Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಇಡ್ಲಿ, ದೋಸೆಯ ಟೇಸ್ಟ್ ಹೆಚ್ಚಿಸುತ್ತೆ ಈ ಬೆಳ್ಳುಳ್ಳಿ-ಕಾಯಿ ಚಟ್ನಿ
ದೋಸೆ ಅಥವಾ ಇಡ್ಲಿ ಮಾಡುವಾಗ ಒಂದೇ ರುಚಿಯಲ್ಲಿ ಚಟ್ನಿ ಮಾಡುವುದಕ್ಕಿಂತ ಭಿನ್ನ ರುಚಿಯ ಚಟ್ನಿ ದೋಸೆ, ಇಡ್ನಿ ಈ ಬಗೆಯ ಬ್ರೇಕ್‌ಫಾಸ್ಟ್‌ಗಳ ಸ್ವಾದ ಹೆಚ್ಚಿಸುವುದು. ನೀವು ಇಡ್ಲಿ, ದೋಸೆ ಜೊತೆ ಸವಿಯಲು ಬೆಳ್ಳುಳ್ಳಿ ಚಟ್ನಿ ಟ್ರೈ ಮಾಡಲು ಬಯಸುವುದಾದರೆ ಈ ಚಟ್ನಿ ಟ್ರೈ ಮಾಡಿ. ಈ ಚಟ್ನಿ ತುಂಬಾನೇ ರುಚಿಯಾಗಿರುತ್ತದೆ. ಬನ್ನಿ ಈ ಬೆಳ್ಳುಳ್ಳಿ ಚಟ್ನಿಯ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
ತೆಂಗಿನತುರಿ
ಬೆಳ್ಳುಳ್ಳಿ
ಒಣ ಮೆಣಸು
ಉಪ್ಪು
ಹುಣಸೆಹಣ್ಣು
ಒಗ್ಗರಣೆಗೆ ಎಣ್ಣೆ
ಸಾಸಿವೆ
ಕರಿಬೇವು
ಒಣಮೆಣಸು
ಚಟ್ನಿ ತಯಾರಿಯ ವಿಧಾನ
* ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಬೆಳ್ಳುಳ್ಳಿ, ಒಣ ಮೆಣಸು ಹಾಕಿ
ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ, ಒಣ ಮೆಣಸು ರೋಸ್ಟ್ ಆಗಬೇಕು.
* ನಂತರ ತೆಂಗಿನತುರಿ ಸೇರಿಸಿ ರೋಸ್ಟ್ ಮಾಡಿ, ತೆಂಗಿನ ತುರಿ, ಹುಣಸೆ ಹಣ್ಣು
ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗುವಾಗ ಸ್ಟೌವ್‌ನಿಂದ ತೆಗೆಯಿರಿ
* ಹುರಿದ ಮಸಾಲೆ ತಣ್ಣಗಾಗಲು ಪ್ಲೇಟ್‌ಗೆ ಹಾಕಿ.
* ನಂತರ ಮಿಕ್ಸಿ ಬ್ಲೆಂಡರ್‌ಗೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ
ಅಥವಾ ಸ್ವಲ್ಪ ನೀರು ನೀರಾಗಿ ನಿಮಗೆ ಹೇಗೆ ಬೇಕೋ ಹಾಗೆ ರುಬ್ಬಿ, ನಂತರ ಒಗ್ಗರಣೆ
ಹಾಕಿದರೆ ಇಡ್ಲಿ, ದೋಸೆ ಜೊತೆ ಸವಿಯಲು ಸೂಪರ್ ಬೆಳ್ಳುಳ್ಳಿ ಕಾಯಿ ಚಟ್ನಿ
ರೆಸಿಪಿ
ಸಲಹೆ: ಇಟ್ಲಿಗೆ ಚಟ್ನಿ ರುಬ್ಬುವಾಗ ಚಟ್ನಿ ಸ್ವಲ್ಪ -ಸ್ವಲ್ಪ ನೀರಾಗಿದ್ದರೆ
ಚೆನ್ನ
ದೋಸೆಗಾದರೆ ಗಟ್ಟಿ ಚಟ್ನಿ ರುಚಿಕರವಾಗಿರುತ್ತದೆ.
ಬೆಳ್ಳಿಯ ಪ್ರಯೋಜನಗಳು:
* ಕೆಮ್ಮು, ಶೀತ ತಡೆಗಟ್ಟಲು ಸಹಕಾರಿ
* ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿ, ಚಯಪಚಯ ಕ್ರಿಯೆಗೆ ತುಂಬಾ
ಒಳ್ಳೆಯದು
* ಮೆದುಳು ಚುರುಕಾಗಿ ಕಾರ್ಯನಿರ್ವಹಿಸಲು ಸಹಕಾರಿ
* ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿ
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ಕ್ಯಾನ್ಸರ್ , ಪೆಪ್ಟಿಕ್ ಅಲ್ಸರ್ ತಡೆಗಟ್ಟಲು ತುಂಬಾ ಸಹಕಾರಿ
* ವ್ಯಾಯಾಮ ಮಾಡುವಾಗ ತಲೆಸುತ್ತ ತಡೆಗಟ್ಟಲು ಸಹಕಾರಿ



Click it and Unblock the Notifications