Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಕಪ್ ರವೆ ಸಾಕು! ಕ್ರಿಸ್ಪಿ ರವಾ ಪಕೋಡ ರೆಡಿ.. ಮಾಡೋದು ಹೇಗೆ?
ಗರಿಗರಿ ಪಕೋಡ, ಈ ಮಳೆಗೆ ಪರ್ಫೆಕ್ಟ್ ತಿಂಡಿ. ಮೂರು ದಿನ ಇಟ್ಟರೂ ಸೂಪರ್. ಹೌದು, 100% ಮದುವೆ ಮನೆಯ ಗರಿ ಗರಿಯಾದ ಪಕೋಡ ಇದು. ಒಂದು ಕಪ್ ರವೆ ಸಾಕು, ಕ್ರಿಸ್ಪಿ ರವೆ ಪಕೋಡ (Rava Pakoda) ಸುಲಭವಾಗಿ ಮಾಡಬಹುದು. ಈ ರೀತಿ ತಯಾರಿಸಿ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ನೀವು ಕಡಲೆ ಹಿಟ್ಟಿನಿಂದ ಮಾಡಿದ ಪಕೋಡಗಳನ್ನು ಹಲವು ಬಾರಿ ತಿಂದಿರಬಹುದು. ಆದರೆ, ನೀವು ಎಂದಾದರೂ ರವೆಯಿಂದ ಮಾಡಿದ ಪಕೋಡಗಳನ್ನು ಸವಿದಿದ್ದೀರಾ? ನಾವಿಂದು ಈ ಲೇಖನದಲ್ಲಿ ರವೆ ಪಕೋಡ (Sooji Pakoda) ತಯಾರಿಸುವ ವಿಧಾನದ ಬಗ್ಗೆ ನಿಮಗೆ ತಿಳಿಸುತ್ತೇವೆ.
ಮಳೆಯಾಗಲಿ, ಸಂಜೆಯಾಗಲಿ ಅಥವಾ ಮನಸ್ಸಿಗೆ ಮುದ ನೀಡುವ ವಾತಾವರಣವಾಗಲಿ, ಒಂದು ಕಪ್ ಬಿಸಿ ಚಹಾದೊಂದಿಗೆ ಪಕೋಡ ಸವಿದರೆ ಅದರ ಮಜವೇ ಬೇರೆ. ಗರಿಗರಿಯಾದ ಪಕೋಡಗಳು ಆಹ್ಲಾದಕರ ವಾತಾವರಣ ಅಥವಾ ಹವಾಮಾನದ ಸಂತೋಷವು ದುಪ್ಪಷ್ಟು ಮಾಡುತ್ತವೆ. ನೀವು ರವೆಯಿಂದ ಮಾಡಿದ ಈ ಗರಿಗರಿಯಾದ ಪಕೋಡಗಳು ತುಂಬಾ ರುಚಿಕರವಾಗಿರುತ್ತವೆ. ಇದನ್ನು ಬೇಗ ಮತ್ತು ಸುಲಭವಾಗಿ ಮಾಡಬಹುದು. ಮನೆಯಲ್ಲಿ ಏನಾದರೂ ಸಮಾರಂಭವಿದ್ದರೆ ಅಥವಾ ಅತಿಥಿಗಳು ಇದ್ದಕ್ಕಿದ್ದಂತೆ ಬಂದರೆ, ಇದು ಉತ್ತಮ ಆಯ್ಕೆ. ನೀವು ಇದನ್ನು ಚಟ್ನಿಯೊಂದಿಗೆ ಸವಿಯಬಹುದು. ಅತಿಥಿಗಳಿಗೆ ಒಂದು ಕಪ್ ಚಹಾದೊಂದಿಗೆ ನೀಡಬಹುದು.

ರವೆ ಪಕೋಡ ತಯಾರಿಸಲು ಬೇಕಾಗುವ ಪದಾರ್ಥಗಳು
• ರವೆ - ಒಂದು ಕಪ್
• ಈರುಳ್ಳಿ - 1 ಸಣ್ಣಗೆ ಹೆಚ್ಚಿದ
• ಹಸಿ ಮೆಣಸಿನಕಾಯಿ - 2 ಸಣ್ಣಗೆ ಕತ್ತರಿಸಿದ್ದು
• ಶುಂಠಿ - ಒಂದು ಸ್ಪೂನ್ (ತುರಿದದ್ದು)
• ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿದ)
• ಮೊಸರು - ಅರ್ಧ ಕಪ್
• ಅರಿಶಿನ - ಅರ್ಧ ಸ್ಪೂನ್
• ಗರಂ ಮಸಾಲ - ಒಂದು ಸ್ಪೂನ್
• ಕೆಂಪು ಮೆಣಸಿನ ಪುಡಿ - ಅರ್ಧ ಸ್ಪೂನ್
• ಅಡುಗೆ ಎಣ್ಣೆ
ರವೆ ಪಕೋಡ ಮಾಡುವ ಸುಲಭವಾದ ವಿಧಾನ
ರವೆ ಪಕೋಡ ಮಾಡಲು, ಮೊದಲಿಗೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳು ಸಿದ್ಧವಾಗಿಟ್ಟುಕೊಳ್ಳಿ. ಈಗ ಒಂದು ಬಟ್ಟಲಿನಲ್ಲಿ ರವೆ ತೆಗೆದುಕೊಳ್ಳೋಣ. ಒಂದು ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳೋಣ. ಅದಕ್ಕೆ ತುರಿದ ಶುಂಠಿಯನ್ನು ಸೇರಿಸಿಸೋಣ. ಈಗ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಮೊಸರು ಸೇರಿಸೋಣ. ಇದಾದ ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಗರಂ ಮಸಾಲ ಸೇರಿಸೋಣ. ಈಗ ನಾವು ಅದಕ್ಕೆ ಇತರೆ ತರಕಾರಿಗಳನ್ನು ಸೇರಿಸಬಹುದು. ಈಗ ನೀರನ್ನು ಹಾಕಿ ಪಕೋಡಾಗಳಿಗೆ ಬ್ಯಾಟರ್ ತಯಾರಿಸಿಕೊಳ್ಳೋಣ.

ಇದಾದ ಬಳಿಕ, ಈಗ ಗ್ಯಾಸ್ ಮೇಲೆ ಬಾಣಲೆ ಇಟ್ಟು ಬಿಸಿ ಮಾಡೋಣ. ಬಿಸಿಯಾದ ಮೇಲೆ ಎಣ್ಣೆ ಹಾಕೋಣ. ಎಣ್ಣೆ ಬಿಸಿಯಾದಾಗ, ಸ್ವಲ್ಪ ಬ್ಯಾಟರ್ ತೆಗೆದು ಪಕೋಡಾಗಳನ್ನು ಹುರಿಯೋಣ. ಮಧ್ಯಮ ಉರಿಯಲ್ಲಿ ಹುರಿದರೆ ಒಳ್ಳೆಯದು. ಗರಿಗರಿಯಾಗುವವರೆಗೆ ಫ್ರೈ ಮಾಡೋಣ. ಅದು ಬೆಂದ ಬಳಿಕ ಒಂದು ಪಾತ್ರೆಗೆ ಹಾಕಿ. ಇಷ್ಟು ಮಾಡಿದರೆ, ರವೆ ಪಕೋಡ ಸಿದ್ಧವಾಗುತ್ತದೆ. ನೀವು ಅದನ್ನು ಚಟ್ನಿಯೊಂದಿಗೆ ಸವಿಯಬಹುದು. ಇದಕ್ಕೆ ಕ್ಯಾಪ್ಸಿಕ್ಸಂ ಹಾಕಿದರೆ, ಕ್ಯಾಪ್ಸಿಕ್ಸಂ ರವಾ ಪಕೋಡ ಸಿದ್ಧವಾಗುತ್ತದೆ.
ಕ್ಯಾಪ್ಸಿಕ್ಸಂ ರವಾ ಪಕೋಡ ಬೇಕಾದ ಸಾಮಾಗ್ರಿಗಳು
ಎರಡು ಈರುಳ್ಳಿ, ಒಂದು ಕ್ಯಾಪ್ಸಿಕಂ, ಎರಡು ಲೋಟ ರವೆ, ಶುಂಠಿ ಮತ್ತು ಹಸಿ ಮೆಣಸು ಪೇಸ್ಟ್ 1/4 ಚಮಚ, ಒಮದು ಲೋಟ ಮೊಸರು, ಕೊತ್ತಂಬರಿ ಸೊಪ್ಪು, 1/2 ಚಮಚ ಮೆಣಸಿನ ಪುಡಿ, ಒಂದು ಚಿಟಿಕೆ ಸೋಡಾ, 1/4 ಚಮಚ ಅರಿಶಿನ ಪುಡಿ, ಒಂದು ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ ಸಾಕು. ಇವುಗಳನ್ನು ಬಳಸಿ, ಗರಮಾಗರಂ ಕ್ಯಾಪ್ಸಿಕ್ಸಂ ರವಾ ಪಕೋಡ ಮಾಡಬಹುದು.



Click it and Unblock the Notifications