Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋಕುಲ್ ಪಿಥೆ-ಸಂಕ್ರಾಂತಿಗೆ ಬೆಂಗಾಳಿ ಶೈಲಿಯ ರುಚಿಕರವಾದ ರೆಸಿಪಿ

ಮಕರ ಸಂಕ್ರಾಂತಿಗೆ ಎಳ್ಳು-ಬೆಲ್ಲದ ರೆಸಿಪಿ ನಾವೆಲ್ಲಾ ಮಾಡುತ್ತೇವೆ, ಇದರ ಜೊತೆಗೆ ವಿಶೇಷವಾದ ಇನ್ನಿತರ ಸಿಹಿ ತಿಂಡಿಗಳನ್ನು ಮಾಡ ಬಯಸುವುದಾದರೆ ಬೆಂಗಾಳಿ ಶೈಲಿಯ ಗೋಕುಲ ಪಿಥೆ ಟ್ರೈ ಮಾಡಬಹುದು, ಇದು ತುಂಬಾ ರುಚಿಯಾಗಿರುತ್ತೆ ಅಲ್ಲದೆ ಮಾಡುವ ವಿಧಾನ ಕೂಡ ಸರಳವಾಗಿದೆ.
Recipe By: Reena TK
Recipe Type: snacks
Serves: 10
-
ಬೇಕಾಗುವ ಸಾಮಗ್ರಿ
ತುರಿದ ತೆಂಗಿನಕಾಯಿ-250 ಗ್ರಾಂ
ಕೋಯಾ:500ಗ್ರಾಂ
ಕಪ್ಪು ಬೆಲ್ಲ 11/2 ಕಪ್
ಮೈದಾ 3/4 ಕಪ್
ತುಪ್ಪ 1 ಕಪ್
2 ಚಮಚ ಸೂಜಿ ರವೆ
2 ಕಪ್ ಕೆನೆ ಹಾಲು (ಕಾಲು ಲೀಟರ್) /Otional
ಚಿಟಿಕೆಯಷ್ಟು ಉಪ್ಪು
ಪಾಕ ಮಾಡಲು
200ಗ್ರಾಂ ಬೆಲ್ಲ
3 ಕಪ್ ನೀರು
ಫ್ರೈ ಮಾಡಲು
1 ಕಪ್ ಎಣ್ಣೆ
1 ಚಮಚ ತುಪ್ಪ
-
ಮಾಡುವ ವಿಧಾನ
* ಬೆಲ್ಲವನ್ನು ತುರಿಯಿರಿ ಅಥವಾ ಚಿಕ್ಕದಾಗಿ ಪುಡಿ ಮಾಡಿ ಇಟ್ಟುಕೊಳ್ಳಿ
* ನಾನ್ಸ್ಟಿಕ್ ಪ್ಯಾನ್ ಬಿಸಿ ಮಾಡಿ ಅದರಲ್ಲಿ ತೆಂಗಿನ ತುರಿ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಅದನ್ನು ಹುರಿಯುವಾಗ ಅದರಿಂದ ಒಳ್ಳೆಯ ಘಮ ಬರುತ್ತೆ, ಅಷ್ಟರವರೆಗೆ ಹುರಿಯಿರಿ.
* ಈಗ ತುರಿದ ಕೋವಾ ಸೇರಿಸಿ.
* ತೆಂಗಿನ ತುರಿ ಜೊತೆ ಕೋವಾ ಸಂಪೂರ್ಣ ಮಿಶ್ರ ಆಗುವವರೆಗೆ ಫ್ರೈ ಮಾಡಿ.
* ಮಿಶ್ರಣ ಮಂದವಾಗಬೇಕು, ಈಗ ಬೆಲ್ಲ ಹಾಕಿ, ಆಗ ಮಿಶ್ರಣ ಅಂಟು-ಅಂಟಾಗುವುದು
* ಈಗ ಉರಿ ಆಫ್ ಮಾಡಿ
* ಈಗ ಚಿಕ್ಕ-ಚಿಕ್ಕ ಉಂಡೆಗಳನ್ನಾಗಿ ಮಾಡಿ.
ಒಳಗೆ ತುಂಬಲು
* ಈಗ ಹಾಲನ್ನು ಬಿಸಿ ಮಾಡಿ, ಅದಕ್ಕೆ ರವೆ ಹಾಕಿ ಕುದಿಸಿ
* ಈಗ ಉಪ್ಪು ಹಾಕಿ, ಅದಕ್ಕೆ ಮೈದಾ ಹಾಗೂ ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ
* ಗಂಟು-ಗಂಟಾಗದಿರಲು ಸೌಟ್ನಿಂದ ತಿರುಗಿಸುತ್ತಾ ಇರಬೇಕು
* ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಗ್ಯಾಸ್ ಉರಿ ಆಫ್ ಮಾಡಿ.
ಬೆಲ್ಲ ಪಾಕ ತಯಾರಿಸಿ
3 ಕಪ್ ನೀರಿಗೆ ಬೆಲ್ಲ ಹಾಕಿ ಕುದಿಸಿ ಬೆಲ್ಲ ಪಾಕ ತಯಾರಿಸಿ, ಪಾಕ ಸ್ವಲ್ಪ ಮಂದವಾಗಿರಲಿ. ನಂತರ ಸೋಸಿ.
ಎಣ್ಣೆಯಲ್ಲಿ ಕರಿಯಲು
* ಎಣ್ಣೆಗೆ 1 ಚಮಚ ತುಪ್ಪ ಸೇರಿಸಿ ಕುದಿಸಿ
* ಈಗ ಬಾಲ್ಗೆ ತಯಾರು ಮಾಡಿಟ್ಟ ಮೈದಾ ಹಿಟ್ಟು ಅಂಟಿಸಿ, ನಂತರ ಎಣ್ನೆ ಕಾದಾಗ ಒಂದೊಂದೇ ಎಣ್ಣೆಯಲ್ಲಿ ಬಿಟ್ಟು ಕರಿದು ತೆಗೆಯಿರಿ.
* ನಂತರ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಸಕ್ಕರೆ ಪಾಕ ಅಥವಾ ಬೆಲ್ಲ ಪಾಕದಲ್ಲಿ 2-3 ನಿಮಿಷ ಹಾಕಿಡಿ. ನಂತರ ತೆಗೆದು ಬೌಲ್ನಲ್ಲಿ ಹಾಕಿ.
ಸರ್ವ್ ಮಾಡುವಾಗ ಒಂದು ಚಮಚ ಬೆಲ್ಲದ ಸಿರಪ್ ಹಾಕಿ ಸವಿಯಬಹುದು.
- ನೀವು ಎಣ್ಣೆಗೆ ಹಾಕುವ ಮುನ್ನ ಎಳ್ಳಿನಲ್ಲಿ ಮಿಶ್ರ ಮಾಡಿ ಹಾಕಬಹುದು, ಹಾಗೆಯೂ ಹಾಕಬಹುದು.



Click it and Unblock the Notifications