Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Food: ಹಿಂದಿನ ದಿನ ಅನ್ನ ಉಳಿದರೆ ರುಚಿ ರುಚಿ ಬೋಂಡಾ ಮಾಡಿ! 5 ನಿಮಿಷ ಸಾಕು
ನೀವು ನಿತ್ಯ ಮಧ್ಯಾಹ್ನ ಹಾಗೂ ರಾತ್ರಿಯ ಸಮಯದಲ್ಲಿ ಊಟಕ್ಕೆ ಅನ್ನ ಮಾಡುವುದು ಕಾಮನ್. ಹಾಗೆ ಅನ್ನ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಹಾಗೆ ಮನೆಯಲ್ಲಿ ಅಡುಗೆ ಮಾಡಿದಾಗ ಅನ್ನ, ಸಾಂಬಾರ್ ಉಳಿಯುವುದು ಕೂಡ ಕಾಮನ್. ಸಾಂಬಾರ್ ಉಳಿದರೆ ಮಾರನೆ ದಿನ ಬಳಸುತ್ತಾರೆ. ಹಾಗೆ ಅನ್ನ ಉಳಿದರೆ ಅದರಿಂದೆ ಹಲವು ರೀತಿ ಖಾದ್ಯ ಮಾಡುವುದು ನೋಡಬಹುದು.
ಅನ್ನ ಉಳಿದರೆ ಎಲ್ಲರು ಸುಲಭವಾಗಿ ಮಾಡಬಹುದಾದ ಚಿತ್ರಾನ್ನ ಮಾಡಿ ಸವಿಯುವುದು ನೋಡಬಹುದು. ಆದರೆ ಅನ್ನದಿಂದ ಚಿತ್ರಾನ್ನ ಮಾಡಿ ಸವಿಯುವುದು ಅಂದ್ರೆ ಹಲವರಿಗೆ ಇಷ್ಟವಾಗೋದಿಲ್ಲ. ಮತ್ತೆ ಕೆಲಸವರು ಉಳಿದ ಅನ್ನವನ್ನು ಮತ್ತೆ ಊಟಕ್ಕೆಂದು ಬಳಸುವುದು ಸಹ ಇದೆ. ಆದ್ರೆ ನಾವಿಂದು ರಾತ್ರಿ ಉಳಿದ ಅನ್ನದಲ್ಲಿ ಅದ್ಭುತ ರುಚಿ ನೀಡುವಂತಹ ಖಾದ್ಯ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ಉಳಿದಿರುವ ಅನ್ನದಿಂದ ನೀವು ರುಚಿ ರುಚಿಯಾದ ಈ ಬೋಂಡಾ ಮಾಡಬಹುದು. ಆದ್ರೆ ಈ ಬೋಂಡಾ ಮಾಡಲು ಬಹಳಷ್ಟು ಸಮಯವೂ ಬೇಡ ಹಾಗೆ ವಸ್ತುಗಳ ಅಗತ್ಯತೆ ಕೂಡ ಇಲ್ಲ. ಹಾಗಾದ್ರೆ ಸುಲಭವಾಗಿ ಹೇಗೆ ಉಳಿದ ಅನ್ನದಿಂದ ಬೋಂಡಾ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?
- ಅನ್ನ
- ಮೊಸರು
- ಅಕ್ಕಿ ಹಿಟ್ಟಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಜೀರಿಗೆ
- ಹಸಿ ಮೆಣಸು
- ಉಪ್ಪು
- ಎಣ್ಣೆ
- ಅಡುಗೆ ಸೋಡಾ
ಅನ್ನದಿಂದ ಬೋಂಡಾ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಒಂದು ಕಪ್ ಅನ್ನವನ್ನು ಹಾಕಿಕೊಂಡು ಬಳಿಕ ಅದೇ ಕಪ್ ಅಳತೆಯಲ್ಲಿ ಅರ್ಧ ಕಪ್ ನೀರು ಹಾಕಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದು ಗಟ್ಟಿಯಾದ ಅಂಟಿನಂತೆ ಬರಬೇಕು. ನಂತರ ಈ ಹಿಟ್ಟನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬೌಲ್‌ಗೆ 1 ಕಪ್ ಅಕ್ಕಿ ಹಿಟ್ಟನ್ನು ಸಹ ಇದಕ್ಕೆ ಹಾಕಿಕೊಳ್ಳಿ. ಈ ಅಕ್ಕಿ ಹಿಟ್ಟು ಬಹಳ ನುಣ್ಣಗೆ ಇರಬೇಕು ಹೀಗಾಗಿ ಜರಡಿ ಹಿಡಿದು ಹಾಕಿಕೊಳ್ಳಿ.
ಈಗ ಈ ಹಿಟ್ಟಿಗೆ ಜೀರಿಗೆ, ಹೆಚ್ಚಿಕೊಂಡಿರುವ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಹಾಗೆ ಮೊಸರನ್ನು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಅರ್ಧ ಚಮಚ ಸೋಡಾ ಹಾಕಿ ಮಿಕ್ಸ್ ಮಾಡಬೇಕು. ಈ ಹಿಟ್ಟು ತೆಳುವಾಗಬಾರದು, ವಡೆ ಮಾಡುವ ಹಿಟ್ಟಿನಂತಹ ಹದದಲ್ಲಿ ಇರಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಹಿಟ್ಟನ್ನು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ತೆಗೆದುಕೊಂಡು ನಿಧಾನವಾಗಿ ಎಣ್ಣೆಯಲ್ಲಿ ಬಿಟ್ಟುಕೊಳ್ಳಿ. ಈ ಬೋಂಡಾ ಚೆನ್ನಾಗಿ ಕರಿದುಕೊಳ್ಳಬೇಕು. ಹೊಂಬಣ್ಣ ಬರುವವರೆಗೂ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಅನ್ನದ ಬೋಂಡಾ ರೆಡಿಯಾಗುತ್ತೆ.
ಅದರಲ್ಲೂ ಸಂಜೆ ಸಮಯದಲ್ಲಿ ಸವಿಯಲು ಸ್ನ್ಯಾಕ್ಸ್ ಆಗಿಯೂ ಇದನ್ನು ಸವಿಯಬಹುದು. ರುಚಿಯ ಜೊತೆಗೆ ಉಳಿದ ಅನ್ನವನ್ನು ವ್ಯರ್ಥ ಮಾಡದೆ ಇದನ್ನು ಮಾಡಿ ಸವಿದ ತೃಪ್ತಿ ಕೂಡ ನಿಮ್ಮದಾಗಲಿದೆ. ಒಮ್ಮೆ ನೀವು ಈ ರೀತಿಯಾಗಿ ಮಾಡಿ ಸವಿದರೆ ಮುಂದೆ ಎಂದಿಗೂ ಉಳಿದಿರುವ ಅನ್ನದಿಂದ ಚಿತ್ರಾನ್ನ ಮಾಡಲು ಮುಂದಾಗುವುದಿಲ್ಲ. ಬದಲಿಗೆ ಈ ಬೋಂಡಾ ಮಾಡಿ ಸವಿಯಲು ಮುಂದಾಗುವುದು ಖಚಿತ.



Click it and Unblock the Notifications