕಟ್ಟಿ.
ಎಣ್ಣೆ ಕಾಯಿಸಿ
ಚಿಕ್ಕ ಉಂಡೆ ಮಾಡಿ ಫ್ರೈ ಮಾಡಿ. ಉಂಡೆ ತುಂಬಾ ಕಪ್ಪಾಗಿಸಬೇಡಿ, ನಂತರ ಅದನ್ನು
ಸಕ್ಕರೆ ಪಾಕದಲ್ಲಿ ಹಾಕಿ. ರುಚಿ ರುಚಿಯಾದ ಗುಲಾಬ್ ಜಾಮೂನು ರೆಡಿ.



Click it and Unblock the Notifications