Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಸಗಸೆ ಪಾಯಸ ರೆಸಿಪಿ
ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗಸಗಸೆ ಪಾಯಸವೂ ಒಂದು. ಈ ಸಿಹಿ ಭಕ್ಷ್ಯವನ್ನು ಮಂಗಳಕರ ಸಂದರ್ಭಗಳಲ್ಲಿ ಹಾಗೂ ಹಬ್ಬಗಳಲ್ಲಿ ತಯಾರಿಸುತ್ತಾರೆ. ಗಸಗಸೆ ಬೀಜ, ತೆಂಗಿನ ಕಾಯಿ ಹಾಗೂ ಬೆಲ್ಲ ಬಳಸಿ ಇದನ್ನು ತಯಾರಿಸಲಾಗುತ್ತದೆ. ದೇಹಕ್ಕೆ ಹೆಚ್ಚು ತಂಪನ್ನು ನೀಡುವ ಗಸಗಸೆ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.
ಬಾಯಿ ಹುಣ್ಣು ಮತ್ತು ನಿದ್ರಾಹೀನತೆ ಉಂಟಾದಾಗ ಈ ಪಾಯಸವನ್ನು ಸೇವಿಸುತ್ತಾರೆ. ಇದು ಔಷಧಿಯಂತೆ ಕಾರ್ಯ ನಿರ್ವಹಿಸಿ, ಆರೋಗ್ಯದ ಆರೈಕೆಯನ್ನು ಮಾಡುತ್ತದೆ. ಇದರ ಪಾಯಸವನ್ನು ಒಂದು ಗ್ಲಾಸ್‍ಗಿಂತ ಹೆಚ್ಚು ಸೇವಿಸಿದರೆ ನಿದ್ರೆಗೆ ಒಳಗಾಗಬೇಕಾಗುವುದು.
ನಿಮಗೆ ಬೆಲ್ಲದಿಂದ ತಯಾರಿಸಿದ ಸಿಹಿ ಇಷ್ಟವಾಗುತ್ತದೆ ಎಂದರೆ ಗಸಗಸೆ ಪಾಯಸವನ್ನು ಚಪ್ಪರಿಸಿ ತಿನ್ನುತ್ತೀರಿ. ಸರಳವಾದ ವಿಧಾನವನ್ನು ಒಳಗೊಂಡ ಈ ಪಾಕವಿಧಾನವನ್ನು ಬಹು ಬೇಗ ತಯಾರಿಸಬಹುದು. ಈ ಪಾಯಸ ತಯಾರಿಸುವುದು ಹೇಗೆ ಎಂದು ಹೆಚ್ಚು ಚಿಂತಿಸಬೇಕಿಲ್ಲ. ನಿಮಗಾಗಿ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ನೀಡುತ್ತಿದ್ದೇವೆ...

Recipe By: ಕಾವ್ಯಶ್ರೀ ಎಸ್
Recipe Type: ಸಿಹಿ ತಿಂಡಿ
Serves: 4 ಮಂದಿಗೆ
-
ಗಸಗಸೆ - 3 ಚಮಚ
ಬೆಲ್ಲ - 1/2 ಮಧ್ಯಮ ಗಾತ್ರದ ಬೌಲ್
ನೀರು - 1/2 ಗ್ಲಾಸ್
ತೆಂಗಿನತುರಿ - 1 ಕಪ್
ಏಲಕ್ಕಿ - 2
ನೀರು - 1/4 ಕಪ್
-
1. ಬಿಸಿಯಾದ ದಪ್ಪ ತಳದ ಪಾತ್ರೆಯಲ್ಲಿ ಗಸಗಸೆಯನ್ನು ಹಾಕಿ
2. ಎಣ್ಣೆ ರಹಿತವಾಗಿ, ಹೊಂಬಣ್ಣ ಬರುವವರೆಗೆ ಹುರಿಯಿರಿ.
3. ಹುರಿದ ನಂತರ ಉರಿಯನ್ನು ಆರಿಸಿ, ಗಸಗಸೆಯನ್ನು ಆರಲು ಇಡಿ.
4. ಈ ನಡುವೆಯೇ ಬಿಸಿಯಾದ ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿರಿ.
5. ಇದಕ್ಕೆ ಕಾಲು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕದಡಿ.
6. ಇದಕ್ಕೆ ಮುಚ್ಚಳವನ್ನು ಮುಚ್ಚಿ, ಬೆಲ್ಲ ಸಂಪೂರ್ಣವಾಗಿ ಕರಗಲು ಬಿಡಿ.
7. ಈ ಸಮಯದಲ್ಲಿ ಗಸಗಸೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
8. ಅದೇರೀತಿ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು.
9. ಇದು ಮೃದುವಾದ ಪೇಸ್ಟ್‌ನಂತೆ ಆಗಲು ಕಾಲು ಕಪ್‍ನಷ್ಟು ನೀರನ್ನು ಸೇರಿಸಿಕೊಳ್ಳಿ.
10. ಬೆಲ್ಲ ಕರಗಿದ ಮೇಲೆ ರುಬ್ಬಿಕೊಂಡ ತೆಂಗಿನ ತುರಿ ಹಾಗೂ ಗಸಗಸೆಯನ್ನು ಸೇರಿಸಿ.
11. ಇವೆಲ್ಲವನ್ನು ಸೇರಿಸಿದ ಮೇಲೆ 2-3 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.
12. ತಳ ಹಿಡಿಯುವುದನ್ನು ತಡೆಯಲು ಆಗಾಗ ಕೈಯಾಡಿಸುತ್ತಲೇ ಇರಿ.
13. ಸವಿಯಲು ನೀಡುವ ಮುನ್ನ ಒಮ್ಮೆ ಬಿಸಿಮಾಡಿ ಕೊಡಿ.
- 1. ಪಾಯಸದ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸಲು ಹಾಲನ್ನು ಬೆರೆಸಬಹುದು.
- 2. ಪಾಯಸ ಸ್ವಲ್ಪ ದಪ್ಪ/ಗಟ್ಟಿಯಾಗಬೇಕೆಂದರೆ ಗಸಗಸೆ ಮತ್ತು ತೆಂಗಿನತುರಿ ರುಬ್ಬಿಕೊಳ್ಳುವಾಗ, ನೆನೆಸಿಟ್ಟುಕೊಂಡ ಅಕ್ಕಿಯನ್ನು ಸ್ವಲ್ಪ ಸೇರಿಸಿ ರುಬ್ಬಬಹುದು.
- 3. ಪಾಯಸಕ್ಕೆ ಬೆಲ್ಲದ ಬದಲು ಸಕ್ಕರೆಯನ್ನು ಬಳಸಬಹುದು. ಆದರೆ ಇದರ ರುಚಿಯಲ್ಲಿ ಸಂಪೂರ್ಣ ಬದಲಾವಣೆ ಇರುತ್ತದೆ.
- 4. ಒಣ ಹಣ್ಣುಗಳನ್ನು ಹುರಿದು ಪಾಯಸಕ್ಕೆ ಸೆರಿಸಬಹುದು. ಇದೊಂದು ಒಳ್ಳೆಯ ಆಯ್ಕೆಯೂ ಹೌದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರೀಸ್ - 136 ಕ್ಯಾಲ್
- ಫ್ಯಾಟ್ - 4 ಗ್ರಾಂ
- ಪ್ರೋಟೀನ್ - 3 ಗ್ರಾಂ
- ಕಾರ್ಬೋಹೈಡ್ರೇಟ್ - 14 ಗ್ರಾಂ
- ಸಕ್ಕರೆ - 9 ಗ್ರಾಂ
- ಐರನ್ - ಶೇ.5ರಷ್ಟು
ಹಂತ ಹಂತವಾದ ಚಿತ್ರವಿವವರಣೆ
1. ಬಿಸಿಯಾದ ದಪ್ಪ ತಳದ ಪಾತ್ರೆಯಲ್ಲಿ ಗಸಗಸೆಯನ್ನು ಹಾಕಿ.

2. ಎಣ್ಣೆ ರಹಿತವಾಗಿ, ಹೊಂಬಣ್ಣ ಬರುವವರೆಗೆ ಹುರಿಯಿರಿ.

3. ಹುರಿದ ನಂತರ ಉರಿಯನ್ನು ಆರಿಸಿ, ಗಸಗಸೆಯನ್ನು ಆರಲು ಇಡಿ.

4. ಈ ನಡುವೆಯೇ ಬಿಸಿಯಾದ ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿರಿ.

5. ಇದಕ್ಕೆ ಕಾಲು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕದಡಿ.

6. ಇದಕ್ಕೆ ಮುಚ್ಚಳವನ್ನು ಮುಚ್ಚಿ, ಬೆಲ್ಲ ಸಂಪೂರ್ಣವಾಗಿ ಕರಗಲು ಬಿಡಿ.

7. ಈ ಸಮಯದಲ್ಲಿ ಗಸಗಸೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

8. ಅದೇರೀತಿ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು.

9. ಇದು ಮೃದುವಾದ ಪೇಸ್ಟ್‌ನಂತೆ ಆಗಲು ಕಾಲು ಕಪ್‍ನಷ್ಟು ನೀರನ್ನು ಸೇರಿಸಿಕೊಳ್ಳಿ.

10. ಬೆಲ್ಲ ಕರಗಿದ ಮೇಲೆ ರುಬ್ಬಿಕೊಂಡ ತೆಂಗಿನ ತುರಿ ಹಾಗೂ ಗಸಗಸೆಯನ್ನು ಸೇರಿಸಿ.

11. ಇವೆಲ್ಲವನ್ನು ಸೇರಿಸಿದ ಮೇಲೆ 2-3 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.

12. ತಳ ಹಿಡಿಯುವುದನ್ನು ತಡೆಯಲು ಆಗಾಗ ಕೈಯಾಡಿಸುತ್ತಲೇ ಇರಿ.

13. ಸವಿಯಲು ನೀಡುವ ಮುನ್ನ ಒಮ್ಮೆ ಬಿಸಿಮಾಡಿ ಕೊಡಿ.

Click it and Unblock the Notifications