Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅನ್ನದ ಜೊತೆ ಸವಿಯಲು ಸಕತ್ ರುಚಿಯಾಗಿರುತ್ತೆ ಈ ಮೊಟ್ಟೆ ತೊಕ್ಕು
ಅನ್ನವಿದೆ, ಪಟ್ ಅಂತ ಏನಾದರು ಸಾರು ಮಾಡಬೇಕು ಎಂದಾಗ ಅಥವಾ ಮಾಮೂಲಿ ಅಡುಗೆಗೆ ಇನ್ನೂ ಸ್ವಲ್ಪ ರುಚಿ ಸೇರಿಸಬೇಕೆಂದು ಅನಿಸಿದಾಗ ನೀವು ಈ ಮೊಟ್ಟೆ ತೊಕ್ಕು ಟ್ರೈ ಮಾಡಬಹುದು, ಈ ಮೊಟ್ಟೆ ತೊಕ್ಕು ಸೂಪರ್ ಟೇಸ್ಟ್ ಜೊತೆಗೆ ಮಾಡುವುದು ಕೂಡ ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ....

ಬೇಕಾಗುವ ಸಾಮಗ್ರಿ
ಬೇಯಿಸಿದ ಮೊಟ್ಟೆ 5
3 ಚಮಚ
ಸೋಂಪು 1 ಚಮಚ
ಚಕ್ಕೆ 1
ದೊಡ್ಡ ಈರುಳ್ಳಿ1
ಹಸಿ ಮೆಣಸು 2
ಕರಿಬೇವಿನ ಎಲೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಟೊಮೆಟೊ ಪೇಸ್ಟ್ (2 ಟೊಮೆಟೊ ಪೇಸ್ಟ್ ಮಾಡಿದ್ದು)
ಖಾರದ ಪುಡಿ 1 ಚಮಚ
ಅರಿಶಿಣ ಪುಡಿ 1 ಚಮಚ
ಗರಂ ಮಸಾಲ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ನೀರು
ಮಾಡುವುದು ಹೇಗೆ?
* ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
* ಎಣ್ಣೆ ಬಿಸಿಯಾದಾಗ ಚಕ್ಕೆ, ಸೋಂಪು ಹಾಕಿ
* ನಂತರ ಈರುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿ.
* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ , ಅದರ ಹಸಿ ವಾಸನೆ ಹೋಗುವಷ್ಟು
ಹೊತ್ತು ಸೌಟ್‌ನಿಂದ ಆಡಿಸಿ.
* ನಂತರ ಉಪ್ಪು, ಅರಿಶಿಣ ಹಾಕಿ, ಟೊಮೆಟೊ ಪೇಸ್ಟ್ ಹಾಕಿ.
* ಆ ಮಸಾಲೆಯಿಂದ ಎಣ್ಣೆ ಬೇರ್ಪಡುವಷ್ಟು ಹೊತ್ತು ಬೇಯಿಸಿ
* ನಂತರ ಖಾರದ ಪುಡಿ ಹಾಕಿ
* ನಂತರ ಕತ್ತರಿಸಿ ಮೊಟ್ಟೆ ಹಾಕಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ 5 ನಿಮಿಷ
ಬೇಯಿಸಿದರೆ ಸೂಪರ್ ಮೊಟ್ಟೆ ತೊಕ್ಕು ಸೇವಿಸಿ.
ತೊಕ್ಕು ಬುರ್ಜಿ
ನೀವು ಇದೇ ಮಸಾಲೆ ಹಾಕಿ ಬುರ್ಜಿ ರೀತಿ ಕೂಡ ತಯಾರಿಸಬಹುದು, ಆದರೆ ರುಚಿ ಸ್ವಲ್ಪ
ಭಿನ್ನವಾಗಿರುತ್ತದೆ. ಇದನ್ನು ಚಪಾತಿ ತಿನ್ನಲು ತುಂಬಾ ಚೆನ್ನಾಗಿರಲಿದೆ.
* ನೀವು ಮೊದಲು ತೊಕ್ಕು ಗೊಜ್ಜು ತಯಾರಿಸಿ, ನಂತರ ಬುರ್ಜಿ ರೀತಿ ಮಾಡಿಟ್ಟ
ಮೊಟ್ಟೆಯನ್ನು ಹಾಕಿ ಮಿಕ್ಸ್ ಮಾಡಿದರೆ ಚೆನ್ನಾಗಿರುತ್ತದೆ.
ಮೊಟ್ಟೆಯನ್ನು ಒಡೆದು ಹಾಕಿ ಮಾಡಬಹುದು
ನೀವು ಇದೇ ತೊಕ್ಕು ಗ್ರೇವಿ ಬಳಸಿ ಮತ್ತೊಂದು ವೆರೈಟಿ ಮೊಟ್ಟೆ ಸಾರು ಮಾಡಬಹುದು
ಇದು ಅನ್ನ, ದೋಸೆ, ಚಪಾತಿ, ರೊಟ್ಟಿಗೆ ಎಲ್ಲಾ ಬಗೆಯ ಆಹಾರಕ್ಕೂ ಒಪ್ಪುತ್ತೆ. ನೀವು
ಗ್ರೇವಿ ತಯಾರಿಸಿ ಮೊಟ್ಟೆಯನ್ನು ಒಡೆದು ಹಾಕಿ 5 ನಿಮಿಷ ಬೇಯಿಸಿದರೆ ಈ ಮೊಟ್ಟೆ
ಸಾರು ಕೂಡ ಸೂಪರ್ ಆಗಿರುತ್ತದೆ.



Click it and Unblock the Notifications