Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಂಠಿ ಟೀ ರೆಸಿಪಿ: ಚಳಿಗಾಲದಲ್ಲಿಆರೋಗ್ಯ ರಕ್ಷಣೆ ಮಾಡುತ್ತೆ ಈ ಟೀ
ಎಲ್ಲಾ ಕಡೆ ಮಳೆ, ಈ ಅಕಾಲಿ ಮಳೆಯಿಂದಾಗಿ ಕಾಯಿಲೆ ಕೂಡ ಹೆಚ್ಚಾಗುತ್ತಿದೆ. ಶೀತ, ಕೆಮ್ಮು, ಜ್ವರ ಅಂತ ಆಸ್ಪತ್ರೆಗಳಲ್ಲಿ ರೋಗಿಗಳ ಸಾಲು ಹೆಚ್ಚಾಗುತ್ತಿದೆ, ಕೆಲವುಕಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ, ಮಳೆನೀರಿನಲ್ಲಿ ಒಡಾಡಿ, ಮನೆ ಸ್ವಚ್ಛ ಮಾಡಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.ಈ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುವ ಶುಂಟಿ ಕಷಾಯ ರೆಸಿಪಿ ನೀಡಿದ್ದೇವೆ. ಇದನ್ನುಈ ಸಮಯದಲ್ಲಿ ಪ್ರತಿನಿತ್ಯ ಮಾಡಿ ಕುಡಿಯಿರಿ ಇದರಿಂದ ಈ ಬಗೆಯ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ತಡೆಗಟ್ಟಬಹುದಾಗಿದೆ.
ಇನ್ನು ಈಗಾಗಲೇ ಶೀತ, ಕೆಮ್ಮು, ಜ್ವರ ಈ ಬಗೆಯ ಆರೋಗ್ಯ ಸಮಸ್ಯೆಯಿದ್ದರೆ ಈ ಟೀ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಟೀಯನ್ನು ಸುಲಭವಾಗಿ ಮಾಡಬಹುದು. ಬರಿ ಶುಂಠಿ, ನೀರು, ಜೇನು ಹಾಕಿ ಮಾಡಬಹುದು ಅಥವಾ ಈ ಬಗೆಯ ಸಾಮಗ್ರಿ ಬಳಸಿ ಕೂಡ ಮಾಡಬಹುದು. ಬನ್ನಿ ಈ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟೀ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
- 1 ಚಮಚ ತುರಿದ ಶುಂಠಿ ಅಥವಾ ಸ್ವಲ್ಪ ಜಜ್ಜಿದ ಶುಂಠಿ
- 2 ಕಪ್ ನೀರು
- ಈ ವಸ್ತುಗಳನ್ನು ಕೂಡ ಸೇರಿಸಬಹುದು
- 1 ಚಿಕ್ಕ ತುಂಡು ಶುಂಠಿ
- 1 ಚಿಕ್ಕ ತುಂಡು ಅರಿಶಿಣ (ಜಜ್ಜಿದ್ದು)
- ಕಿತ್ತಳೆಯ ರೌಂಡ್ ಶೇಪ್‌ನ ತುಂಡು
- 1 ಚಮಚ ಸೋಂಪು
ಇವುಗಳಲ್ಲಿ ಯಾವುದಾದರು ಒಂದು ಹಾಕಬಹುದು, ಒಂದೊಂದು ಫ್ಲೇವರ್ ಸಿಗುತ್ತದೆ. ಎಲ್ಲಾ ಒಟ್ಟಿಗೆ ಬಳಸಿದರೆ ಅದು ಕಷಾಯವಾಗುತ್ತೆ. ಶೀತ, ಕೆಮ್ಮು ಇಂಥದ್ದೆಲ್ಲ ಪಟ್ ಅಂತ ಮಾಯವಾಗುತ್ತೆ.
ಈ ಟೀ ಹಾಗೆಯೇ ಸರ್ವ್ ಮಾಡಬಹುದು ಅಥವಾ ಮ್ಯಾಪಲ್ ಸಿರಪ್ ಅಥವಾ ಜೇನು ಸೇರಿಸಿ ಸರ್ವ್ ಮಾಡಬಹುದು.
ಚಳಿಗಾಲದಲ್ಲಿಯೂ ಈ ಟೀ ಬೆಸ್ಟ್
ಚಳಿಗಾಲ ಶುರುವಾಗಿದೆ, ಫೆಬ್ರವರಿವರೆಗೆ ಚಳಿಗಾಲವಿರಲಿದೆ, ಹಾಗಾಗಿ ಈ ಟೀ ಪ್ರತಿದಿನ ಕುಡಿದರೆ ಮೈ ಮೆಚ್ಚಗಿಡಲು ತುಂಬಾನೇ ಸಹಕಾರಿಯಾಗಿದೆ. ಇನ್ನು ಅಜೀರ್ಣ ಸಮಸ್ಯೆ ಇದ್ದರಂತೂ ಈ ಟೀ ಸಹಕಾರಿ. ಹಬ್ಬದ ಅಡುಗೆ ತಿಂದಾಗ ಬೇಗನೆ ಕರಗಲು ಈ ಟೀ ಸಹಕಾರಿ, ಹೀಗೆ ಈ ಟೀಯಿಂದ ಹತ್ತು ಹಲವು ಪ್ರಯೋಜನಗಳಿವೆ.
ಈ ಟೀ ಯಾವ ಸಮಯದಲ್ಲಿ ಕುಡಿಯುವುದು ಒಳ್ಳೆಯದು?
ಈ ಟೀಯನ್ನು ಬೆಳಗ್ಗೆ ಕುಡಿಯಬಹುದು, ಮಧ್ಯಾಹ್ನದ ಹೊತ್ತಿಗೆ ಕುಡಿಯಬಹುದು ಅಥವಾ
ರಾತ್ರಿ ಊಟವಾದ ಬಳಿಕ ಕೂಡ ಕುಡಿಯಬಹುದು, ಆದರೆ ಮೂರು ಹೊತ್ತು ಕುಡಿಯಬೇಡಿ.
ಯಾವುದಾದರು ಒಂದು ಸಮಯದಲ್ಲಿ ಕುಡಿದರೆ ಸಾಕಾಗುತ್ತೆ .
ಕ್ಯಾಲೋರಿ ಫ್ರೀ ಡ್ರಿಂಕ್
ಕ್ಯಾಲೋರಿ ಫ್ರೀ ಡ್ರಿಂಕ್ ಆಯ್ಕೆ ಮಾಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದು
ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿಯಾಗಿದೆ.
ಶುಂಠಿ ಚಕ್ಕೆ ಟೀ
ಈ ಟೀ ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿಡಲು ಸಹಕಾರಿಯಾಗಿದೆ.
ಶುಂಠಿ- ಅರಿಶಿಣ ಪುಡಿ ಹಾಕಿ ಕುಡಿಯುವುದರಿಂದ ಉರಿಯೂತ ಕಡಿಮೆಯಾಗುವುದು.
ಶುಂಠಿ- ಪುದೀನ ಟೀ
ಈ ಟೀ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ವಾರದಲ್ಲಿ ಎರಡರಿಂದ
ಮೂರು ಬಾರಿ ಸೇವಿಸಿ.



Click it and Unblock the Notifications