For Quick Alerts
ALLOW NOTIFICATIONS  
For Daily Alerts

ಅಕ್ಕಿ ಹಾಲುಬಾಯಿ ರೆಸಿಪಿ

Posted By:
|

ಹಾಲು ಕರ್ನಾಟಕದ ವಿಶೇಷ ರೆಸಿಪಿಗಳಲ್ಲಿ ಒಂದಾಗಿದೆ, ಹಬ್ಬಗಳು ಅದರಲ್ಲ ಪಂಚಮಿ ಹಬ್ಬದಲ್ಲಿ ಇದು ಇದ್ದೇ ಇರುತ್ತದೆ. ಅಲ್ಲದೆ ಹಳ್ಳಿ ಸೊಗಡಿ, ಕರ್ನಾಟಕ ಶೈಲಿಯ ಫೇಮಸ್‌ ಹೋಟೆಲ್‌ಗಳಲ್ಲಿಯೂ ಹಾಲುಬಾಯಿ ಸವಿಯಲು ಸಿಗುವುದು. ಈ ಹಾಲುಬಾಯಿಯನ್ನು ಅಕ್ಕಿ ಹಿಟ್ಟಿನಿಮದಲೂ ತಯಾರಿಸಬಹುದು, ರಾಗಿಯಿಂದಲೂ ತಯಾರಿಸಬಹುದು, ಎರಡೂ ರುಚಿಯಾಗಿರುತ್ತೆ.

Halbai Recipe

ನಾವು ಇಲ್ಲಿ ಅಕ್ಕಿ ಹಾಕಿ ಹಾಲುಬಾಯಿ ರೆಸಿಪಿ ನೀಡಲಾಗಿದೆ ನೋಡಿ:
Halbai Recipe, ಹಾಲುಬಾಯಿ ರೆಸಿಪಿ
Halbai Recipe, ಹಾಲುಬಾಯಿ ರೆಸಿಪಿ
Prep Time
10 Mins
Cook Time
40M
Total Time
50 Mins

Recipe By: Reena TK

Recipe Type: Sweet

Serves: Depends

Ingredients
  • ಬೇಕಾಗುವ ಸಾಮಗ್ರಿ

    1 ಕಪ್ ಅಕ್ಕಿ

    1 ಕಪ್ ತೆಂಗಿನಕಾಯಿ ತುರಿ

    3 ಕಪ್ ನೀರು

    1 ಕಪ್ ಬೆಲ್ಲ

    1/4 ಚಮಚ ಉಪ್ಪು

    2 ಚಮಚ ತುಪ್ಪ/ ಬೆಣ್ಣೆ

    1/4 ಚಮಚ ಏಲಕ್ಕಿ ಪುಡಿ

Red Rice Kanda Poha
How to Prepare
  • ಮಾಡುವ ವಿಧಾನ

    * ಅಕ್ಕಿಯನ್ನು 2 ಗಂಟೆ ಕಾಲ ನೆನೆಹಾಕಿ.

    * ನಂತರ ನೀರು ಸೋಸಿ ರುಬ್ಬಲು ಮಿಕ್ಸಿ ಬ್ಲೆಂಡರ್‌ಗೆ ಹಾಕಿ, ಜತೆ 1 ಕಪ್ ತೆಂಗಿನ ತುರಿ, 1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿ.

    * ಒಂದು ಪಾತ್ರೆಯಲ್ಲಿ 1 ಕಪ್ ಬೆಲ್ಲ ಹಾಕಿ ಎರಡು ಕಾಲು ಕಪ್ ನೀರು ಹಾಕಿ ಕುದಿಸಿ, ಬೆಲ್ಲದ ಪಾಕ ತಯಾರಿಸಿ. ಬೆಲ್ಲ ಸಂಪೂರ್ಣ ಕರಗಬೇಕು..

    * ಈಗ ರುಬ್ಬಿದ ಅಕ್ಕಿ ಹಿಟ್ಟಿಗೆ 1/4 ಚಮಚ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ನಂತರ ಮಿಶ್ರಣವನ್ನು ಬೆಲ್ಲದ ಪಾಕದಲ್ಲಿ ಹಾಕಿ ತಿರುಗಿಸುತ್ತಾ ಬೇಯಿಸಿ.

    * ಮಿಶ್ರಣ ಗಂಟು ಕಟ್ಟಬಾರದು, ತಿರುಗಿಸುತ್ತಲೇ ಇರಬೇಕು. ಈಗ ತುಪ್ಪ ಹಾಗೂ ಏಲಕ್ಕೆ ಪುಡಿ ಸೇರಿಸಿ ತಿರುಗಿಸುತ್ತಾಲೇ ಇರಿ. ಮಿಶ್ರಣ ಗಟ್ಟಿಯಾಗಲಾರಂಭಿಸಿದಾಗ ಉರಿಯಿಂದ ಇಳಿಸಿ ಚೆನ್ನಾಗಿ ತಿರುಗಿಸಿ.

    * ಈಗ ಒಂದು ದೊಡ್ಡ ಪ್ಲೇಟ್‌ ಅಥವಾ ಅದೇ ರೀತಿಯ ಪಾತ್ರೆಗೆ ತುಪ್ಪ ಸವರಿ ಮಿಶ್ರಣವನ್ನು ಅದರಲ್ಲಿ ಹಾಕಿ ಒಂದೇ ಸಮವಾಗಿ ಹರಿ 30 ನಿಮಿಷ ಬಿಡಿ.

    * ನಂತರ ಹಾಲುಬಾಯಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಅದರ ಮೇಲೆ ಗೋಡಂಬಿ ಅಥವಾ ಬಾದಾಮಿ ಇಟ್ಟು ಅಲಂಕರಿಸಿ ಸರ್ವ್‌ ಮಾಡಿ.

Instructions
  • ಸಾಂಪ್ರದಾಯಿಕವಾಗಿ ಹಾಲೂ ಬಾಯಿಯನ್ನು ಟ್ರೇ ಬದಲಿಗೆ ಬಾಳೆ ಎಲೆಯಲ್ಲಿ ಹಾಕಿ ಮಾಡಲಾಗುವುದು. * ಅಕ್ಕಿ ಬದಲಿಗೆ ರಾಗಿ ಹಾಕಿ ಕೂಡ ಹಾಲುಬಾಯಿ ತಯಾರಿಸಬಹುದು. * ಇದನ್ನು ಮಾಡಿ ಫ್ರಿಡ್ಜ್‌ನಲ್ಲಿಟ್ಟರೆ 2 ದಿನದವರೆಗೆ ಇಡಬಹುದು
Nutritional Information
[ 5 of 5 - 106 Users]
X
Desktop Bottom Promotion