Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊಳಕೆ ಬರಿಸಿದ ಹೆಸರು ಕಾಳಿನ ಪೊಂಗಲ್: ರುಚಿಕರವಾದ ಬ್ರೇಕ್‌ಫಾಸ್ಟ್ ರೆಸಿಪಿ
ಹೆಸರು ಕಾಳು ಮೊಳಕೆ ಬರಿಸಿದ ಪೊಂಗಲ್ ಮಾಡಿದ್ದೀರಾ? ಖಂಡಿತ ಟ್ರೈ ಮಾಡಲೇಬೇಕಾದ ಸ್ವಾದಿಷ್ಟಕರವಾದ ಬ್ರೇಕ್‌ಫಾಸ್ಟ್ ರೆಸಿಪಿ, ಇದನ್ನು ಮಾಡಿದರೆ ಮಧ್ಯಾಹ್ನ ಲಂಚ್ ಬಾಕ್ಸ್‌ಗೂ ಕಟ್ಟಿಕೊಂಡು ಹೋಗಬಹುದು, ಅಲ್ಲದೆ ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಿಗೂ ಇದನ್ನು ಕೊಡಬಹುದು, ಪೌಷ್ಟಿಕಾಂಶದ ಈ ರುಚಿಕರವಾದ ಬ್ರೇಕ್‌ಫಾಸ್ಟ್ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
1 ಕಪ್ ಮೊಳಕೆ ಬರಿಸಿ ಹೆಸರು ಕಾಳು
2 ಚಮಚ ಹೆಸರು ಬೇಳೆ
3/4 ಕಪ್ ಅಕ್ಕಿ
ಕಾಳು ಮೆಣಸು
ಸ್ವಲ್ಪ ಶುಂಠಿ
1/2 ಚಮಚ ಇಂಗು
ಸ್ವಲ್ಪ ಧನಿಯಾ ಪುಡಿ
ಸ್ವಲ್ಪ ಅರಿಶಿಣ ಪುಡಿ
ಕಾಳುಮೆಣಸು1 ಚಮಚ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
2-3 ಚಮಚ ತುಪ್ಪ
ಗೋಡಂಬಿ
ಕರಿಬೇವು
1 ಚಮಚ ಜೀರಿಗೆ
1/2 ಕಪ್ ಬಿಸಿ ನೀರು ( ಪೊಂಗಲ್ ಹದಕ್ಕೆ ತರಲು)
ಮಾಡುವ ವಿಧಾನ
- ಕುಕ್ಕರ್‌ನಲ್ಲಿ ನೀವು ಹೆಸರು ಬೇಳೆ, ಮೊಳಕೆ ಬರಿಸಿದ ಹೆಸರು ಕಾಳು, ಅಕ್ಕಿ, ಶುಂಠಿ, ಕಾಳು ಮೆಣಸು, ಇಂಗು ಪುಡಿ, ಸ್ವಲ್ಪ ಧನಿಯಾ ಪುಡಿ, ಉಪ್ಪು ಹಾಗೂ ಬೇಯಲು ತಕ್ಕ ನೀರು ಸೇರಿಸಿ 3-4 ವಿಶಲ್ ಬರುವವರೆಗೆ ಬೇಯಿಸಿ.
- ನಂತರ ಅದರ ಪ್ರೆಷರ್ ರಿಲೀಸ್ ಆಗುವವರೆಗೆ ಕಾಯಿರಿ
- ಈಗ ನೀವು ತುಪ್ಪ ಬಿಸಿ ಮಾಡಿ ಅದರಲ್ಲಿ ಗೋಡಂಬಿ, ಜೀರಿಗೆ, ಕರಿಬೇವು (ಬೇಕಿದ್ದರೆ ಕಾಳು ಮೆಣಸು ಕೂಡ ಸೇರಿಸಬಹುದು)
- ಹಾಕಿ ಈ ಒಗ್ಗರಣೆಯನ್ನು ಸೇರಿಸಿ.
- ನಂತರ ಪೊಂಗಲ್ ಹದಕ್ಕೆ ಬಿಸಿನೀರುಸೇರಿಸಿ
- ಈಗ ನೀವು ರೆಡಿಯಾಗ ಪೊಂಗಲ್ ಅನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಸರ್ವ್ ಮಾಡಿ.
ಇತರ ಸಲಹೆ
ನೀವು ಬೇಕಿದ್ದರೆ 1 ಚಮಚ ತುಪ್ಪ, 1 ಚಮಚ ಎಣ್ಣೆ ಸೇರಿಸಬಹುದು, ಬರಿ ತುಪ್ಪ
ಸೇರಿಸಿದರೆ ಪೊಂಗಲ್ ತಣ್ಣಗಾದ ಮೇಲೆ ಅಷ್ಟು ರುಚಿ ಅನಿಸಲ್ಲ, ಅದೆ ಎಣ್ಣೆ ಮಿಕ್ಸ್
ಆಗಿದ್ದರೆ ಪೊಂಗಲ್ ತಣ್ಣಗಾದ ಮೇಲೆ ಕೂಡ ಸವಿಯಬಹುದು.
ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಕಡಿಮೆ ಸಮಯದಲ್ಲಿ ಮಾಡಬಹುದಾದ ತುಂಬಾ ರುಚಿಯಾದ ಬ್ರೇಕ್‌ಫಾಸ್ಟ್ ರೆಸಿಪಿ ಇದಾಗಿದೆ, ಬೆಳಗ್ಗೆ ಬೇಗನೆ ಹೊರಡಬೇಕು, ದೋಸೆ ಮಾಡೋಕೆ ಸಮಯವಿಲ್ಲ ಎಂದು ಹೇಳುವವರು ಇದನ್ನು ಟ್ರೈ ಮಾಡಿ, ದೋಸೆಗಿಂತ ಇದು ತುಂಬಾನೇ ಇಷ್ಟವಾಗುವುದು, ಅಲ್ಲದೆ ನೀವು ಇದನ್ನು ಒಂದು ಬಾರಿ ಟ್ರೈ ಮಾಡಿದರೆ ಪದೇ ಪದೇ ಮಾಡ್ತಾಲೇ ಇರುತ್ತೀರಿ.
ಹೆಸರು ಕಾಳು ನೆನೆ ಹಾಕಿ ಮೊಳಕೆ ಬರಿಸದೆಯೂ ಮಾಡಬಹುದು, ಆದರೆ ನೀವು ಮೊಳಕೆ ಬರಿಸಿ ಮಾಡಿದರೆ ರುಚಿ ಹೆಚ್ಚು ಅಲ್ಲದೆ ಇದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಇದರಲ್ಲಿ ಒಗ್ಗರಣೆಗೆ ಬಳಸಿರುವ ಸಾಮಗ್ರಿಗಳಂತೂ ಆಹಾರದ ಸ್ವಾದ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಇದನ್ನು ಮಾಡಿ ಸ್ವಲ್ಪ ನೀರು ಚಟ್ನಿ ಮಾಡಿ ಸರ್ವ್ ಮಾಡಿ, ತುಂಬಾನೇ ಇಷ್ಟಪಟ್ಟು ಸವಿಯುತ್ತಾರೆ.



Click it and Unblock the Notifications
