Just In
Don't Miss
- Movies
ತುಂಬು ಗರ್ಭಿಣಿ ಕರೀನಾ ಕಪೂರ್ ಯೋಗ ಮಾಡುತ್ತಿರುವ ಫೋಟೋ ವೈರಲ್
- News
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಸಿಲಿನ ಝಳಕ್ಕೆ- ಐಸ್ ಕ್ರೀಂ ಸೇರಿಸಿದ ಹಣ್ಣಿನ ಜ್ಯೂಸ್
ಬೇಸಿಗೆಯ ರಜೆಯ ಜೊತೆಗೇ ಬಿಸಿಲಿನ ಸೆಖೆಯೂ ಬಂದಿದೆ. ರಜೆಯ ಮಜಾ ಅನುಭವಿಸಲು ಬಿಸಿಲಿನ ಝಳ ಸಜೆ ನೀಡುತ್ತದೆ. ವಾತಾವರಣದ ಬಿಸಿಯ ಕಾರಣ ಹೆಚ್ಚು ಬೆವರು ಹರಿದು ದೇಹದಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಆದ್ದರಿಂದ ಸತತವಾಗಿ ನೀರು ಕುಡಿಯುತ್ತಿರುವುದು ಅಗತ್ಯ. ಹಿಂದೆ ಒಂದು ಊರಿನಿಂದ ಇನ್ನೊಂದೂರಿಗೆ ನಡೆದೇ ಹೋಗುವವರಿಗೆ ಅನುಕೂಲವಾಗಲೆಂದು ದಾರಿಯಲ್ಲಿದ್ದ ಮನೆಯವರೆಲ್ಲರೂ ಮನೆಯ ಹೊರಗೆ ಮಡಕೆ ಮತ್ತು ಬೆಲ್ಲದ ತುಂಡುಗಳನ್ನು ಇಡುತ್ತಿದ್ದರು. ಏಪ್ರಿಲ್ ಮೇ ತಿಂಗಳಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ನೀರಿನ ಅಗತ್ಯವೂ ಹೆಚ್ಚಾಗುತ್ತಾ ಹೋಗುತ್ತದೆ. ಈ ಅವಧಿಯಲ್ಲಿ ಕೇವಲ ನೀರು ಕುಡಿಯುವ ಬದಲು ಹಣ್ಣುಗಳ ಜ್ಯೂಸ್ ಕುಡಿಯುವುದು ಉತ್ತಮ. ಬೇಸಿಗೆಗೆ ಬೆಸ್ಟ್ ಲೆಮನ್ ಐಸ್ ಕ್ರೀಮ್
ಜ್ಯೂಸ್ ಎಂದಾಕ್ಷಣ ಮೊತ್ತ ಮೊದಲಿಗೆ ನೆನಪಿಗೆ ಬರುವುದು ಲಿಂಬೆಯ ಶರಬತ್ತು. ಆದರೆ ಪ್ರತಿಬಾರಿ ಒಂದೇ ಬಗೆಯ ಶರಬತ್ತು ಕುಡಿದು ಬೇಸರ ಹೆಚ್ಚಾಗುತ್ತದೆ. ನಿಮ್ಮ ಪರಿಸ್ಥಿತಿಯೂ ಇದೇ ಆಗಿದ್ದರೆ ಬದಲಾವಣೆಗಾಗಿ ವಿವಿಧ ಹಣ್ಣುಗಳ ಪಂಚ್ ಅಥವಾ ಒಮ್ಮೆಲೇ ರುಚಿಯನ್ನು ನೀಡುವ ಶರಬತ್ತೊಂದನ್ನು ಪ್ರಯತ್ನಿಸಿ ನೋಡಲು ಇದು ಸಕಾಲವಾಗಿದೆ. ಈ ವಿಧಾನ ಸುಲಭ ಮತ್ತು ಆಯಾ ಋತುಮಾನದಲ್ಲಿ ಯಥೇಚ್ಛವಾಗಿ ಸಿಗುವ ಹಣ್ಣುಗಳನ್ನು ಬಳಸಿ ಮಾಡಲಾಗುವ ಹಾಗೂ ಇದರ ಮೇಲೆ ಕೊಂಚ ಐಸ್ ಕ್ರೀಂ ಸೇರಿಸಿರುವ ಕಾರಣ ಬಿಸಿಲಿಗೆ ಬಳಲಿದ ದೇಹಕ್ಕೆ ಚೈತನ್ಯ ನೀಡುವ ಜೊತೆಗೇ ಹೊಸ ರುಚಿಯನ್ನು ಆಸ್ವಾದಿಸಿದ ತೃಪ್ತಿಯೂ ದೊರಕುತ್ತದೆ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ:
*ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು ಬೇಸಿಗೆ ಸ್ಪೆಷಲ್ ಡಿಲೈಟ್ : ಸಪೋಟಾ ಐಸ್ ಕ್ರೀಂ
ಅಗತ್ಯವಿರುವ ಸಾಮಾಗ್ರಿಗಳು:
*ಕಲ್ಲಂಗಡಿ ಹಣ್ಣು: ಒಂದು ಕಪ್ (ಚಿಕ್ಕದಾಗಿ ತುಂಡರಿಸಿ, ಬೀಜ ನಿವಾರಿಸಿದ್ದು)
*ಅನಾನಾಸ್ ಹಣ್ಣು: ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಕಿತ್ತಳೆ ಹಣ್ಣು -ಒಂದು ಕಪ್
*ಸೇಬು - ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಬಾಳೆಹಣ್ಣು - ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಸಕ್ಕರೆ - ಒಂದು ಕಪ್
*ಏಲಕ್ಕಿ ಪುಡಿ-ಕಾಲು ಚಿಕ್ಕಚಮಚ
*ಐಸ್ ಕ್ರೀಮ್ - 1 ಸ್ಕೂಪ್
*ಐಸ್ ತುಂಡುಗಳು- 1 ಕಪ್
ವಿಧಾನ:
* ಮಿಕ್ಸಿಯ ದೊಡ್ಡ ಜಾರಿನಲ್ಲಿ ಎಲ್ಲಾ ಹಣ್ಣುಗಳನ್ನು ಹಾಕಿ ಮೇಲೆ ಸಕ್ಕರೆ ಸುರಿದು ಸುಮಾರು ಅರ್ಧ ನಿಮಿಷ ಕಡೆಯಿರಿ.
* ಜಾರಿನಿಂದ ಈ ಮಿಶ್ರಣವನ್ನು ಹೊರತೆಗೆದು ಸೋಸುಕ ಅಥವಾ ಬಟ್ಟೆಯಲ್ಲಿ ಹಿಂಡಿ ರಸ ಬೇರ್ಪಡಿಸಿ.
*ರಸ ತೆಗೆದ ಮಿಶ್ರಣವನ್ನು ಮತ್ತೊಮ್ಮೆ ಮಿಕ್ಸಿಗೆ ಹಾಕಿ ಐಸ್ ಕ್ರಿಮ್, ಏಲಕ್ಕಿ ಪುಡಿ, ಐಸ್ ತುಂಡುಗಳನ್ನು ಹಾಕಿ ಮತ್ತೊಮ್ಮೆ ಕಡೆಯಿರಿ.
*ಒಂದು ಲೋಟದಲ್ಲಿ ಮೊದಲು ಹಣ್ಣಿನ ರಸವನ್ನು ಅರ್ಥ ತುಂಬಿಸಿ ಉಳಿದರ್ಧವನ್ನು ಎರಡನೆಯ ಬಾರಿ ಕಡೆದ ಮಿಶ್ರಣವನ್ನು ತುಂಬಿ. ಕೊಂಚವೇ ಚಮಚದಲ್ಲಿ ಮಿಶ್ರಣ ಮಾಡಿ ಕುಡಿಯಿರಿ. ಆಟವಾಡಿ ಬಂದ ಮಕ್ಕಳಿಗೆ, ಬಿಸಿಲಿನಲ್ಲಿ ತಿರುಗಾಡಿ ಬಂದ ಹಿರಿಯರಿಗೆ ಈ ಜ್ಯೂಸ್ ಅಪ್ಯಾಯಮಾನವಾಗುವುದರಲ್ಲಿ ಸಂಶಯವಿಲ್ಲ. ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.