Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನಿನ ಮೊಟ್ಟೆ ಫ್ರೈ ಹೀಗೆ ಮಾಡಿದರೆ ರುಚಿ ತುಂಬಾನೇ ಚೆನ್ನಾಗಿರುತ್ತದೆ
ಮೀನಿನ ಮೊಟ್ಟೆ ಫ್ರೈಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ರುಚಿ ಸೂಪರ್ ಆಗಿರುತ್ತದೆ. ನಾವಿಲ್ಲಿ ಕಾಟ್ಲಾ ಮೀನಿನ ಮೊಟ್ಟೆ ಫ್ರೈ ರೆಸಿಪಿ ನೀಡಿದ್ದೇವೆ, ನಿಮಗೆ ಮೀನಿನ ಮೊಟ್ಟೆ ಇಷ್ಟ ಎಂದಾದರೆ ಈ ರೆಸಿಪಿ ಟ್ರೈ ಮಾಡಿ ರುಚಿ ಚೆನ್ನಾಗಿರಲಿದೆ.

ಬೇಕಾಗುವ ಸಾಮಗ್ರಿ
ಮೀನಿನ ಮೊಟ್ಟೆ (ಇಲ್ಲಿ ಕಾಟ್ಲಾ ಮೀನಿನ ಮೊಟ್ಟೆ ಬಳಸಲಾಗಿದೆ)
ಈರುಳ್ಳಿ 2 (ಸಾಧಾರಣ ಗಾತ್ರದ್ದು)
ಹಸಿಮೆಣಸು 3-4 (ಖಾರ ಹೆಚ್ಚು ಬೇಕೆಂದರೆ ಇನ್ನೂ ಎರಡು ಸೇರಿಸಬಹುದು
ಚಿಕ್ಕದಾಗಿ ಕತ್ತರಿಸಿದ ಶುಂಠಿ 1 ಚಮಚ
ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ 1 ಚಮಚ
ಅರಿಶಿಣ ಪುಡಿ 1/ 2 ಚಮಚ
ಸ್ವಲ್ಪ ಕರಿಬೇವು
ತೆಂಗಿನೆಣ್ಣೆ 2 ಚಮಚ (ನೀವು ಬೇಕಿದ್ದರೆ ಇತರ ಅಡುಗೆ ಎಣ್ಣೆಯೂ ಬಳಸಬಹುದು)
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ಬಾಣಲೆ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ
ಶುಂಠಿ-ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ, ನಂತರ ಈರುಳ್ಳಿ ಹಾಕಿ, ಹಸಿ ಮೆಣಸು,
ಕರಿಬೇವು ಹಾಕಿ. ಈಗ ತೊಳೆದಿಟ್ಟ ಮೀನಿನ ಮೊಟ್ಟೆ ಹಾಕಿ , ನಂತರ ಅರಿಶಿಣ ಪುಡಿ,
ಉಪ್ಪು ಹಾಕಿ ಫ್ರೈ ಮಾಡಿ, 5 ನಿಮಿಷ ಹೆಚ್ಚು ಉರಿಯಲ್ಲಿ ಫ್ರೈ ಮಾಡಿ, ನಂತರ ಮತ್ತೆ
10 ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
ಮೀನಿನ ಮೊಟ್ಟೆ ಸವಿಯಲು ರೆಡಿ.
FAQ
ಮೀನಿನ ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಿದೆಯೇ?
ಮೀನಿನ ಮೊಟ್ಟೆಯಲ್ಲಿ ತುಂಬಾನೇ ಪ್ರೊಟೀನ್ ಇರಲಿದೆ. ಹಾಗಾಗಿ ಮಕ್ಕಳಿಗೆ, ಹದಿಹರೆಯದ ಮಕ್ಕಳಿಗೆ , ಗರ್ಭಿಣಿ ಮಹಿಳೆಯರಿಗೆ ತುಂಬಾನೇ ಒಳ್ಳೆಯದು.
ಪ್ರೊಟೀನ್ ಮೊಟ್ಟೆಯಲ್ಲಿ ಅಧಿಕ ಕೊಲೆಸ್ಟ್ರಾಲ್
ಇದೆಯೇ?
ಮೀನಿನ ಮೊಟ್ಟೆ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿ. ಇದರಲ್ಲಿ ಒಮೆಗಾ 3
ಕೊಬ್ಬಿನಂಶ ಅಧಿಕವಿದೆ, ಇದರಿಂದಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು,
ಉರಿಯೂತ ಸಮಸ್ಯೆ ತಡೆಗಟ್ಟಲು ಸಹಕಾರಿ.
ಮೊಟ್ಟೆಯನ್ನು ಮೀನಿನಿಂದ ತೆಗೆದ ಬಳಿಕ ಎಷ್ಟು ಸಮಯದೊಳಗಡೆ
ಬಳಸಬೇಕು?
ಮೀನಿನಿಂದ ಮೊಟ್ಟೆ ಬೇರ್ಪಡಿಸಿದ 12-72 ಗಂಟೆಯ ಒಳಗಡೆ ಅಡುಗೆ ಮಾಡಬೇಕು.
ಕೆಲವೊಮ್ಮೆ ಅದರ ನರ ಸರಿಯಾಗಿ ತೆಗೆಯದಿದ್ದರೆ ವಾಂತಿ-ಬೇಧಿಯಾಗುವುದು, ಆದ್ದರಿಂದ
ಗರ್ಭಿಣಿಯರು ಇದನ್ನು ಸೇವಿಸುವಾಗ ಜಾಗ್ರತೆವಹಿಸಿ.
ಮೀನಿನ ಮೊಟ್ಟೆ ನಿಮ್ಮನ್ನು ದಪ್ಪಗಾಗಿಸುವುದೇ?
ಇಲ್ಲ ಮೀನಿನ ಮೊಟ್ಟೆ ತಿಂದರೆ ಮೈ ತೂಕ ಹೆಚ್ಚಾಗುವುದಿಲ್ಲ, ಇದರಲ್ಲಿ ಪ್ರೊಟೀನ್
ಅಧಿಕವಿರುವುದರಿಂದ ದೇಹಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications