Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಕಲ್ಲುಸಕ್ಕರೆಯ ಲಡ್ಡು ರೆಸಿಪಿ: ಇದನ್ನು ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು
ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ರೆಸಿಪಿಗಾಗಿ ನೀವು ಹುಡುಕುತ್ತಿದ್ದರೆ ಈ ರೆಸಿಪಿ ಬೆಸ್ಟ್. ಕಲ್ಲು ಸಕ್ಕರೆ ಕೆಮ್ಮು-ಶೀತ ಕಡಿಮೆ ಮಾಡುತ್ತದೆ, ಬೆಲ್ಲ ಮೈಯನ್ನು ಬೆಚ್ಚಗಿಡುತ್ತದೆ, ತುಪ್ಪ ಜೀರ್ಣಕ್ರಿಯೆಗೆ ಒಳ್ಳೆಯದು, ಗೋಧಿ ಮೈಯನ್ನು ಬೆಚ್ಚಗಿಡುತ್ತದೆ, ನಟ್ಸ್ ಶರೀರಕ್ಕೆ ಇನ್ನೂ ಒಳ್ಳೆಯದು. ಈ ಎಲ್ಲಾ ವಸ್ತುಗಳನ್ನು ಸೇರಿಸಿ ಮಾಡುವ ಈ ಲಡ್ಡು ಚಳಿಗಾಲಕ್ಕೆ ಬೆಸ್ಟ್ ಚಾಯ್ಸ್.

ಮಕ್ಕಳಿಗೆ ಈ ಲಡ್ಡು ಕೊಡುವುದರಿಂದ ಅವರ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಗರ್ಭಿಣಿಯರಿಗೂ ಈ ಲಡ್ಡು ತುಂಬಾನೇ ಆರೋಗ್ಯಕರ. ಈ ಲಡ್ಡು ಮಾಡಿ, ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳವರೆಗೆ ಇಟ್ಟು ಸವಿಯಬಹುದು. ಕಲ್ಲು ಸಕ್ಕರೆ-ಬೆಲ್ಲ ಹಾಕಿ ಮಾಡುವ ಲಡ್ಡು ರೆಸಿಪಿ ಇಲ್ಲಿದೆ ನೋಡಿ:
ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು
3/4 ಕಪ್ ಬೆಲ್ಲದ ಪುಡಿ
1/3 ಕಪ್ ಕಲ್ಲು ಸಕ್ಕರೆ
2 ಚಮಚ ಕೊಬ್ಬರಿ
1/4 ಕಪ್ ಬಾದಾಮಿ, ಗೋಡಂಬಿ ಹಾಗೂ ಒಣದ್ರಾಕ್ಷಿ
1/2 ಚಮಚ ಏಲಕ್ಕಿ ಪುಡಿ
1 ಚಮಚ ಗಸೆಗಸೆ
ಮಾಡುವ ವಿಧಾನ
* ತಪ್ಪ ತಳವಿರುವ ಪ್ಯಾನ್ ತೆಗೆದುಕೊಂಡು ಬಿಸಿ ಮಾಡಿ, ನಂತರ 1 ಚಮಚ ತುಪ್ಪ
ಹಾಕಿ, ತುಪ್ಪ ಕರಗಿದಾಗ ಕತ್ತರಿಸಿದ ಬಾದಾಮಿ, ಗೋಡಂಬಿ ಹಾಕಿ.
* ಗೋಡಂಬಿ ಹಾಗೂ ಬಾದಾಮಿಯನ್ನು ತುಪ್ಪದಲ್ಲಿ ಹುರಿದು ಒಂದು ಕಪ್ಗೆ ಹಾಕಿ
ತಣ್ಣಗಾಗಲು ಬಿಡಿ, ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ.
* ನಟ್ಸ್ ತರಿತರಿಯಾಗಿ ರುಬ್ಬಿದ ಮೇಲೆ ಅದಕ್ಕೆ ಕೊಬ್ಬರಿ ಹಾಕಿ ಮತ್ತೆ
ಪ್ಯಾನ್ನಲ್ಲಿ 2 ನಿಮಿಷ ಫ್ರೈ ಮಾಡಿ.
* ನಂತರ ಈ ಮಿಶ್ರಣವನ್ನು ಒಂದು ಪ್ಲೇಟ್ನಲ್ಲಿ ಹಾಕಿಡಿ.
* ಈಗ ನೀವು 1/4 ಕಪ್ ತುಪ್ಪ ಹಾಕಿ, ಅದಕ್ಕೆ ಕಲ್ಲುಸಕ್ಕರೆ, ನಂತರ ಪುಡಿ ಮಾಡಿಟ್ಟ
ನಟ್ಸ್, ಗ್ಯಾಸ್ ಆಫ್ ಮಾಡಿ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ
ಹಾಕಿಡಿ.
* ಈಗ ಪತ್ತೆ ಪ್ಯಾನ್ ಬಿಸಿ ಮಾಡಿ ಮತ್ತೆ 3 ಚಮಚ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಗೋಧಿ ಹಿಟ್ಟು ಹಾಕಿ ರೋಸ್ಟ್ ಮಾಡಿ, ಅದರ ಹಸಿ ವಾಸನೆ ಹೋಗುವವರೆಗೆ ಹೋಗಲಿ.
* ಗೋಧಿ ಹಿಟ್ಟು ಹುರಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
* ನಂತರ ಹುರಿದ ನಟ್ಸ್ ಸೇರಿಸಿ.
* ನಂತರ ಏಲಕ್ಕಿ, ಬೆಲ್ಲದ ಪುಡಿ ಹಾಕಿ ಹಾಕಿ ಮಿಕ್ಸ್ ಮಾಡಿ, ಈಗ ಅವುಗಳಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ. ನಂತರ ಒಣದ್ರಾಕ್ಷಿಯಿಂದ ಅಲಂಕರಿಸಿ, ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ದಿನಾ ಒಂದು ಅಥವಾ ಎರಡು ತಿನ್ನಲು ಕೊಡಿ.
ಈ ಲಡ್ಡು ತಿನ್ನುವುದರಿಂದ ದೊರೆಯುವ ಪ್ರಮುಖ
ಪ್ರಯೋಜನಗಳು
ವಿಟಮಿನ್ ಡಿ ಕಡಿಮೆ ಇದೆಯೋ ಅವರಿಗೆ ಇದನ್ನು ಬಳಸಲು ಹೇಳಲಾಗುವುದು.
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಇದನ್ನು ತಿನ್ನುವುದರಿಂದ ಮಕ್ಕಳಿಂದ
ಹಿಡಿದು ದೊಡ್ಡವರವರೆಗೆ ಪ್ರಯೋಜನ ಪಡೆಯಬಹುದು. ಹವಾಮಾನ ಬದಲಾದಾಗ ಕಾಡುವ
ಶೀತ-ಕೆಮ್ಮು ಇವುಗಳಿಂದ ರಕ್ಷಣೆ ನೀಡುತ್ತದೆ.
* ಸ್ಟಾಮಿನಾ ಅಂದರೆ ದೇಹದ ಶಕ್ತಿ ಹೆಚ್ಚುವುದು
* ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.
* ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಧಿಕ ಪೋಷಕಾಂಶ ಬೇಕಾಗಿರುತ್ತದೆ, ಅವರಿಗೆ ಈ ಆಹಾರ ತುಂಬಾನೇ ಒಳ್ಳೆಯದು.
* ಯಾರು ತೂಕ ಹೆಚ್ಚಾಗಬೇಕೆಂದು ಬಯಸುತ್ತಾರೋ ಅವರು ದಿನಾ ಒಂದು ತಿನ್ನಿ. ಆದರೆ ಮಿತಿಯಲ್ಲಿ ತಿನ್ನಿ.
* ಈ ಲಡ್ಡು ಮಾಡುವಾಗ ಬಳಸುವ ಸಾಮಗ್ರಿಗಳಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
* ಈ ಲಡ್ಡು ತಿಂದರೆ ಬೇಗನೆ ಹಸಿವು ಉಂಟಾಗಲ್ಲ, ಹೀಗಾಗಿ ಆಗಾಗ ತಿನ್ನುವ ಚಟಕ್ಕೆ ಕಡಿವಾಣ ಹಾಕಿ ತೂಕ ನಿಯಂತ್ರಣದ ಕಡೆ ಗಮನ ಹರಿಸಬಹುದು.
ಎಷ್ಟು ತಿನ್ನಬೇಕು?
ದಿನದಲ್ಲಿ ಒಂದು ಲಡ್ಡು ತಿನ್ನಿ, ಹೆಚ್ಚೆಂದರೆ ಎರಡು ತಿಂದರೆ ಸಾಕು, ಮಕ್ಕಳಿಗೆ
ಒಂದು ಲಡ್ಡು ಕೊಟ್ಟರೆ ಸಾಕು.



Click it and Unblock the Notifications