Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟದ ರುಚಿ 10 ಪಟ್ಟು ಹೆಚ್ಚಿಸಲು ಈ ಚಟ್ನಿ ಸಾಕು! ಬಿಹಾರದ ಫೇಮಸ್ ತೀಸಿ ಚಟ್ನಿ.. ಒಮ್ಮೆ ತಿಂದ್ರೆ ರುಚಿ ಜನ್ಮಕ್ಕೂ ಮರೆಯಲ್ಲ
ಊಟದ ರುಚಿ ಹತ್ತು ಪಟ್ಟು ಹೆಚ್ಚಿಸಲು ಈ ಚಟ್ನಿ ಸಾಕು! ಬಿಹಾರದ ಫೇಮಸ್ ತೀಸಿ ಚಟ್ನಿ.. ಒಮ್ಮೆ ತಿಂದ್ರೆ ಇದರ ರುಚಿ ಜನ್ಮಕ್ಕೂ ಮರೆಯಲ್ಲ. ಹೃದಯದ ಆರೋಗ್ಯ ಮತ್ತು ತೂಕ ಇಳಿಕೆಗೆ ಸಹಕಾರಿ. ಹೌದು, ಬಿಹಾರಿ ಶೈಲಿಯ ತೀಸಿ ಚಟ್ನಿ (ಅಗಸೆಬೀಜದ ಚಟ್ನಿ) ಕೇವಲ ಒಂದು ಸುವಾಸನೆಯ ಅಡುಗೆಯಾಗಿರದೆ, ಆರೋಗ್ಯ ಹಾಗೂ ಸ್ವಾದಗಳ ಪರಿಪೂರ್ಣ ಸಂಗಮವಾಗಿದೆ.
ಓಮೆಗಾ-3 ಫ್ಯಾಟಿ ಆಸಿಡ್‌ಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ಈ ಚಟ್ನಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಇದು ಅತ್ಯುತ್ತಮ ಆಹಾರವಾಗಿದೆ. ನಮ್ಮ ಅಡುಗೆಯಲ್ಲಿ ಚಟ್ನಿಗಳಿಗೆ (Chutney) ವಿಶೇಷ ಸ್ಥಾನವಿದೆ. ಅನ್ನ ಅಥವಾ ರೋಟಿಗಳ ಏಕತಾನತೆಯನ್ನು ತೊಡೆದುಹಾಕಲು ಒಂದು ಚಮಚ ಚಟ್ನಿ ಸಾಕು, ಇಡೀ ಊಟದ ಸುವಾಸನೆಯೇ ಬದಲಾಗುತ್ತದೆ.
ವಿವಿಧ ಚಟ್ನಿಗಳ ನಡುವೆ, ಬಿಹಾರ ಶೈಲಿಯ 'ತೀಸಿ ಕಿ ಚಟ್ನಿ' ತನ್ನ ವಿಶಿಷ್ಟ ರುಚಿ ಮತ್ತು ಆರೋಗ್ಯಕಾರಿ ಗುಣಗಳಿಂದಾಗಿ ಹೆಚ್ಚು ಮೆಚ್ಚುಗೆ ಗಳಿಸಿದೆ. ಬಿಹಾರಿ ಮನೆಗಳಲ್ಲಿ ಅದರಲ್ಲೂ ಚಳಿಗಾಲದಲ್ಲಿ ಈ ಚಟ್ನಿ ಇಲ್ಲದ ಊಟ ಅಪೂರ್ಣ ಎನಿಸುತ್ತದೆ. ಅಗಸೆಬೀಜದ ಚಟ್ನಿಗೆ ಅಗತ್ಯವಿರುವ ಸಾಮಗ್ರಿಗಳು ಮತ್ತು ಮಾಡುವ ಸರಳ ವಿಧಾನ (Bihar Style Tisi Ki Chutney Recipe) ಇಲ್ಲಿದೆ.
ತೀಸಿ ಎಂದರೆ ಕನ್ನಡದಲ್ಲಿ ಅಗಸೆಬೀಜ ಅಥವಾ ಫ್ಲಾಕ್ಸ್ ಸೀಡ್ಸ್. ಇದನ್ನು ಸೂಪರ್‌ಫುಡ್‌ಗಳಲ್ಲಿ ಪ್ರಮುಖವಾದುದ್ದು. ಬಿಹಾರದಲ್ಲಿ ಇದನ್ನು ಕೇವಲ ಆಹಾರವಾಗಿ ಮಾತ್ರವಲ್ಲದೆ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಬಳಸುವ ಔಷಧೀಯ ಗುಣಗಳಿಗಾಗಿಯೂ ಪ್ರಚಲಿತದಲ್ಲಿದೆ. ಅಗಸೆಬೀಜದೊಂದಿಗೆ ಒಣ ಕೊಬ್ಬರಿ, ಕಡಲೆಕಾಯಿ ಮತ್ತು ವಿವಿಧ ಮಸಾಲೆಗಳನ್ನು ಬೆರೆಸಿ ತಯಾರಿಸುವ ಈ ಪುಡಿಯು ಅತ್ಯಂತ ರುಚಿಕರ. ಅಲ್ಲದೆ, ಒಮ್ಮೆ ಸವಿದವರಿಗೆ ಪದೇ ಪದೆ ಸವಿಯಬೇಕು ಅನಿಸುತ್ತೆ.
ಅಗಸೆಬೀಜದ ಚಟ್ನಿಗೆ ಅಗತ್ಯವಿರುವ ಸಾಮಗ್ರಿಗಳು
• ಅಗಸೆಬೀಜ
• ಕರಿಬೇವು
• ಧನಿಯಾ (ಒಣ ಜೀರಿಗೆ)
• ಒಣ ಕೊಬ್ಬರಿ ತುರಿ
• ಕಡಲೆಕಾಯಿ ಬೀಜ
• ಜೀರಿಗೆ
• ಕರಿಮೆಣಸು
• ಬೆಳ್ಳುಳ್ಳಿ
• ಕಪ್ಪು ಉಪ್ಪು
• ಸಾಮಾನ್ಯ ಉಪ್ಪು
• ಇಂಗು
• ಬಿಳಿ ಎಳ್ಳು
ಅಗಸೆಬೀಜದ ಚಟ್ನಿ ತಯಾರಿಸುವ ವಿಧಾನ
- ಮೊದಲಿಗೆ, ಅರ್ಧ ಕಪ್ ಅಗಸೆಬೀಜವನ್ನು (ತೀಸಿ) ಕಲ್ಲು-ಮಣ್ಣು ಇಲ್ಲದಂತೆ ಆಯ್ದು ಸ್ವಚ್ಛಗೊಳಿಸಿ.
- ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು, ಮಧ್ಯಮ ಉರಿಯಲ್ಲಿ ಅಗಸೆಬೀಜವು ಚಟಪಟ ಶಬ್ದ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
- ನಂತರ ಅದನ್ನು ತಟ್ಟೆಗೆ ಹಾಕಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
- ಅದೇ ಬಾಣಲೆಯಲ್ಲಿ, ಅರ್ಧ ಕಪ್ ಕರಿಬೇವನ್ನು ಹಾಕಿ ಅದು ಸಂಪೂರ್ಣವಾಗಿ ಒಣಗಿ (ಕುರುಕುಲಾದಂತೆ) ಸುವವರೆಗೆ ಹುರಿಯಿರಿ.
- ನಂತರ ಒಂದು ಚಮಚ ಧನಿಯಾ, ಎರಡು ಚಮಚ ಜೀರಿಗೆ ಹಾಗೂ ಎರಡು ಚಮಚ ಕರಿಮೆಣಸನ್ನು ಸೇರಿಸಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ.
- ಈಗ ಬಾಣಲೆಗೆ ಅರ್ಧ ಕಪ್ ಒಣ ಕೊಬ್ಬರಿ ತುರಿ, ಮೂರು ಅಥವಾ ನಾಲ್ಕು ಚಮಚ ಕಡಲೆಕಾಯಿ ಬೀಜ, ಎರಡು ಚಮಚ ಬಿಳಿ ಎಳ್ಳು ಮತ್ತು ಐದು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಹುರಿಯಿರಿ.
- ಬೆಳ್ಳುಳ್ಳಿಯ ಹಸಿ ವಾಸನೆ ಹೋಗಿ, ತಿಳಿ ಕೆಂಪಾಗುವವರೆಗೆ ಹುರಿಯಬೇಕು. ನಂತರ ಎಲ್ಲವನ್ನೂ ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ.
- ಎಲ್ಲಾ ಹುರಿದ ಪದಾರ್ಥಗಳು ಸಂಪೂರ್ಣವಾಗಿ ತಣ್ಣಗಾದ ನಂತರ, ಅವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಕಪ್ಪು ಉಪ್ಪು, ಸಾಮಾನ್ಯ ಉಪ್ಪು (ರುಚಿಗೆ ತಕ್ಕಂತೆ) ಮತ್ತು ಇಂಗು ಸೇರಿಸಿ.
- ಈ ಮಿಶ್ರಣವನ್ನು ನುಣ್ಣಗೆ ಪುಡಿ ಮಾಡದೆ, ಸ್ವಲ್ಪ ತರಿತರಿಯಾಗಿ (ಕೋರಸ್) ರುಬ್ಬಿಕೊಂಡರೆ ಚಟ್ನಿಯ ರುಚಿ ಹೆಚ್ಚುತ್ತದೆ.
ತಯಾರಿಸಿದ ಈ ಚಟ್ನಿಯನ್ನು (Flax Seeds Chutney) ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿದರೆ ಹಲವು ದಿನಗಳವರೆಗೆ ತಾಜಾವಾಗಿರುತ್ತದೆ. ಇದನ್ನು ಬಿಸಿ ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪದೊಂದಿಗೆ ಸವಿದರೆ, ಅದರ ರುಚಿಯೇ ಬೇರೆ. ಇಷ್ಟೇ ಅಲ್ಲದೆ, ಇದನ್ನು ರೊಟ್ಟಿ, ಚಪಾತಿ ಅಥವಾ ದೋಸೆಯ ಜೊತೆಗೂ ಬಳಸಬಹುದು.



Click it and Unblock the Notifications
