Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಮೂಲಿ ರೈಸ್‌ಗೆ ಹೇಳಿ ಬೈ-ಬೈ.. 10 ನಿಮಿಷದಲ್ಲಿ ಮಾಡಿ ಹೊಸ ರುಚಿಯ ರೈಸ್! ಸಖತ್ ಟೇಸ್ಟಿ, ತುಂಬಾ ಈಸಿ
ರೆಗ್ಯುಲರ್ ಅನ್ನಕ್ಕೆ ಹೇಳಿ ಬೈ-ಬೈ.. ಹತ್ತೇ ನಿಮಿಷದಲ್ಲಿ ಮಾಡಿ ರುಚಿಕರ ಗೋಬಿ ಫ್ರೈಡ್ ರೈಸ್! ಇಲ್ಲಿದೆ ಸುಲಭ ರೆಸಿಪಿ. ಹೌದು, ನಿರಂತರ ಒಂದೇ ಬಗೆಯ ಆಹಾರದಿಂದ ಬೇಸರಗೊಂಡಿರುವವರಿಗೆ, 'ಗೋಬಿ ಫ್ರೈಡ್ ರೈಸ್' (Gobi Fried Rice) ಉತ್ತಮ ಬದಲಾವಣೆ ನೀಡುತ್ತದೆ. ಹೂಕೋಸು ಮತ್ತು ಅನ್ನದ ಈ ವಿಶಿಷ್ಟ ಸಂಯೋಜನೆಯ ಖಾದ್ಯವು ರೆಸ್ಟೋರೆಂಟ್‌ಗಳ ರುಚಿಯನ್ನು ಮನೆಯಲ್ಲಿಯೇ ತರುತ್ತದೆ.
ಇದು ಮಕ್ಕಳಿಗೆ ಲಂಚ್ ಬಾಕ್ಸ್‌ಗೆ ಅಥವಾ ಸಂಜೆಯ ಊಟಕ್ಕೆ ಸೂಕ್ತ ಆಯ್ಕೆಯಾಗಿದೆ. ಕೇವಲ ತರಕಾರಿಗಳನ್ನು ಬಳಸುವ ಸಾಮಾನ್ಯ ಫ್ರೈಡ್ ರೈಸ್‌ಗಿಂತ (Fried Rice), ಗೋಬಿ (Gobi) ಬಳಸಿ ಮಾಡುವ ಈ ಅಡುಗೆ ವಿಭಿನ್ನ, ಆರೋಗ್ಯಕರ ಹಾಗೂ ಪೌಷ್ಟಿಕವಾಗಿದೆ. ಅತಿ ಕಡಿಮೆ ಸಮಯದಲ್ಲಿ, ಸುಲಭವಾಗಿ ಈ ರುಚಿಕರ ಗೋಬಿ ಫ್ರೈಡ್ ರೈಸ್ ತಯಾರಿಸುವ ವಿಧಾನ (Gobi Fried Rice Recipe) ಮತ್ತು ತಯಾರಿಸಲು ಬೇಕಾಗುವ ಸಾಮಗ್ರಿಗಳು ಇಲ್ಲಿವೆ.
ಗೋಬಿ ಫ್ರೈಡ್ ರೈಸ್‌ಗೆ ಬೇಕಾಗುವ ಸಾಮಗ್ರಿಗಳು
• ಅನ್ನ - 1 ಕಪ್ (ಉದುರು ಉದುರಾದ ಅನ್ನ)
• ಹೂಕೋಸು (ಗೋಬಿ) - 1
• ಕ್ಯಾರೆಟ್ - 1
• ಕ್ಯಾಪ್ಸಿಕಂ - 1
• ಹಸಿ ಬಟಾಣಿ - 1/2 ಕಪ್
• ಟೊಮ್ಯಾಟೊ - 1
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
• ಕೊತ್ತಂಬರಿ ಸೊಪ್ಪು - 2 ಚಮಚ
• ಜೀರಿಗೆ - 1/2 ಚಮಚ
• ಇಂಗು - ಒಂದು ಚಿಟಿಕೆ
• ಅಚ್ಚಖಾರದ ಪುಡಿ - 1/2 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ನಿಂಬೆ ರಸ - 2 ಚಮಚ
• ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ಗೋಬಿ ಫ್ರೈಡ್ ರೈಸ್ ಮಾಡುವ ವಿಧಾನ
ಮನೆಯಲ್ಲಿಯೇ ಗೋಬಿ ಫ್ರೈಡ್ ರೈಸ್ ಮಾಡಲು ಈ ಸರಳ ವಿಧಾನಗಳನ್ನು ಅನುಸರಿಸಿ.
- ಮೊದಲು ಹೂಕೋಸನ್ನು ಸ್ವಚ್ಛವಾಗಿ ತೊಳೆದು ತುರಿದುಕೊಳ್ಳಿ.
- ನಂತರ ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಟೊಮ್ಯಾಟೊಗಳನ್ನು ಸಣ್ಣಗೆ ಹೆಚ್ಚಿ ಸಿದ್ಧಪಡಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಜೀರಿಗೆ ಮತ್ತು ಚಿಟಿಕೆ ಇಂಗು ಹಾಕಿ ಸಿಡಿಸಿ.
- ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
- ಈಗ ಬಾಣಲೆಗೆ ತುರಿದ ಹೂಕೋಸು ಮತ್ತು ಹೆಚ್ಚಿದ ಎಲ್ಲಾ ತರಕಾರಿಗಳನ್ನು (ಕ್ಯಾರೆಟ್, ಕ್ಯಾಪ್ಸಿಕಂ, ಟೊಮ್ಯಾಟೊ) ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಸ್ವಲ್ಪ ಉಪ್ಪು ಸೇರಿಸಿ, ಮುಚ್ಚಳ ಮುಚ್ಚಿ ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ತರಕಾರಿಗಳು ಮೃದುವಾಗಲು ಇದು ಅಗತ್ಯ.
- ತರಕಾರಿಗಳು ಬೆಂದ ನಂತರ, ಮೊದಲೇ ಬೇಯಿಸಿಟ್ಟುಕೊಂಡ ಉದುರು ಉದುರಾದ ಅನ್ನ ಹಾಗೂ ಬೇಯಿಸಿದ ಹಸಿ ಬಟಾಣಿ ಸೇರಿಸಿ.
- ನಂತರ ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಿಧಾನವಾಗಿ ಕಲಸಿ. ಮಸಾಲೆಗಳು ಅನ್ನಕ್ಕೆ ಚೆನ್ನಾಗಿ ಮಿಶ್ರಣವಾಗುವಂತೆ ನೋಡಿಕೊಳ್ಳಿ.
- ಅಂತಿಮವಾಗಿ, ಎರಡು ಚಮಚ ನಿಂಬೆ ರಸವನ್ನು ಮೇಲೆ ಉದುರಿಸಿ, ನುಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
- ಇಷ್ಟು ಮಾಡಿದರೆ ಸಾಕು, ಈಗ ಬಿಸಿ ಬಿಸಿಯಾದ ಗೋಬಿ ಫ್ರೈಡ್ ರೈಸ್ ಸವಿಯಲು ಸಿದ್ಧ.
ಉತ್ತಮ ಫಲಿತಾಂಶಕ್ಕಾಗಿ, ತಣ್ಣಗಿನ ಅನ್ನ ಬಳಸಿದರೆ ಫ್ರೈಡ್ ರೈಸ್ ಹೆಚ್ಚು ಉದುರುದುರಾಗಿ ಬರುತ್ತದೆ. ನಿಮಗೆ ಇಷ್ಟವಾದರೆ, ಸ್ವಲ್ಪ ಸೋಯಾ ಸಾಸ್ ಅಥವಾ ಗ್ರೀನ್ ಚಿಲ್ಲಿ ಸಾಸ್ ಸಹ ಸೇರಿಸಬಹುದು. ಹೊರಗಿನ ಹೋಟೆಲ್ ಆಹಾರಕ್ಕಿಂತ ಆರೋಗ್ಯಕರವಾಗಿ, ಮನೆಯಲ್ಲೇ ಶುಚಿಯಾಗಿ ಮಾಡಿದ ಈ ಗೋಬಿ ಫ್ರೈಡ್ ರೈಸ್ ಮಕ್ಕಳು ಮತ್ತು ದೊಡ್ಡವರೆಲ್ಲರಿಗೂ ಪ್ರಿಯವಾಗುತ್ತದೆ. ಇದು ಕಡಿಮೆ ಎಣ್ಣೆ ಮತ್ತು ಹೆಚ್ಚು ತರಕಾರಿ ಬಳಕೆಯಿಂದ ಪೌಷ್ಟಿಕಾಂಶಭರಿತ ಆಹಾರವಾಗಿದೆ.



Click it and Unblock the Notifications
