Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಹೊಸ ರುಚಿ: ಮೊಟ್ಟೆಯ ಪಲ್ಯ ರೆಸಿಪಿ
ಮೊಟ್ಟೆಯ ಪಲ್ಯ....ಹೆಸರೇ ತುಂಬಾ ವಿಚಿತ್ರವಾಗಿದೆ. ಯಾಕೆಂದರೆ ನಾವು ದಕ್ಷಿಣ ಭಾರತೀಯರು ಹಲವಾರು ರೀತಿಯ ತರಕಾರಿ ಪಲ್ಯಗಳನ್ನು ಮಾಡಿಕೊಂಡು ತಿನ್ನುತ್ತೇವೆ. ಆದರೆ ಮೊಟ್ಟೆ ಪಲ್ಯ ಮಾತ್ರ ಇದುವರೆಗೆ ಮಾಡಿಲ್ಲ ಎಂದು ಹೇಳಬಹುದು. ಮೊಟ್ಟೆ ಪಲ್ಯವು ದಕ್ಷಿಣ ಹಾಗೂ ಉತ್ತರ ಭಾರತದ ಅಡುಗೆಯ ಮಿಶ್ರಣವಾಗಿದೆ. ಇದನ್ನು ಪಲ್ಯದಂತೆ ಬಳಸಬಹುದು. ಚಪಾತಿ, ರೊಟ್ಟಿ ಅಥವಾ ಪರೋಟ ಜತೆಗೂ ಇದನ್ನು ನೀಡಬಹುದು. ಅನ್ನ ಸಾರಿಗೂ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಬೇಯಿಸಿದ ಮೊಟ್ಟೆ, ಕ್ಯಾಪ್ಸಿಕಂ(ದೊಣ್ಣೆ ಮೆಣಸು) ಟೊಮೆಟೋದಿಂದ ಮಾಡುವಂತಹ ವಿಶೇಷ ಪಲ್ಯ ಇದಾಗಿದೆ. ಇದಕ್ಕೆ ಆದ್ಯತೆಯ ಅನುಸಾರವಾಗಿ ನೀವು ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಟೊಮೆಟೊ ಮೂಲದ ಮೊಟ್ಟೆ ಪಲ್ಯವು ಚೆನ್ನಾಗಿರುವುದು. ಸರಿಯಾದ ಮಸಾಲೆ ಹಾಗೂ ಅದನ್ನು ತಯಾರಿಸುವ ರೀತಿಯ ಮೇಲೆ ಮೊಟ್ಟೆ ಪಲ್ಯದ ರುಚಿಯು ಅವಲಂಬಿತವಾಗಿರುವುದು. ಕಸೂರಿ ಮೇಥಿ ಹಾಕಿಕೊಂಡರೆ ಆಗ ಮೊಟ್ಟೆ ಪಲ್ಯದ ರುಚಿಯೇ ತುಂಬಾ ಭಿನ್ನವಾಗಿರುವುದು. ಇದನ್ನು ಮನೆಯಲ್ಲಿ ತುಂಬಾ ಬೇಗನೆ ತಯಾರಿಸಿಕೊಳ್ಳಬಹುದು. ಇದು ಹೆಚ್ಚು ಶ್ರಮ ಕೂಡ ವಹಿಸಬೇಕಾಗಿಲ್ಲ.
ನೀವು ಮೊಟ್ಟೆ ಪಲ್ಯ ಪ್ರಯತ್ನಿಸಲು ಬಯಸುವಿರಾದರೆ ಕೆಳಗಿನ ವೀಡಿಯೋ ನೋಡಿ ಮತ್ತು ವಿವರವಾಗಿ ಕೊಟ್ಟಿರುವ ಮಾಹಿತಿ ಓದಿಕೊಂಡು ಇದನ್ನು ತಯಾರಿಸಬಹುದು.

Recipe By: ಅರ್ಚನಾ ವಿ
Recipe Type: ಸೈಡ್ ಡಿಶ್/ ಸ್ನಾಕ್ಸ್
Serves: 2-3
-
ಮೊಟ್ಟೆಗಳು-3
ಕ್ಯಾಪ್ಸಿಕಂ-1/2
ಟೊಮೆಟೋ-1
ಎಣ್ಣೆ-4 ಚಮಚ
ಅರಶಿನ ಹುಡಿ ½ ಚಮಚ
ಜೀರಿಗೆ ಹುಡಿ 1 ಚಮಚ
ಉಪ್ಪು 1 ಮತ್ತು ¾ ಚಮಚ
ಕೆಂಪು ಮೆಣಸಿನ ಹುಡಿ 1 ಚಮಚ
ಕಸೂರಿ ಮೇಥಿ 1 ಚಮಚ
ಕಿಚನ್ ಕಿಂಗ್ ಮಸಾಲ-1 ಚಮಚ
ಕೊತ್ತಂಬರಿ-1 ಚಮಚ ಕತ್ತರಿಸಿಕೊಂಡಿರುವುದು ಮತ್ತು ಅಲಂಕಾರಕ್ಕೆ
-
1. ಒಂದು ಆಳತಳದ ತವಾಗೆ ಮೊಟ್ಟೆಗಳನ್ನು ಹಾಕಿ.
2. ಮೊಟ್ಟೆಗಳು ಮುಳುವಷ್ಟು ಪ್ರಮಾಣದಲ್ಲಿ ಇದಕ್ಕೆ ನೀರು ಹಾಕಿ.
3. ಒಂದು ಚಮಚ ಉಪ್ಪು ಹಾಕಿ ಮತ್ತು 15 ನಿಮಿಷ ಕಾಲ ಬೇಯಲಿ.
4. ಇದೇ ವೇಳೆ ಕ್ಯಾಪ್ಸಿಕಂ ತೆಗೆದು ಎರಡು ತುಂಡುಗಳನ್ನಾಗಿ ಮಾಡಿ.
5. ಮೇಲಿನ ಭಾಗವನ್ನು ಕತ್ತರಿಸಿ.
6. ಒಳಗಿನ ಬಿಳಿ ಬೀಜಗಳನ್ನು ತೆಗೆಯಿರಿ.
7. ಅರ್ಧ ಕ್ಯಾಪ್ಸಿಕಂ ತೆಗೆದು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ.
8. ಕ್ಯಾಪ್ಸಿಕಂನ ಮೇಲಿನ ಭಾಗವನ್ನು ಅದರ ತೊಟ್ಟು ತೆಗೆದು ಬಳಸಬಹುದು.
9. ಟೊಮೆಟೋ ತೆಗೆದುಕೊಂಡು ಅದರ ಗಟ್ಟಿಯಾದ ಮೇಲಿನ ಭಾಗ ತೆಗೆಯಿರಿ.
10. ಇದನ್ನು ಉದ್ದವಾಗಿ ಕತ್ತರಿಸಿಕೊಳ್ಳಿ ಮತ್ತು ಅದನ್ನು ಅರ್ಧ ಮಾಡಿಕೊಳ್ಳಿ.
11. ಟೊಮೆಟೋದ ಬೀಜಗಳನ್ನು ಚಾಕುವಿನಿಂದ ತೆಗೆಯಿರಿ.
12. ಇದನ್ನುಮಧ್ಯಮ ಗಾತ್ರದಲ್ಲಿ ಕತ್ತರಿಸಿ.
13. ತವಾ ಬಿಸಿ ಮಾಡಿ ನಾಲ್ಕು ಚಮಚ ಎಣ್ಣೆ ಹಾಕಿ.
14. ಕತ್ತರಿಸಿಕೊಂಡ ಟೊಮೆಟೋ ಮತ್ತು ಕ್ಯಾಪ್ಸಿಕಂ ಹಾಕಿ.
15. ಒಂದು ಚಿಟಿಕೆ ಅರಶಿನ ಹುಡಿ ಮತ್ತು ಒಂದು ಚಮಚ ಜೀರಿಗೆ ಹುಡಿ ಹಾಕಿ.
16. ಒಂದು ಚಮಚ ಉಪ್ಪು ಮತ್ತು ಕೆಂಪು ಮೆಣಸಿನ ಹುಡಿ ಹಾಕಿ.
17. ಮಸಾಲೆಯನ್ನು ಸರಿಯಾಗಿ ಹುರಿಯಿರಿ.
18. ಕಸೂರಿ ಮೇಥಿಯನ್ನು ಅಂಗೈಗೆ ಹಾಕಿಕೊಂಡು ಹಿಚುಕಿಕೊಂಡು ಮಸಾಲೆಗೆ ಹಾಕಿ.
19. ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಮಾಡಿ.
20. ಇದನ್ನು ಮಧ್ಯಮ ಗಾತ್ರದ ತುಂಡುಗಳನ್ನಾಗಿ ಮಾಡಿ.
21. ಇದನ್ನು ಮಸಾಲೆಗೆ ಹಾಕಿ.
22. ¾ ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ.
23. ಅಂತಿಮವಾಗಿ ಒಂದು ಚಮಚ ಕಿಚನ್ ಕಿಂಗ್ ಮಸಾಲ ಮತ್ತು ಕತ್ತರಿಸಿಕೊಂಡಿರುವ ಕೊತ್ತಂಬರಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
24. ಇದನ್ನು ಈಗ ಒಂದು ಪಾತ್ರೆಗೆ ಹಾಕಿ.
25. ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಡಿಸಿ.
- ತಾಜಾ ಮೊಟ್ಟೆಗಳನ್ನು ಬಳಸಿ
- ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಬೇರೆ ತರಕಾರಿ ಬಳಸಬಹುದು
- ಕೊತ್ತಂಬರಿ ಸೊಪ್ಪಿನ ಜತೆಗೆ ಪುದೀನಾ ಸೊಪ್ಪನ್ನು ಅಲಂಕಾರಕ್ಕೆ ಬಳಸಬಹುದು.
- ಬಡಿಸುವ ಪ್ರಮಾಣ - ಒಂದು ಪ್ಲೇಟ್
- ಕ್ಯಾಲರಿ - 160.5 ಕಾಲ್
- ಕೊಬ್ಬು - 9.3 ಗ್ರಾಂ
- ಪ್ರೋಟೀನ್ - 8.2 ಗ್ರಾಂ
- ಕಾರ್ಬ್ರೋಹೈಡ್ರೇಟ್ಸ್ - 12.7 ಗ್ರಾಂ
- ಸಕ್ಕರೆ - 1.1 ಗ್ರಾಂ
- ನಾರಿನಾಂಶ - 2.6 ಗ್ರಾಂ
ಹಂತಹಂತವಾಗಿ ಮೊಟ್ಟೆ ಪಲ್ಯ ಮಾಡುವ ವಿಧಾನ
1. ಒಂದು ಆಳತಳದ ತವಾಗೆ ಮೊಟ್ಟೆಗಳನ್ನು ಹಾಕಿ.

2. ಮೊಟ್ಟೆಗಳು ಮುಳುಗುವಷ್ಟ ಮಟ್ಟಕ್ಕೆ ನೀರನ್ನು ಹಾಕಿ.

3. ಇದಕ್ಕೆ ಒಂದು ಚಮ ಉಪ್ಪು ಹಾಕಿ 15 ನಿಮಿಷ ಕಾಲ ಬೇಯಲು ಬಿಡಿ.


4. ಕ್ಯಾಪ್ಸಿಕಂ ತೆಗೆದುಕೊಂಡು ಅದನ್ನು ಅರ್ಧ ಮಾಡಿಕೊಳ್ಳಿ.

5. ಮೇಲಿನ ಭಾಗವನ್ನು ಕೂಡ ಕತ್ತರಿಸಿ.

6. ಬಿಳಿ ಭಾಗವನ್ನು ತೆಗೆಯಿರಿ.

7. ಇದರ ಅರ್ಧ ಕ್ಯಾಪ್ಸಿಕಂ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ.

8. ತೊಟ್ಟನ್ನು ತೆಗೆದು ಮೇಲಿನ ಭಾಗ ಬಳಸಬಹುದು.

9. ಟೊಮೆಟೋ ತೆಗೆದುಕೊಂಡು ಮೇಲಿನ ಗಟ್ಟಿ ಭಾಗ ಕತ್ತರಿಸಿಕೊಳ್ಳಿ.

10. ಟೊಮೆಟೋವನ್ನು ಉದ್ದಗೆ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.


11. ಚಾಕುವಿನಿಂದ ಟೊಮೆಟೋದ ಬೀಜಗಳನ್ನು ತೆಗೆಯಿರಿ.

12. ಮತ್ತೆ ಅದನ್ನು ಮಧ್ಯಮ ಗಾತ್ರಕ್ಕೆ ಕತ್ತರಿಸಿ.

13. ಬಿಸಿ ಮಾಡಿದ ತವಾಗೆ ನಾಲ್ಕು ಚಮಚ ಎಣ್ಣೆ ಹಾಕಿ.

14. ಕತ್ತರಿಸಿಕೊಂಡ ಕ್ಯಾಪ್ಸಿಕಂ ಮತ್ತು ಟೊಮೆಟೋ ಹಾಕಿ.


15. ಒಂದು ಚಿಟಿಕೆ ಅರಶಿನ ಹುಡಿ ಮತ್ತು ಒಂದು ಚಮಚ ಜೀರಿಗೆ ಹುಡಿ ಹಾಕಿ.


16. ಒಂದು ಚಮಚ ಉಪ್ಪು ಮತ್ತು ಕೆಂಪು ಮೆಣಸಿನ ಹುಡಿ ಹಾಕಿ.


17, ಮಸಾಲೆಯನ್ನು ಸರಿಯಾಗಿ ಹುರಿಯಿರಿ.

18. ಕಸೂರಿ ಮೇಥಿಯನ್ನು ಅಂಗೈಗೆ ಹಾಕಿಕೊಂಡು ಹಿಚುಕಿಕೊಂಡು ಮಸಾಲೆಗೆ ಹಾಕಿ.

19. ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಮಾಡಿ.


20.ಇದನ್ನು ಮಧ್ಯಮ ಗಾತ್ರದ ತುಂಡುಗಳನ್ನಾಗಿ ಮಾಡಿ.

21. ಇದನ್ನು ಮಸಾಲೆಗೆ ಹಾಕಿ.

22. ¾ ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ.


23. ಅಂತಿಮವಾಗಿ ಒಂದು ಚಮಚ ಕಿಚನ್ ಕಿಂಗ್ ಮಸಾಲ ಮತ್ತು ಕತ್ತರಿಸಿಕೊಂಡಿರುವ ಕೊತ್ತಂಬರಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ.



24. ಇದನ್ನು ಈಗ ಒಂದು ಪಾತ್ರೆಗೆ ಹಾಕಿ.

25. ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಡಿಸಿ.






Click it and Unblock the Notifications