Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೋಳಿಗೆ ಥಂಡೈ ಟೇಸ್ಟ್ ಮಾಡಿ: ಬೇಸಿಗೆಗೆ ತುಂಬಾ ಒಳ್ಳೆಯದು ಈ ಥಂಡೈ
ಥಂಢೈ ಹೋಳಿಗೆ ಮಾಡುವ ಪ್ರಮುಖ ರೆಸಿಪಿಗಳಲ್ಲೊಂದು. ಥಂಡೈ ಹೋಳಿ ಹಬ್ಬಕ್ಕೆ ಮಾತ್ರವಲ್ಲ, ಇಡೀ ಬೇಸಿಗೆಯಲ್ಲಿ ಇದನ್ನು ಮಾಡಿ ಸವಿಯಬಹುದು. ರುಚಿಯಲ್ಲೂ ಸೂಪರ್, ಆರೋಗ್ಯಕ್ಕೆ ಒಳ್ಳೆಯದು.
20 ಬಾದಾಮಿ, 10 ಗೋಡಂಬಿ , 15 ಪಿಸ್ತಾ ಒಂದು ಬೌಲ್‌ನಲ್ಲಿ ನೆನೆ ಹಾಕಿ. ಕನಿಷ್ಠ 4 ಗಂಟೆ ನೆನೆ ಹಾಕಿ. ಬೇಗನೆ ರೆಡಿಮಾಡಬೇಕೆಂದಿದ್ದರೆ ಒಂದು ಗಂಟೆ ಬಿಸಿ ನೀರಿನಲ್ಲಿ ನೆನೆಹಾಕಿ. ಅದೇ ಸಮಯದಲ್ಲಿ ಒಂದೂವರೆ ಚಮಚ ಗಸೆಗಸೆ, ಒಂದೂವರೆ ಚಮಚ ಮೆಲನ್ ಸೀಡ್ಸ್ (Magaz)ಒಂದು ಚಿಕ್ಕ ಬೌಲ್‌ನಲ್ಲಿ ನೆನೆಹಾಕಿ.

ಬಾದಾಮಿ ಸಿಪ್ಪೆ ಸುಲಿಯಿರಿ, ನಂತರ ಎಲ್ಲಾ ಬೀಜವನ್ನು ಬ್ಲೆಂಡರ್‌ನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ.
* ಅದಕ್ಕೆ ಒಂದೂವರೆ ಚಮಚ ಸೋಂಪು
4-10 ಕಾಳು ಮೆಣಸು ಸೇರಿಇಸ
* 1 ಇಂಚಿನ ಚಕ್ಕೆ ಬಳಸಿ
* ಚಿಟಿಕೆಯಷ್ಟು ಕೇಸರಿ
* 20 ಗುಲಾಬಿ ದಳ
* ನಂತರ ಮೊದಲಿಗೆ ತರಿ ತರಿ ಗ್ರೈಂಡ್ ಮಾಡಿ, ನಂತರ ಸ್ವಲ್ಪ ಹಾಲು ಹಾಕಿ
ಪೇಸ್ಟ್ ಮಾಡಿ.
* ನುಣ್ಣನೆ ಪೇಸ್ಟ್ ರೀತಿ ಮಾಡಬೇಕು.
* ನಂತರ ಒಂದು ಲೀಟರ್ ಹಾಲು ಹಾಕಿ ಕುದಿಸಿ. 5-6 ಚಮಚ ಹಾಕಿ ಕುದಿಸಿ.
* ನಂತರ ಸ್ಟೌವ್ ಆಫ್ ಮಾಡಿ. ರುಬ್ಬಿದ ಪೇಸ್ಟ್ ಸೇರಿಸಿ.
* ನಂತರ ತಣ್ಣಗಾದ ಮೇಲೆ 4 ಗಂಟೆ ಅಥವಾ ರಾತ್ರಿ ಫ್ರಿಡ್ಜ್‌ನಲ್ಲಿಡಿ.
* ನಂತರ ಮಣ್ಣಿನ ಕಪ್‌ಗೆ ಒಂದು ಚಮಚ ಗುಲ್ಕಾನ್ ಹಾಕಿ, ಥಂಡೈ ಸೇರಿಸಿ. ನಂತರ
ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಪಿಸ್ತಾ, ಗೋಡಂಬಿ ಸ್ವಲ್ಪ ಪುಡಿ ಪುಡಿ ಮಾಡಿ ನಂತರ ಅದಕ್ಕೆ ಕೇಸರಿ ಹಾಕಿ
ಅದರಲ್ಲಿಯೇ 45ರಿಂದ ಒಂದು ಗಂಟೆ ಇಡಿ. ನಂತರ ಸರ್ವ್ ಮಾಡಿದರೆ ಥಂಡೈ ರೆಸಿಪಿ
ರೆಡಿ.

ಬೇಸಿಗೆಯಲ್ಲಿ ಥಂಡೈ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳು
ಸುಸ್ತು ನಿವಾರಿಸುತ್ತದೆ
ಬೇಸಿಗೆಯಲ್ಲಿ ಬೇಗನೆ ಸುಸ್ತಾಗುತ್ತದೆ. ಸ್ವಲ್ಪ ಹೊರಗಡೆ ಬಿಸಿಲಿನಲ್ಲಿ
ಸುತ್ತಾಡಿದರೆ ಸಾಕು ಕೆಲವರಿಗೆ ತಲೆಸುತ್ತು ಬರುವುದು, ತುಂಬಾನೇ ಸುಸ್ತು
ಅನಿಸುವುದು, ಆದರೆ ಥಂಡೈಯಲ್ಲಿ ಎಲ್ಲಾ ಆರೋಗ್ಯಕರ ಅಂಶಗಳೇ ಇರುವುದರಿಂದ ದೇಹಕ್ಕೆ
ಶಕ್ತಿ ದೊರೆಯುವುದು, ಸುಸ್ತು ಬೇಗನೆ ಕಡಿಮೆಯಾಗುವುದು.
ಹೊಟ್ಟೆ ಸಂಬಂಧಿ ಸಮಸ್ಯೆ ದೂರಾಗಿಸುತ್ತದೆ
ಬೇಸಿಗೆಯಲ್ಲಿ ತುಂಬಾ ಜನರಿಗೆ ಹೊಟ್ಟೆ ಸಂಬಂಧಿ ಸಮಸ್ಯೆ ಉಂಟಾಗುವುದು, ಗ್ಯಾಸ್ಟ್ರಿಕ್, ಮಲಬದ್ಧತೆ ಈ ಬಗೆಯ ಸಮಸ್ಯೆ ಕಡಿಮೆಯಾಗುವುದು. ಇದರಲ್ಲಿ ಸೋಂಪು, ಮೆಂತೆ, ಗುಲ್ಕಾನ್, ನಟ್ಸ್ ಎಲ್ಲಾ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ
ಥಂಡೈಯಲ್ಲಿ ನಟ್ಸ್ ಹಾಗೂ ಪ್ರೊಟೀನ್ ಅಂಶಗಳಿರುವುದರಿಂದ ದೇಹದ ಆರೋಗ್ಯಕ್ಕೆ
ಎಷ್ಟು ಒಳ್ಳೆಯದು ಅಷ್ಟೇ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ಇದನ್ನು
ಕುಡಿಯುವುದರಿಂದ ಜ್ಙಾಪಕ ಶಕ್ತಿ ಹೆಚ್ಚುವುದು.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಬೇಸಿಗೆಯಲ್ಲಿ ಸ್ವಲ್ಪ ಕೆಲಸ ಮಾಡಿದರೂ ಬೇಗನೆ ಸುಸ್ತಾಗುವುದು,ಅಲ್ಲದೆ ಅಧಿಕ
ಕೆಲಸದ ಒತ್ತಡ ಮಾನಸಿಕ ಒತ್ತಡವನ್ನು ಹೆಚ್ಚಿಸುವುದು. ಥಂಡೈ ಕುಡಿದಾಗ ತುಂಬಾ
ರಿಲ್ಯಾಕ್ಸ್ ಅನಿಸುವುದು.
Recipe By: Reena TK
Recipe Type: Drinks
Serves: 4
-
20 ಬಾದಾಮಿ, 10 ಗೋಡಂಬಿ , 15 ಪಿಸ್ತಾಒಂದೂವರೆ ಚಮಚ ಸೋಂಪು
4-10 ಕಾಳು ಮೆಣಸು ಸೇರಿಇಸ
* 1 ಇಂಚಿನ ಚಕ್ಕೆ ಬಳಸಿ
* ಚಿಟಿಕೆಯಷ್ಟು ಕೇಸರಿ
* 20 ಗುಲಾಬಿ ದಳ
-
* 20 ಬಾದಾಮಿ, 10 ಗೋಡಂಬಿ , 15 ಪಿಸ್ತಾ ಒಂದು ಬೌಲ್‌ನಲ್ಲಿ ನೆನೆ ಹಾಕಿ. ಕನಿಷ್ಠ 4 ಗಂಟೆ ನೆನೆ ಹಾಕಿ. ಬೇಗನೆ ರೆಡಿಮಾಡಬೇಕೆಂದಿದ್ದರೆ ಒಂದು ಗಂಟೆ ಬಿಸಿ ನೀರಿನಲ್ಲಿ ನೆನೆಹಾಕಿ. ಅದೇ ಸಮಯದಲ್ಲಿ ಒಂದೂವರೆ ಚಮಚ ಗಸೆಗಸೆ, ಒಂದೂವರೆ ಚಮಚ ಮೆಲನ್ ಸೀಡ್ಸ್ (Magaz)ಒಂದು ಚಿಕ್ಕ ಬೌಲ್‌ನಲ್ಲಿ ನೆನೆಹಾಕಿ.
* ನಂತರ ಇತರ ಸಾಮಗ್ರಿ ಹಾಕಿ ತರಿತರಿ ರುಬ್ಬಿ, ನಂತರ ಸ್ವಲ್ಪ ಹಾಲು ಹಾಕಿ ನುಣ್ಣನೆ ಪೇಸ್ಟ್ ಮಾಡಿ.
* ನುಣ್ಣನೆ ಪೇಸ್ಟ್ ರೀತಿ ಮಾಡಬೇಕು.
* ನಂತರ ಒಂದು ಲೀಟರ್ ಹಾಲು ಹಾಕಿ ಕುದಿಸಿ. 5-6 ಚಮಚ ಹಾಕಿ ಕುದಿಸಿ.
* ನಂತರ ಸ್ಟೌವ್ ಆಫ್ ಮಾಡಿ. ರುಬ್ಬಿದ ಪೇಸ್ಟ್ ಸೇರಿಸಿ.
* ನಂತರ ತಣ್ಣಗಾದ ಮೇಲೆ 4 ಗಂಟೆ ಅಥವಾ ರಾತ್ರಿ ಫ್ರಿಡ್ಜ್‌ನಲ್ಲಿಡಿ.
* ನಂತರ ಮಣ್ಣಿನ ಕಪ್‌ಗೆ ಒಂದು ಚಮಚ ಗುಲ್ಕಾನ್ ಹಾಕಿ, ಥಂಡೈ ಸೇರಿಸಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಪಿಸ್ತಾ, ಗೋಡಂಬಿ ಸ್ವಲ್ಪ ಪುಡಿ ಪುಡಿ ಮಾಡಿ ನಂತರ ಅದಕ್ಕೆ ಕೇಸರಿ ಹಾಕಿ ಅದರಲ್ಲಿಯೇ 45ರಿಂದ ಒಂದು ಗಂಟೆ ಇಡಿ. ನಂತರ ಸರ್ವ್ ಮಾಡಿದರೆ ಥಂಡೈ ರೆಸಿಪಿ ರೆಡಿ.
- ಇದನ್ನು ಬೆಳಗ್ಗೆ ಮಾಡಿಡಿ, ಮಧ್ಯಾಹ್ನ ಬಿಸಿಲಿಗೆ ಸೇವಿಸಿ



Click it and Unblock the Notifications