Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ರೆಸಿಪಿ: ಹೀಗೆ ಮಾಡಿದರೆ ತುಂಬಾ ಟೇಸ್ಟಿಯಾಗಿರುತ್ತೆ ಎಗ್ ಫ್ರೈಡ್ ರೈಸ್
ಎಗ್ ಫ್ರೈಡ್ ರೈಸ್ ನೋಡಿದರೆ ಸಾಕು ಅದನ್ನು ತಿನ್ನಬೇಕೆಂದು ಅನಿಸುತ್ತದೆ ಅಲ್ಲವೇ? ಈಗೀನ ಪರಿಸ್ಥಿತಿಯಲ್ಲಿ ಹೊರಗಡೆಯಿಂದ ತಿನ್ನುವುದು ಅಷ್ಟು ಸುರಕ್ಷಿತವಲ್ಲ. ಈ ಎಗ್ ಫ್ರೈಡ್ರೈಸ್ ಅನ್ನು ತುಂಬಾ ರುಚಿಕರವಾಗಿ ಮನೆಯಲ್ಲಿಯೇ ಮಾಡಬಹುದು.

ಇಲ್ಲಿ ನಾವು ಸರಳವಾದ ರೆಸಿಪಿ ನೀಡಿದ್ದೇವೆ. ಇದನ್ನು ಒಮ್ಮೆ ಟ್ರೈ ಮಾಡಿದ್ದೇ ಆದರೆ ಮುಂದೆ ನೀವು ಹೊರಗಡೆಯಿಂದ ಫ್ರೈಡ್ರೈಸ್ ಬೇಡ ಮನೆಯದ್ದೇ ತುಂಬಾ ರುಚಿಯಾಗಿರುತ್ತೆ ಎಂದು ಹೇಳುವುದು ಗ್ಯಾರಂಟಿ. ಬನ್ನಿ ಎಗ್ ಫ್ರೈಡ್ರೈಸ್ ಮಾಡುವುದು ಹೇಗೆ ಎಂದು ನೊಡೋಣ:
Recipe By: Reena TK
Recipe Type: Meal
Serves: 2
-
ಬೇಕಾಗುವ ಸಾಮಗ್ರಿ
3 ಚಮಚ ಎಣ್ಣೆ
1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಚಮಚ ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
1/4 ಕಪ್ ಸೆಲರಿ (Optional)
1/4 ಕಪ್ ಸ್ಪ್ರಿಂಗ್ ಆನಿಯನ್ (ಚಿಕ್ಕದಾಗಿ ಕತ್ತರಿಸಿದ್ದು)
1/2 ಕಪ್ ಬಟಾಣಿ (ಬೇಯಿಸಿದ್ದು)
1/2 ಕಪ್ ಕ್ಯಾರೆಟ್
1/4 ಕಪ್ ಬೀನ್ಸ್
2 ಕಪ್ ಬೇಯಿಸಿದ ಅನ್ನ
1 ಚಮಚ ಡಾರ್ಕ್ ಸೋಯಾ ಸಾಸ್
1 ಚಮಚ ಎಳ್ಳೆಣ್ಣೆ
1/2 ಚಮಚ ಬಿಳಿ ಕಾಳು ಮೆಣಸಿನ ಪುಡಿ
2-3 ಮೊಟ್ಟೆ
-
ಮಾಡುವ ವಿಧಾನ
* ಅಗಲವಾದ ಬಾಣಲಿಗೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ ಮೊಟ್ಟೆಯನ್ನು ಒಡೆದು ಹಾಕಿ ಎಣ್ಣೆಯಲ್ಲಿ ಫ್ರೈ ಮಾಡಿ. ಮೊಟ್ಟೆ ಕಂದು ಬಣ್ಣಕ್ಕೆ ತಿರುಗಲು ಬಿಡಬೇಡಿ. ಫ್ರೈಯಾದ ಮೊಟ್ಟೆಯನ್ನು ತೆಗೆದು ಒಂದು ಕಪ್ನಲ್ಲಿ ಹಾಕಿಡಿ.
* ಈಗ ಅದೇ ಬಾಣಲಿಗೆ 2 ಚಮಚ ಎಣ್ಣೆ ಹಾಕಿ, ಶುಂಠಿ, ಈರುಳ್ಳಿ, ಸೆಲರಿ, ಸ್ಪ್ರಿಂಗ್ ಆನಿಯನ್ ಹಾಕಿ ಫ್ರೈ ಮಾಡಿ . ಆಗ ಪರಿಮಳ ಬರಲಾರಂಭಿಸುತ್ತದೆ, ಆಗ ಕ್ಯಾರೆಟ್ ಹಾಗೂ ಬಟಾಣಿ, ಬೀನ್ಸ್ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮತ್ತೆ ಫ್ರೈ ಮಾಡಿ. ಹೀಗೆ ಫ್ರೈ ಮಾಡುವಾಗ ಉರಿ ಅಧಿಕವಾಗಿರಲಿ. ಆಗ ತರಕಾರಿ ಚೆನ್ನಾಗಿ ರೋಸ್ಟ್ ಆಗಿ ರುಚಿ ಹೆಚ್ಚುವುದು.
* ಈಗ ಅನ್ನ ಹಾಕಿ ಮಿಕ್ಸ್ ಮಾಡಿ, ಈಗ ಸೋಯಾ ಸಾಸ್, ವಿನೆಗರ್, ಎಳ್ಳೆಣ್ಣೆ, ಬಿಳಿ ಕಾಳು ಮೆಣಸಿನ ಪುಡಿ, ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಂದು 2 ನಿಮಿಷ ಚೆನ್ನಾಗಿ ಮಿಶ್ರ ಮಾಡಿ, ಈಗ ಫ್ರೈ ಮಾಡಿಟ್ಟ ಹೊಟ್ಟೆ ಹಾಕಿ ಮತ್ತೊಮ್ಮೆ ಮಿಶ್ರ ಮಾಡಿದರೆ ಎಗ್ ಫ್ರೈಡ್ ರೈಸ್ ಸರ್ವ್ ಮಾಡಲು ರೆಡಿ.
- * ಎಗ್ ಫ್ರೈಡ್ ರೈಸ್ ಜೊತೆ ಮಶ್ರೂಮ್ ಕೂಡ ಹಾಕಿದರೆ ರುಚಿ ಮತ್ತಷ್ಟು ಚೆನ್ನಾಗಿರುತ್ತದೆ. * ಸೋಯಾ ಸಾಸ್ ಸ್ವಲ್ಪ ಅಧಿಕವೇ ಇರಲಿ, ಮೊಟ್ಟೆ ಹಾಕಿ ಮಿಶ್ರ ಮಾಡಿದ ಮೇಲೆ ಮತ್ತೊಮ್ಮೆ ಸ್ವಲ್ಪ ಸೋಯಾ ಸಾಸ್ ಹಾಕಿ ಮಿಶ್ರ ಮಾಡಿ.
- ಸರ್ವ್ - 2 ಪ್ಲೇಟ್
- ಕ್ಯಾಲೋರಿ - 583 ಕ್ಯಾ
- ಪ್ರೊಟೀನ್ - 7.8ಗ್ರಾಂ
- ಕಾರ್ಬ್ಸ್ - 28ಗ್ರಾಂ



Click it and Unblock the Notifications