ಗಣೇಶ ಚತುರ್ಥಿ ರೆಸಿಪಿ: ಬೆಲ್ಲ, ಶುಗರ್ ಫ್ರೀ ಮೋದಕ ರೆಸಿಪಿ

Posted By:

ಹಬ್ಬ ಹರಿದಿನ ಬಂದಾಗ ಎಷ್ಟು ಖುಷಿಯಾಗುವುದೋ, ಮಧುಮೇಹಿಗಳಿಗೆ ಅಷ್ಟೇ ಬೇಸರವಾಗುತ್ತದೆ, ಕಾರಣ ಹಬ್ಬದ ಖುಷಿಯಲ್ಲಿ ಸಿಹಿ ತಿನ್ನುವಂತೆ ಇಲ್ಲ. ಹಬ್ಬದ ಅಡುಗೆಯ ರುಚಿ ಅನಿಸುವುದೇ ಸಿಹಿ ಸವಿದಾಗ. ಇದೀಗ ಗೌರಿ-ಗಣೇಶ ಹಬ್ಬ ಬರುತ್ತಿದೆ. ಗಣೇಶನ ಹಬ್ಬದಲ್ಲಿ ಬಗೆ ಬಗೆಯ ಮೋದಕಗಳದ್ದೇ ಕಾರುಬಾರು.

ಮೋದಕಗಳನ್ನು ನೋಡುವಾಗ ತಿನ್ನಬೇಕೆಂಬ ಆಸೆ ಆಗುತ್ತಿದೆ, ತಿಂದರೆ ಎಲ್ಲಿ ಹೆಚ್ಚು ಕಡಿಮೆಯಾಗುವುದೇ ಎಂಬ ಭಯ, ಆದರೆ ಈ ಬಾರಿ ಮೋದಕ ಸವಿಯಲು ಮಿಸ್‌ ಮಾಡ್ಬೇಡಿ, ಏಕೆಂದರೆ ಯಾವುದೇ ಭಯವಿಲ್ಲದೆ ಸವಿಯಬಹುದು ಶುಗರ್ ಫ್ರೀ ಮೋದಕ.

Ganesha Chaturti Recipe

ಬೇಕಾಗುವ ಸಾಮಗ್ರಿ
ತುಪ್ಪ 3 ಚಮಚ
ಗಸೆಗಸೆ 3-4 ಚಮಚ (ಅಲಂಕಾರಕ್ಕೆ ಮತ್ತೆ 3 ಚಮಚ ಗಸೆಗಸೆ ಬೇಕು)
ರುಬ್ಬಿದ ಖರ್ಜೂರ
ಪಿಸ್ತಾ 3-4 ಚಮಚ
ಗೋಡಂಬಿ 3-4 ಚಮಚ
ಎಣ್ಣೆ 3-4 ಚಮಚ

ಮಾಡುವ ವಿಧಾನ
* ಒಂದು ಬೌಲ್‌ ತುಂಬಾ ಖರ್ಜೂರ ತೆಗೆದು ಅದರ ಬೀಜನ್ನು ತೆಗೆಯಿರಿ.
* ನಂತರ ಗಟ್ಟಿಯಾಗಿ ಮಿಕ್ಸಿಯಲ್ಲಿ ರುಬ್ಬಿ
* ಗಸೆಗಸೆಯನ್ನು ಸ್ವಲ್ಪ ಹುರಿಯಿರಿ
* ಒಂದು ಬೌಲ್‌ಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ರುಬ್ಬಿದ ಖರ್ಜೂರ ಹಾಕಿ.
* ಅದಕ್ಕೆ ಪಿಸ್ತಾ, ಬಾದಾಮಿ, ಗೋಡಂಬಿ, ರೋಸ್ಟ್‌ ಮಾಡಿದ ಗಸೆಗಸೆ ಸೇರಿಸಿ.
* ಮತ್ತೊಂದು ಪಾತ್ರೆಯಲ್ಲಿ ರೋಸ್ಟ್ ಮಾಡಿದ ಗಸೆಗಸೆ ಹಾಗೂ ಪುಡಿ ಮಾಡಿದ ಪಿಸ್ತಾ ಹಾಕಿ.
* ಮೋದಕ ಮೌಲ್ಡ್‌ಗೆ ಎಣ್ಣೆ ಹಚ್ಚಿ ಅದರಲ್ಲಿ ಮೋದಕವನ್ನು ತುಂಬಿ ನಂತರ ಅದರಿಂದ ತೆಗೆದು ಅದನ್ನು ಪಿಸ್ತಾ ಹಾಗೂ ಗಸೆಗಸೆ ಮಿಶ್ರಣದಲ್ಲಿ ಅದ್ದಿ ಶುಗರ್‌ ಫ್ರೀ ಮೋದಕ ರೆಡಿ.

ಸೂಚನೆ: ಈ ಮೋದಕವನ್ನು ಮಧುಮೇಹಿಗಳು ಆಸೆಗಷ್ಟೇ ಸೇವಿಸಬೇಕು, ಖರ್ಜೂರದಲ್ಲಿ ಕಡಿಮೆ ಗ್ರೈಸೆಮಿಕ್ ಇಂಡೆಕ್ಸ್ ಇದೆ, ಆದ್ದರಿಂದ ಇದನ್ನು ತಿನ್ನಿ, ಆದರೆ ಅತಿಯಾಗಿ ತಿನ್ನಬೇಡಿ.

[ of 5 - Users]
X
Desktop Bottom Promotion