Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ ಬಿಡಿಸಲು ಸುಲಭ ದಾರಿ ಯಾವುದು ಗೊತ್ತಾ..? ಹೀಗೆ ಮಾಡಿ ಸಾಕು..!
ಅತಿ ಕಡಿಮೆ ಎಣ್ಣೆಯ ಅಂಶದೊಡನೆ ಆವಿಯಲ್ಲಿ ಬೆಂದ ಅಕ್ಕಿ ಇಡ್ಲಿ ಅತ್ಯಂತ ಆರೋಗ್ಯಕರವಾಗಿದ್ದು ಬೆಳಗ್ಗಿನ ಉಪಹಾರಕ್ಕೂ ಸಂಜೆಯ ತಿಂಡಿಗೂ ಸೂಕ್ತವಾಗಿದೆ. ಸಾಂಬಾರಿನೊಂದಿಗೂ, ಚಟ್ನಿಯೊಂದಿಗೂ, ಬೆಲ್ಲದನೀರು, ಜೇನು, ಸಾರು ಎಲ್ಲದರೊಡನೆ ಬೆರೆತು ತಿನ್ನಬಹುದಾದ ಇಡ್ಲಿ ಪ್ರತಿ ಮನೆಯಲ್ಲಿಯೂ ತಪ್ಪದೇ ತಯಾರಾಗುತ್ತದೆ. ಆದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ಬೇಕು ಎಂಬುದೇ ಹೇಳಿಕೊಳ್ಳಬಹುದಾದ ಋಣಾತ್ಮಕ ಅಂಶ.
ಇದು ಸರಳ, ಹಗುರ, ಆರೋಗ್ಯಕರ ಮತ್ತು ಸಾಂಬಾರ್ ಮತ್ತು ವಿವಿಧ ರೀತಿಯ ಚಟ್ನಿಗಳೊಂದಿಗೆ ಸವಿಯಲು ರುಚಿಕರವಾಗಿರುತ್ತದೆ. ಇದಲ್ಲದೆ, ಇಂದು ನೀವು ವಿವಿಧ ರೀತಿಯಲ್ಲಿ ಇಡ್ಲಿ ಮಾಡಬಹುದು. ಅದಕ್ಕೆ ತರಕಾರಿ, ರಾಗಿ ಹಿಟ್ಟು, ಗೋಧಿ, ಓಟ್ಸ್, ಬಳಸಿಯೂ ಇಡ್ಲಿ ಮಾಡಬಹುದು.

ಆದರೆ ಇಡ್ಲಿ ಮಾಡಬೇಕಾದರೆ ಮನೆಯಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆ ಎಂದರೆ ಇಡ್ಲಿ ಬೆಂದ ಬಳಿಕ ಅದು ಪಾತ್ರೆಗೆ ಅಂಟಿಕೊಳ್ಳುವುದು. ಹೌದು ಇಡ್ಲಿಯನ್ನು ಕಪ್‌ನಿಂದ ಬಿಡಿಸಬೇಕಾದರೆ ಇಡ್ಲಿ ಹಾಳಾಗುತ್ತವೆ. ಏಕೆಂದರೆ ಇಡ್ಲಿಯು ಪಾತ್ರೆಗೆ ಅಂಟಿಕೊಂಡಿರುತ್ತದೆ. ಈ ವೇಳೆ ಬಲತ್ಕಾರವಾಗಿ ಅದನ್ನು ಬಿಡಿಸಲು ಹೋದಾಗ ಇಡ್ಲಿ ಪುಡಿಯಾಗುತ್ತದೆ.
ಹಾಗಾದರೆ ಇಡ್ಲಿಯನ್ನು ಸುಲಭವಾಗಿ ಪಾತ್ರಯಿಂದ ಇಲ್ಲವೆ ಕಪ್‌ನಿಂದ ಬಿಡಿಸುವುದು ಹೇಗೆ? ಈ ರೀತಿ ಇಡ್ಲಿಯನ್ನು ಸುಲಭವಾಗಿ ಬಿಡಿಸಬೇಕಾದರೆ ಈ ಕೆಳಗೆ ಹೇಳಲಾದ ಸುಲಭ ಉಪಾಯವನ್ನು ನೀವೂ ಮಾಡಿ ನೋಡಿ.
ಇಡ್ಲಿ ಅಚ್ಚುಗಳಿಗೆ ಚೆನ್ನಾಗಿ ಎಣ್ಣೆ ಸವರಿ
ಇಡ್ಲಿ ಹಿಟ್ಟನ್ನು ಅಚ್ಚುಗಳಿಗೆ ಹಾಕುವ ಮುನ್ನ ಆ ಅಚ್ಚುಗಳಿಗೆ ಚೆನ್ನಾಗಿ ಎಣ್ಣೆಯನ್ನು ಸವರಬೇಕು. ಹೀಗೆ ಮಾಡುವುದರಿಂದ ಇಡ್ಲಿ ಕೊನೆಯಲ್ಲಿ ಬಿಡಿಸುವುದು ಸುಲಭವಾಗುತ್ತದೆ. ಆದರೆ ಕೆಲವು ಬಾರಿ ಎಣ್ಣೆ ಸವರಿದಾಗಲೂ ಇಡ್ಲಿ ಬಿಡಿಸುವುದು ಕಷ್ಟವಾಗಬಹುದು.
ಇಡ್ಲಿ ತೆಗೆಯುವ ಮುನ್ನ ಅಚ್ಚಿನ ಹಿಂಬದಿ ನೀರು
ಚಿಮುಕಿಸಿ
ಇಡ್ಲಿ ಬೆಂದ ಬಳಿಕ ಕಪ್ ಅನ್ನು ತೆಗೆದುಕೊಂಡು ಅದರ ಹಿಂಭಾಗಕ್ಕೆ ಕೈಯಲ್ಲಿ ಸ್ಪಲ್ಪ ನೀರು ತೆಗೆದುಕೊಂಡು ಚಿಮುಕಿಸಿ. ಹೀಗೆ ಮಾಡುವುದರಿಂದ ಸುಲಭವಾಗಿ ಇಡ್ಲಿ ಬಿಡಿಸಬಹುದು.
ಚಮಚ ಬಳಸಿ ಇಡ್ಲಿ ತೆಗೆಯಿರಿ
ಇಡ್ಲಿ ಅಚ್ಚಿನಿಂದ ಚಮಚವನ್ನು ಬಳಸಿ ಇಡ್ಲಿಯನ್ನು ತೆಗೆಯಿರಿ. ಅದನ್ನು ಬಿಟ್ಟು ಹೊಡ್ಡ ಸ್ಪೂನ್ ಬಳಸುವುದು ಚಾಕು ಬಳಸಬೇಡಿ. ಅಲ್ಲದೆ ಇಡ್ಲಿ ಬಿಸಿಯಾಗಿದ್ದಾಗಲೇ ಬಿಡಿಸಿದರೆ ಸುಲಭವಾಗಿ ಹೊರಬರುತ್ತದೆ ಇಲ್ಲದಿದ್ದರೆ ಬಿಡಿಸುವುದು ಕಷ್ಟವಾಗಲಿದೆ.
ಅಚ್ಚನ್ನು ಸ್ವಚ್ಚಗೊಳಿಸಿ
ಇಡ್ಲಿ ಹಿಟ್ಟನ್ನು ಅಚ್ಚಿಗೆ ಹಾಕುವ ಮುನ್ನ ಆ ಅಚ್ಚನ್ನು ನೆನೆಸಿಟ್ಟು ಚೆನ್ನಾಗಿ ತೊಳೆಯಬೇಕು. ಈ ಅಚ್ಚುಗಳು ಗಡಸಾದರೆ ಇಡ್ಲಿ ಬಿಡಿಸುವುದು ಕಷ್ಟವಾಗಲಿದೆ.
ಇಡ್ಲಿ ಹಿಟ್ಟು ಸರಿಯಾಗಿರಲಿ
ಇಡ್ಲಿ ಚೆನ್ನಾಗಿ ಬಿಡಿಸುವುದೆಂದರೆ ಇಡ್ಲಿ ಹಿಟ್ಟನ್ನು ಸರಿಯಾದ ಪ್ರಮಾಣದಲ್ಲಿ ರೆಡಿ ಮಾಡುವುದು. ಇಡ್ಲಿ ಹಿಟ್ಟು ಮಾಡುವಾಗ ನೀರು ಮತ್ತು ಹಿಟ್ಟಿನ್ನು ಬೆರೆಸುವ ಪ್ರಮಾಣ ಸರಿಯಾಗಿದ್ದರೆ ಇಡ್ಲಿ ಸುಲಭವಾಗಿ ತೆಗೆಯಬಹುದು. ಇದರ ಜೊತೆಗೆ ಇಡ್ಲಿ ಹಿಟ್ಟು ತಯಾರು ಮಾಡುವಾಗ ಹೇಗೆ ಮತ್ತು ಯಾವೆಲ್ಲಾ ವಸ್ತು ಹಾಕಿರುತ್ತೀರಿ ಎಂಬುದರ ಮೇಲೂ ಇಡ್ಲಿ ಅಚ್ಚಿನಿಂದ ಬಿಡುವ ಪ್ರಕ್ರಿಯೆಗೆ ಕಾರಣವಾಗಿರುತ್ತದೆ.
ಬಾಳೆ ಎಲೆ ಇಲ್ಲವೆ ಪ್ಲಾಸ್ಟಿಕ್
ಇತ್ತೀಚಿಗೆ ಇಡ್ಲಿ ಮಾಡಲು ತೆಳುವಾಗ ಪ್ಲಾಸ್ಟಿಕ್ ಬಳಸಲಾಗುತ್ತದೆ. ಈ ಪ್ಲಾಸ್ಟಿಕ್ ಮೇಲೆ ಇಡ್ಲಿ ಹಿಟ್ಟನ್ನು ಸುರಿಯಲಾಗುತ್ತದೆ. ಆದರೆ ಇದು ಆರೋಗ್ಯಕರ ಮಾರ್ಗವಲ್ಲ. ಇದರ ಬದಲು ಬಾಳೆ ಎಲೆಯ ಮೇಲೆ ಇಡ್ಲಿ ಹಿಟ್ಟನ್ನು ಹಾಕಬಹುದು. ಇಡ್ಲಿ ಅಚ್ಚಿನಷ್ಟು ಬಾಳೆ ಎಲೆ ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಚ್ಚಿ ಬಳಿಕ ಅದರ ಮೇಲೆ ಇಡ್ಲಿ ಹಿಟ್ಟು ಸುರಿಯಬಹುದು. ಹೀಗೆ ಮಾಡುವುದರಿಂದ ಇಡ್ಲಿ ಬಿಡಿಸುವುದು ಸುಲಭವಾಗಲಿದೆ.



Click it and Unblock the Notifications