Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಷ್ಟೇ ಸಾಮಗ್ರಿ ಸಾಕು ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ಸೂಪರ್ ಎಗ್‌ರೈಸ್
Recipes
oi-Reena TK
Posted By: Reena TK
ತುಂಬಾ ಹಸಿವಾಗುತ್ತಿದೆ ಬೆಳ್ತಕ್ಕಿ ಅನ್ನವಿದೆ ಎಂದಾದರೆ ಹತ್ತೇ ನಿಮಿಷದಲ್ಲಿ ರೆಡಿ ಮಾಡಬಹುದು ರುಚಿ ರುಚಿಯಾದ ಎಗ್‌ರೈಸ್. ಇನ್ನು ಎಗ್ ಫ್ರೈಡ್ ರೈಸ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ತಿನ್ನುವ ಆಹಾರವಾಗಿದೆ. ಹಾಗಾಗಿ ಪಟ್ ಅಂತ ರೆಡಿ ಮಾಡಿ ಎಗ್‌ಫ್ರೈಡ್ ರೈಸ್:

ಬೇಕಾಗುವ ಸಾಮಗ್ರಿ
ಮೊಟ್ಟೆ 4
3 ಚಮಚ ಎಣ್ಣೆ
ಒಂದು ಕಪ್ ಈರುಳ್ಳಿ ಚಿಕ್ಕದಾಗು ಹೆಚ್ಚಿದ್ದು
1/2 ಕಪ್ ತರಕಾರಿ( ಕ್ಯಾಪ್ಸಿಕಂ, ಕ್ಯಾರೆಟ್, ಬೀನ್ಸ್ ಸೇರಿ ನಿಮ್ಮ ಆಯ್ಕೆಯ
ತರಕಾರಿ ಬಳಸಬಹುದು)
ಸೋಯಾಸಾಸ್ (ರೆಗ್ಯೂಲರ್ ಸೋಯಾ ಸಾಸ್)
1/2 ಚಮಚ ವಿನೆಗರ್
ಒಂದೂವರೆ ಕಪ್ ಅನ್ನ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ.
- ನಂತರ ಅದರಲ್ಲಿ ಈರುಳ್ಳಿ, ಕತ್ತರಿಸಿದ ತರಕಾರಿ ಹಾಕಿ 5 ನಿಮಿಷ ಫ್ರೈ ಮಾಡಿ, ನಂತರ ಒಡೆದ ಮೊಟ್ಟೆ ಹಾಕಿ ಮಿಕ್ಸ್ ಮಾಡಿ, ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ, ಅನ್ನ ಹಾಕಿ ಒಂದು ನಿಮಿಸ ಮಿಕ್ಸ್ ಮಾಡಿ, ಸೋಯಾ ಸಾಸ್ ಹಾಗೂ ವಿನೆಗರ್ ಸೆರಿಸಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ, ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ ಸರ್ವ್ ಮಾಡಿದರೆ ಎಗ್ ಫ್ರೈಡ್ ರೈಸ್ ರೆಡಿ.
ಅದರ ಜೊತೆಗೆ ಒಂದು ಕಬಾಬ್, ಸೌತೆಕಾಯಿ,ಕ್ಯಾರೆಟ್ ಕತ್ತರಿಸಿಟ್ಟು ಸರ್ವ್ ಮಾಡಿದರೆ ಇನ್ನೂ ಸ್ಪೆಷಲ್ ಆಗಿರುತ್ತದೆ.
- ಸಲಹೆ: ನೀವು ಸೂರ್ಯಕಾಂತಿ ಎಣ್ಣೆ, ಕಡ್ಲೆಬೀಜ ಎಣ್ಣೆ, ಸಾಸಿವೆಯೆಣ್ಣೆ ಯಾವುದೇ ಅಡುಗೆಗೆ ಬಳಸುವ ಎಣ್ಣೆಯನ್ನು ಈ ಎಗ್‌ಫ್ರೈಡ್ ರೈಸ್ ಮಾಡುವಾಗ ಬಳಸಬಹುದು.
- ಈರುಳ್ಳಿಯಷ್ಟೇ ಯಾವ ಈರುಳ್ಳಿ ಬೇಕಾದರೂ ಬಳಸಬಹುದು, ಬಿಳಿ, ಹಳದಿ ಬಣ್ಣದ ಈರುಳ್ಳಿ ಸಿಗುತ್ತದೆ, ಯಾವುದು ಬೇಕಾದರೂ ಬಳಸಬಹದು.
- ತರಕಾರಿಯಷ್ಟೇ, ಯಾವ ತರಕಾರಿ ಬೇಕಾದರೆ ಬಳಸಬಹುದು, ಆದರೆ ಸ್ವಲ್ಪ ಬೇಗ ಬೇಯುವಂಥ, ಹೆಚ್ಚು ಬೆಂದಿಲ್ಲವಾದರೂ ತಿನ್ನುವಂಥ ತರಕಾರಿ ಬಳಸಬೇಕು, ಹಾಗಾಗಿ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಹಸಿ ಬಟಾಣಿ ಬಳಸುತ್ತೇವೆ, ಇನ್ನು ಒಣಗಿದ ಬಟಾಣಿಯಾದರೆ ನೀರಿನಲ್ಲಿ ನೆನೆಹಾಕಿ ಬೇಯಿಸಿ ಬಳಸಬೇಕು.
- ಅನ್ನ: ಅನ್ನಕ್ಕೆ ಯಾವ ಅಕ್ಕಿ ಬಳಸುತ್ತೇವೆ ಎಂಬುವುದು ಮುಖ್ಯ, ಎಷ್ಟು ಬೇಯಿಸುತ್ತೇವೆ ಎಂಬುವುದು ಮುಖ್ಯ, ಅನ್ನ ಬಿಡಿ ಬಿಡಿಯಾಗಿರಬೇಕು, ಹದವಾಗಿ ಬೆಂದಿರಬೇಕು. ಅಲ್ಲದೆ ಅನ್ನವನ್ನು ಮೊದಲೇ ಮಾಡಿಟ್ಟರೆ ಒಳ್ಳೆಯದು, ಬಿಸಿ ಬಿಸಿ ಅನ್ನ ಹಾಕಿ ಮಾಡುವುದಕ್ಕಿಂತ ಅನ್ನ ತಣ್ಣಗಾದ ಮೇಲೆ ಫ್ರೈಡ್‌ರೈಸ್‌ಗೆ ಹಾಕಿದರೆ ಒಳ್ಳೆಯದು.
ಸಾಸ್: ರೆಗ್ಯೂಲರ್ ಸೀಯಾ ಸಾಸ್ ಬಳಸಿ, ತುಂಬಾ ಕಪ್ಪಗೆ ಇರುವ ಸೋಯಾ ಸಾಸೇ
ಆಗಬೇಕೆಂದಿಲ್ಲ
ಅಲ್ಲದೆ ಇದಕ್ಕೆ ಸ್ವಲ್ಪ ವಿನೆಗರ್ ಸೇರಿಸಿದರೆ ಟ್ಯಾಂಗಿ
ರುಚಿಯಲ್ಲಿರುತ್ತದೆ.
Comments
[ of 5 - Users]



Click it and Unblock the Notifications