For Quick Alerts
ALLOW NOTIFICATIONS  
For Daily Alerts

ರೆಸಿಪಿ: ಆಹಾರದ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಚಟ್ನಿ

Posted By:
|

ಬ್ರೇಕ್‌ಫಾಸ್ಟ್ ಆಗಿರಲಿ, ಡಿನ್ನರ್ ಆಗಿರಲಿ ಬೆಳ್ಳುಳ್ಳಿ ಚಟ್ನಿ ಜೊತೆಗೆ ಇದ್ದರೆ ಅಡುಗೆ ರುಚಿ ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ದೋಸೆ, ಇಡ್ಲಿ, ಪಡ್ಡು ಈ ರೀತಿಯ ಬ್ರೇಕ್‌ಫಾಸ್ಟ್ ಮಾಡಿದಾಗ ನೆಚ್ಚಿಕೊಂಡು ಸವಿಯಲು, ಇನ್ನು ಬಿಸಿ- ಬಿಸಿ ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ಬೆಳ್ಳುಳ್ಳಿ ಚಟ್ನಿ ಸೂಪರ್‌ ಆಗಿರುತ್ತದೆ.

garlic chutney recipe

ನಾವಿಲ್ಲಿ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ಎಂದು ಸ್ಟೆಪ್‌ ಬೈ ಸ್ಟೆಪ್ ಹೇಳಿದ್ದೇವೆ ನೋಡಿ:

Garlic Chutney Recipe, ಬೆಳ್ಳುಳ್ಳಿ ಚಟ್ನಿ ರೆಸಿಪಿ
Garlic Chutney Recipe, ಬೆಳ್ಳುಳ್ಳಿ ಚಟ್ನಿ ರೆಸಿಪಿ
Prep Time
6 Mins
Cook Time
20M
Total Time
26 Mins

Recipe By: Reena TK

Recipe Type: Chutney

Serves: 4

Ingredients
  • ಬೇಕಾಗುವ ಸಾಮಗ್ರಿ

    ಬೆಳ್ಳುಳ್ಳಿ ಇಡೀ ಬೆಳ್ಳುಳ್ಳಿ ( ಎಸಳು ಬಿಡಿಸಿ ಸಿಪ್ಪೆ ಸುಲಿಯಿರಿ)

    ರುಚಿಗೆ ತಕ್ಕ ಉಪ್ಪು

    ನೀರು 4 ಚಮಚ

    ಎಣ್ಣೆ 3 ಚಮಚ

    ಚಿಟಿಕೆಯಷ್ಟು ಇಂಗು

    ಟೊಮೆಟೊ ಪೇಸ್ಟ್ 1 ಚಿಕ್ಕ ಬೌಲ್‌ನಷ್ಟು

    ಅರಿಶಿಣ ಪುಡಿ 1 ಚಮಚ

    ಕಾಶ್ಮೀರಿ ಮೆಣಸಿನ ಪುಡಿ 3 ಚಮಚ (ಯಾವ ಮೆಣಸು ಪುಡಿಯಾದರೂ ಬಳಸಬಹುದು, ಕಾಶ್ಮೀರಿಯಾದರೆ ಬಣ್ಣ ಚೆನ್ನಾಗಿರುತ್ತದೆ)

    ಕೊತ್ತಂಬರಿ ಪುಡಿ 3 ಚಮಚ

Red Rice Kanda Poha
How to Prepare
  • ಮಾಡುವ ವಿಧಾನ

    * ಬೆಳ್ಳುಳ್ಳಿ ಎಸಳನ್ನು ಜಾರ್‌ಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಗೂ -4 ಚಮಚ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ.

    * ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಅದಕ್ಕೆ ರುಬ್ಬಿದ ಈರುಳ್ಳಿ ತಿನ್ನಿ.

    * ಈಗ ಸೌಟ್‌ನಿಂದ ಆಡಿಸುತ್ತಾ 3-4 ನಿಮಿಷ ಬೇಯಿಸಿ.

    * ಈಗ ಟೊಮೆಟೊ ಪೇಸ್ಟ್ ಹಾಕಿ ಮಿಶ್ರಣದಿಂದ ಎಣ್ಣೆ ಬಿಟ್ಟು ಮೇಲ್ಬಾಗದಲ್ಲಿ ತೇಲುವಷ್ಟು ಹೊತ್ತು ಬಿಸಿ ಮಾಡಿ. ಈಗ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ ಸೌಟ್‌ನಿಂದ ಆಡಿಸಿ. ನಂತರ ಸ್ಟೌವ್‌ ಆಫ್‌ ಮಾಡಿ ಬೌಲ್‌ಗೆ ಶಿಫ್ಟ್ ಮಾಡಿ.

Instructions
  • ತುಂಬಾ ಖಾರ ಬೇಡ ಎನ್ನುವುದಾದರೆ ಕಾಶ್ಮೀರಿ ಅಥವಾ ಬ್ಯಾಡಗಿ ಮೆಣಸಿ ಪುಡಿ ಬಳಸಿ, ಖಾರ ಬೇಕೆನ್ನುವುದಾದರೆ ಸಾರಿಗೆ ಬಳಸುವ ಖಾರದ ಪುಡಿ ಬಳಸಿ
Nutritional Information
  • ಸರ್ವ್‌: - 1 ಚಮಚ
  • ಕ್ಯಾಲೋರಿ- - 21
  • ಕೊಬ್ಬು : - 1ಗ್ರಾಂ
  • ಪ್ರೊಟೀನ್: - 0.6ಗ್ರಾಂ
  • ಕಾರ್ಬ್ಸ್ - 2.4 ಗ್ರಾಂ
  • ನಾರಿನಂಶ - 0.6ಗ್ರಾಂ
[ 4 of 5 - 88 Users]
X
Desktop Bottom Promotion