ಸಿಹಿ ರೆಸಿಪಿ: ಎಳ್ಳು ಬೆಲ್ಲದಿಂದ ಮಾಡಿ ರುಚಿ ರುಚಿಯಾದ ಪರೋಟ

Posted By:

ಮಕರ ಸಂಕ್ರಾಂತಿಯ ರೆಸಿಪಿಯಲ್ಲಿ ಎಳ್ಳು ಪ್ರಮುಖ ಸ್ಥಾನ ಪಡೆದಿದೆ. ಎಳ್ಳು ಬೆಲ್ಲ- ಎಳ್ಳುಂಡೆ ಹೀಗೆ ಎಳ್ಳು ಬಳಸಿ ಹಬ್ಬದ ಅಡುಗೆ ತಯಾರಿಸಲಾಗುವುದು. ಎಳ್ಳು ಬಳಸುವುದಕ್ಕೂ ವೈಜ್ಞಾನಿಕ ಕಾರಣವಿದೆ, ಎಳ್ಳು ಚಲಿಗಾಲದಲ್ಲಿ ಮೈ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಈ ಋತುಮಾನಕ್ಕೆ ಸೂಕ್ತವಾದ ಮತ್ತೊಂದು ರೆಸಿಪಿ ನೀಡಿದ್ದೇವೆ, ಅದುವೇ ಎಳ್ಳು ಪರೋಟ, ಇದೊಂದು ಸಿಹಿ ರೆಸಿಪಿಯಾಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

Ellu Bella Parota Recipe

ಬೇಕಾಗುವ ಸಾಮಗ್ರಿ
1 ಕಪ್‌ ಗೋಧಿ ಹಿಟ್ಟು
ನೀರು

ಪರೋಟ ಒಳಗಡೆ ತುಂಬಲು
1ಕಪ್ ಬೆಲ್ಲ
4 ಚಮಚ ಎಳ್ಳು (ಹುರಿದ ಎಳ್ಳು)
1 ಚಮಚ ಸೋಂಪು
ತುಪ್ಪ

ಮಾಡುವ ವಿಧಾನ
* ಗೋಧಿ ಹಿಟ್ಟನ್ನು ಚಪಾತಿಗೆ ಕಲೆಸುವಂತೆ ಕಲೆಸಿ 15 ನಿಮಿಷ ಇಡಿ.
* ನಂತರ ಅವುಗಳಿಂದ ಚಪಾತಿಗೆ ಉಂಡೆ ಕಟ್ಟುವಂತೆ ಕಟ್ಟಿ.
* ಮತ್ತೊಂದು ಬೌಲ್‌ನಲ್ಲಿ ಎಳ್ಳು, ಸೋಂಪು, ಬೆಲ್ಲ ಹಾಕಿ ಮಿಕ್ಸ್ ಮಾಡಿ
* ಈಗ ಚಪಾತಿಗೆ ತಟ್ಟುವಂತೆ ತಟ್ಟಿ ಅದರಲ್ಲ ಬೆಲ್ಲ- ಎಳ್ಳು ಉಂಡೆಯನ್ನು ಇಟ್ಟು ನಂತರ ಮತ್ತೆ ಉಂಡೆ ಕಟ್ಟಿ ನಂತರ ಮತ್ತೆ ತಟ್ಟಿ, ತಟ್ಟುವಾಗ ಗೋಧಿ ಹುಡಿ ಹರಡಿ ತಟ್ಟಿದರೆ ರೌಂಡಾಗಿ ತಟ್ಟಿದರೆ ಚೆನ್ನಾಗಿ ಬರುತ್ತದೆ.
* ಈಗ ತವಾಗೆ ತುಪ್ಪ ಸವರಿ ತಟ್ಟಿದ ಎಳ್ಳು ಪರೋಟ ಹಾಕಿ, ಅದರ ಮೇಲೆ ಕೂಡ ತುಪ್ಪ ಸವರಿ ಬೇಯಿಸಿ.
* ಇದನ್ನು ತುಪ್ಪ ಅಥವಾ ಮಲೈ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತದೆ.

ಸಲಹೆ
* ತುಪ್ಪ ಬದಲಿಗೆ ಎಣ್ಣೆ ಬಳಸಬಹುದು, ಆದರೆ ತುಪ್ಪ ಹಾಕಿದರೆ ರುಚಿ ಹೆಚ್ಚು.
* ಇದನ್ನು ತಯಾರಿ ಮಾಡಿಟ್ಟರೆ 2-3 ದಿನದವರೆಗೆ ಬಳಸಬಹುದು.
* ಈ ಸಿಹಿ ಪರೋಟ ಸಿಹಿ ಸಿಹಿಯಾಗಿ ತುಂಬಾ ಚೆನ್ನಾಗಿರಲಿದೆ.

[ of 5 - Users]
Story first published: Tuesday, January 16, 2024, 16:23 [IST]
X
Desktop Bottom Promotion