Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ರೆಸಿಪಿ: ರೋ ಫಿಶ್ ಫ್ರೈ
ನೀವು ನದಿ ಮೀನು ಇಷ್ಟ ಪಡುವುದಾದರೆ ರೋ ಫಿಶ್ನ ಫ್ರೈ ರೆಸಿಪಿ ಇಲ್ಲಿ ನೀಡಲಾಗಿದೆ. ರೋ ಫಿಶ್ನಲ್ಲಿ ಸ್ವಲ್ಪ ಮುಳ್ಳು ಅಧಿಕವಿದ್ದರೂ ತಿನ್ನಲು ತುಂಬಾ ರುಚಿಕರವಾದ ಮೀನಾಗಿದೆ. ಅದರಲ್ಲೂ ಫ್ರೈ ಮಾಡಲು ಸೂಪರ್ ಮೀನು ಇದಾಗಿದೆ. ನೀವು ರೋ ಫಿಶ್ ಫ್ರೈ ಮಾಡ ಬಯಸುವುದಾದರೆ ತುಂಬಾ ಸರಳವಾಗಿದೆ ಇದರ ರೆಸಿಪಿ.

ಮೀನಿನ ರುಚಿ ಹೆಚ್ಚಲು ಅದಕ್ಕೆ ಬಳಸುವ ಮಸಾಲೆ ಮುಖ್ಯವಾಗಿರುತ್ತದೆ. ಮೀನಿನ ತುಂಡುಗಳು ಮಸಾಲೆಯನ್ನು ಚೆನ್ನಾಗಿ ಹೀರಿಕೊಂಡರೆ ಮೀನು ಕೂಡ ರುಚಿಕರವಾಗಿರುತ್ತದೆ. ಬನ್ನಿ ರೋ ಫಿಶ್ ಫ್ರೈ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: side item
Serves: 6
-
ಬೇಜಾಗುವ ಸಾಮಗ್ರಿ
ರೋ ಫಿಶ್ 1 ಕೆಜಿ
ಖಾರದ ಪುಡಿ 2 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಹುಣಸೆ ರಸ 5 ಚಮಚ (ಎರಡು ನಿಂಬೆ ಹಣ್ಣು ಗಾತ್ರದಷ್ಟು ಹುಣಸೆಹಣ್ಣು)
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ
* ಹುಣಸೆ ಹಣ್ಣನ್ನು ಅರ್ಧ ಲೋಟ ಬಿಸಿ ನೀರಿಗೆ ಹಾಕಿಟ್ಟು, ಅದರ ರಸ ತಯಾರಿಸಿ. ಹುಣಸೆರಸ ಗಟ್ಟಿಯಾಗಿರಲಿ.
* ಈಗ ಹುಣಸೆ ರಸಕ್ಕೆ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಗಟ್ಟಿ ಪೇಸ್ಟ್ ರೀತಿ ಕಲೆಸಿ.
* ಇದರಲ್ಲಿ ಮೀನನ್ನು ಮಿಕ್ಸ್ ಮಾಡಿ 2 ತಾಸು ಇಡಿ. ಮಸಾಲೆ ಮಿಕ್ಸ್ ಮಾಡಿ ಫ್ರಿಡ್ಜ್ನಲ್ಲಿ ಬೇಕಾದರೆ ಇಡಬಹುದು.
* ನಂತರ ತವಾಕ್ಕೆ 3-4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೀನಿನ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಫ್ರೈ ಮಾಡಿ, ನಂತರ ಮಗುಚಿ ಮತ್ತೆ 10 ನಿಮಿಷ ಫ್ರೈ ಮಾಡಿದರೆ ಮೀನಿನ ಫ್ರೈ ರೆಡಿ.
- ಮೀನನ್ನು ತುಂಬಾ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಈ ಮಸಾಲೆಯನ್ನು ಎಲ್ಲಾ ಬಗೆಯ ಮೀನಿನ ಫ್ರೈಗೆ ಬಳಸಬಹುದು
- ಸರ್ವ್: - 1 ಕೆಜಿ
- ಕೊಬ್ಬು - 12ಗ್ರಾಂ
- ಪ್ರೊಟೀನ್ : - 39ಗ್ರಾಂ
- ಕಾರ್ಬ್ಸ್ - 0



Click it and Unblock the Notifications