Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಸರುಕಾಳಿನ ಉಸ್ಲಿ ರೆಸಿಪಿ
ಹೆಸರು ಕಾಳು ಹುಸುಳಿ (ಉಸ್ಲಿ) ದಕ್ಷಿಣ ಭಾರತದ ಸಾಂಪ್ರದಾಯಿಕ ಭಕ್ಷ್ಯ. ಸಾಮಾನ್ಯ ದಿನಗಳಲ್ಲಿ ಸಾಯಂಕಾಲದ ಉಪಹಾರವಾಗಿ ಹಾಗೂ ಹಬ್ಬ ಹರಿದಿನಗಳಲ್ಲಿ ಪ್ರಸಾದ ರೂಪದಲ್ಲಿ ಇದನ್ನು ತಯಾರಿಸುತ್ತಾರೆ. ನವರಾತ್ರಿ ಉತ್ಸವದಲ್ಲಿ ಇದನ್ನು ವಿಶೇಷ ಪ್ರಸಾದವಾಗಿ ತಯಾರಿಸಲಾಗುವುದು. ಹುಸುಳಿಯಲ್ಲಿ ಇರುವ ಉಪ್ಪು ಮತ್ತು ಮೆಣಸು ರುಚಿಯನ್ನು ದ್ವಿಗುಣಗೊಳಿಸುತ್ತವೆ.
ಹೆಸರುಕಾಳು ಹುಸುಳಿಯಲ್ಲಿ ಪ್ರೋಟೀನ್ ಮತ್ತು ಫೈಬರ್‍ಅಂಶ ಸಮೃದ್ಧವಾಗಿರುವುದರಿಂದ ಇದನ್ನು ಆರೋಗ್ಯ ಪೂರ್ಣ ಆಹಾರ ಎಂದು ಕರೆಯಬಹುದು. ಇದನ್ನು ಮುಂಜಾನೆಯ ಉತ್ತಮ ಉಪಹಾರವಾಗಿಯೂ ಸೇವಿಸಬಹುದು. ವ್ರತಾಚರಣೆಯ ಸಮಸಯದಲ್ಲಿ ಹಾಗೂ ಮಕ್ಕಳಿಗೆ ಕುರುಕಲು ತಿಂಡಿಯ ಬದಲಿಗೆ ಇದನ್ನು ನೀಡಲು ಒಂದು ಉತ್ತಮ ಆಯ್ಕೆ. ಆರೋಗ್ಯಕರವಾದ ಈ ಹುಸುಳಿಯನ್ನು ಸುಲಭವಾಗಿ ತಯಾರಿಸಬಹುದು.
ಉಸ್ಲಿಯನ್ನು ತಯಾರಿಸಲು ಯಾವುದೇ ಪಾಂಡಿತ್ಯದ ಅಗತ್ಯವಿಲ್ಲ. ಬೇಕೆಂದಾಗ ಸುಲಭವಾಗಿ ತಯಾರಿಸಬಹುದು. ಇದರ ಪಾಕವಿಧಾನಕ್ಕೆ ಅನುಕೂಲವಾಗಲೆಂದು ವೀಡಿಯೋ ಹಾಗೂ ಚಿತ್ರ ವಿವರಣೆಯನ್ನು ಇಲ್ಲಿ ನೀಡಿದ್ದೇವೆ.

Recipe By: ಅರ್ಚನಾ ವಿ
Recipe Type: ಉಪಹಾರ/ ಸೈಡ್ ಡಿಶ್
Serves: 2 ಮಂದಿಗೆ
-
ಜೀರಿಗೆ - 3/4 ಚಮಚ
ಹೆಚ್ಚಿದ ಹಸಿ ಮೆಣಸಿನಕಾಯಿ - 1 ಸಾಮಾನ್ಯ ಗಾತ್ರದ್ದು
ತುರಿದ ಶುಂಠಿ - 1/4 ಇಂಚ್ ದೊಡ್ಡದು.
ಎಣ್ಣೆ - 1 ಚಮಚ
ಸಾಸಿವೆ - 1 ಚಮಚ
ಕರಿಬೇವಿನ ಎಲೆ - 6 ರಿಂದ 10
ಬೇಯಿಸಿಕೊಂಡ ಹೆಸರುಕಾಳು - 100 ಗ್ರಾಂ
ರುಚಿಗೆ ತಕ್ಕಷ್ಟು ಉಪ್ಪು
ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 2 ಚಮಚ
ನಿಂಬು - 1/2 ಭಾಗ
ತೆಂಗಿನ ತುರಿ - 1/2 ಕಪ್
-
1. 1/2 ಚಮಚ ಜೀರಿಗೆ, ಹಸಿಮೆಣಸು, ಶುಂಠಿಯನ್ನು ಒಮ್ಮೆಲೆ ಬೆರೆಸಿ ಜಜ್ಜಿಕೊಳ್ಳಿ.
2. ಇವುಗಳನ್ನು ಸರಿಯಾಗಿ ಮಿಶ್ರಗೊಂಡ ಪೇಸ್ಟ್‍ನಂತೆ ಮಾಡಿ.
3. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.
4. ಸಾಸಿವೆ, 1/4 ಚಮಚ ಜೀರಿಗೆಯನ್ನು ಹಾಕಿ ಚಟಪಟ ಎನ್ನುವವರೆಗೆ ಹುರಿಯಿರಿ.
5. ನಂತರ ಇಂಗು ಮತ್ತು ಕರಿಬೇವಿನ ಎಲೆಯನ್ನು ಹಾಕಿ.
6. ಇವೆಲ್ಲವು ಸರಿಯಾಗಿ ಮಿಶ್ರಗೊಳ್ಳುವಂತೆ ಹುರಿಯಿರಿ.
7. ಇದಕ್ಕೆ ಬೇಯಿಸಿಕೊಂಡ ಹೆಸರು ಬೇಳೆಯನ್ನು ಸೇರಿಸಿ, ಮಿಶ್ರಗೊಳಿಸಿ.
8. ಉಪ್ಪು ಮತ್ತು ಹೆಚ್ಚಿಕೊಂಡ ಕೊತ್ತಂಬರಿಯನ್ನು ಸೇರಿಸಿ.
9. ಉರಿಯನ್ನು ಆರಿಸಿ, ತೆಂಗಿನ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ.
10. ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.
- 1. ಹೆಸರುಕಾಳನ್ನು ರಾತ್ರಿ ನೆನೆಸಿಟ್ಟುಕೊಂಡಿರಬೇಕು.
- 2. ಬೇಳೆಗೆ ಸಮನಾಗಿ ನೀರನ್ನು ಹಾಕಿ, ಒಂದು ಸೀಟಿ ಕೂಗಿಸಬೇಕಷ್ಟೆ.
- 3. ಪ್ರೆಶರ್ ಹೀಟ್ ಸ್ವಲ್ಪ ಆರುತ್ತಿದ್ದಂತೆಯೇ ಸೀಟಿ ತೆಗೆಯಬೇಕು. ಇಲ್ಲವಾದರೆ ಕಾಳು ಅತಿಯಾಗಿ ಬೇಯುವುದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರೀಸ್ - 95 ಕ್ಯಾಲ್
- ಫ್ಯಾಟ್ - 2.5 ಗ್ರಾಂ
- ಪ್ರೋಟೀನ್ - 5.1 ಗ್ರಾಂ
- ಕಾರ್ಬೋಹೈಡ್ರೇಟ್ - 13.3 ಗ್ರಾಂ
- ಫೈಬರ್ - 4.1 ಗ್ರಾಂ
ಹೆಸರು ಕಾಳು ಹುಸುಳಿ ಸ್ಟೆಪ್ ಬೈ ಸ್ಟೆಪ್ ಮಾಡುವ ವಿಧಾನ
1. 1/2 ಚಮಚ ಜೀರಿಗೆ, ಹಸಿಮೆಣಸು, ಶುಂಠಿಯನ್ನು ಒಮ್ಮೆಲೆ ಬೆರೆಸಿ ಜಜ್ಜಿಕೊಳ್ಳಿ.



2. ಇವುಗಳನ್ನು ಸರಿಯಾಗಿ ಮಿಶ್ರಗೊಂಡ ಪೇಸ್ಟ್‍ನಂತೆ ಮಾಡಿ.

3. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

4. ಸಾಸಿವೆ, 1/4 ಚಮಚ ಜೀರಿಗೆಯನ್ನು ಹಾಕಿ ಚಟಪಟ ಎನ್ನುವವರೆಗೆ ಹುರಿಯಿರಿ.



5. ನಂತರ ಇಂಗು ಮತ್ತು ಕರಿಬೇವಿನ ಎಲೆಯನ್ನು ಹಾಕಿ.


6. ಇವೆಲ್ಲವು ಸರಿಯಾಗಿ ಮಿಶ್ರಗೊಳ್ಳುವಂತೆ ಹುರಿಯಿರಿ.



7. ಇದಕ್ಕೆ ಬೇಯಿಸಿಕೊಂಡ ಹೆಸರು ಬೇಳೆಯನ್ನು ಸೇರಿಸಿ, ಮಿಶ್ರಗೊಳಿಸಿ.


8. ಉಪ್ಪು ಮತ್ತು ಹೆಚ್ಚಿಕೊಂಡ ಕೊತ್ತಂಬರಿಯನ್ನು ಸೇರಿಸಿ.



9. ಉರಿಯನ್ನು ಆರಿಸಿ, ತೆಂಗಿನ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ.



10. ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.




Click it and Unblock the Notifications