Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಬರ್ತ್ಡೇ ಮತ್ತಿತರ ವಿಶೇಷ ಸಂದರ್ಭದಲ್ಲಿ ಮಾಡಿ ನೋಡಿ ಆರೇಂಜ್ ಬರ್ಫಿ: ಸುಲಭದ ರೆಸಿಪಿ
ಬರ್ಫಿ ನೀವು ಮನೆಯಲ್ಲಿಯೇ ಮಾಡಬಹುದು, ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ನಾವು ಹೊರಗಡೆಯಿಂದ ಸ್ವೀಟ್ಸ್ ತರುವ ಬದಲಿಗೆ ಮನೆಯಲ್ಲಿಯೇ ಮಾಡಿದರೆ ಆ ಸ್ವೀಟ್ಸ್ ಮತ್ತಷ್ಟು ಸ್ಪೆಷಲ್ ಅನಿಸುವುದು ಅಲ್ವಾ? ಈ ಬರ್ಫಿ ಮಾಡುವುದು ಕಷ್ಟ ಎಂದು ನೀವು ಅಂದುಕೊಂಡಿದ್ದರೆ ಸುಲಭದಲ್ಲಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ.
ಇಲ್ಲಿ ನಾವು 15-20 ಬರ್ಫಿ ಮಾಡಬಹುದಾದ ಸಾಮಗ್ರಿ ಅಳತೆ ನೀಡಿದ್ದೇವೆ, ನೀವು ಮೊದಲ ಬಾರಿಗೆ ಟ್ರೈ ಮಾಡುವುದಾದರೆ ಇನ್ನೂ ಕಡಿಮೆ ಸಾಮಗ್ರಿ ತೆಗೆದು ಮಾಡಿ, ಏಕೆಂದರೆ ಇದಕ್ಕೆ ಬಳಸುವ ಸಾಮಮಗ್ರಿ ದುಬಾರಿ, ಇಷ್ಟು ಮಾಡಲು ಕಡಿಮೆಯೆಂದರೂ 500 ರುಪಾಯಿ ಖರ್ಚು ಬೀಳಬಹುದು, ಆದರೆ ಇದರ ರುಚಿ ತುಂಬಾನೇ ಅದ್ಭುತವಾಗಿರುತ್ತದೆ, ಬನ್ನಿ ಈ ಆರೇಂಜ್ ಬರ್ಫಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಕಿತ್ತಳೆ 4
ಮೈದಾ 1 ಕಪ್
ಕೋಯಾ 500 ಗ್ರಾಂ
ಕಿತ್ತಳೆ ಜ್ಯೂಸ್ 1ಕಪ್
ಹಾಲಿನ ಪುಡಿ 1 ಕಪ್
ಡ್ರೈ ಫ್ರೂಟ್ಸ್ 2-3 ಚಮಚ
ತುಪ್ಪ 100 ಗ್ರಾಂ
ಏಲಕ್ಕಿ ಪುಡಿ 1 ಚಮಚ
ಸಕ್ಕರೆ ಒಂದೂವರೆ ಕಪ್
ಮಾಡುವ ವಿಧಾನ
ಕಿತ್ತಳೆಯನ್ನು ಸುಲಿದು ಅದರೊಳಗಡೆಯ ಬೀಜ ತೆಗೆಯಿರಿ ಅಲ್ಲದೆ ಕಿತ್ತಳೆಯಲ್ಲಿರುವ
ತೆಳು ನಾರು ಕೂಡ ತೆಗಿಯಬೇಕು.
ಕಡಾಯಿ ಬಿಸಿ ಮಾಡಿ ತುಪ್ಪ ಹಾಕಿ, ನಂತರ ಮೈದಾ, ಕೋಯಾ, ಸಕ್ಕರೆ, ಹಾಲಿನ ಪುಡಿ
ಹಾಕಿ ಮಿಕ್ಸ್ ಮಾಡಿ (ಕಡಿಮೆ ಉರಿಯಲ್ಲಿ ಮಾಡಿ), ಈ ರೀತಿ ಮಿಕ್ಸ್ ಮಾಡಿದಾಗ
ಅದರಿಂದ ಒಳ್ಳೆಯ ಸುವಾಸನೆ ಬರುತ್ತದೆ
ಈಗ ಕಿತ್ತಳೆ ರಸ, ಕಿತ್ತಳೆ, ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ
ತುಂಬಾ ಗಟ್ಟಿಯಾದರೆ ಹಾಲು ಸೇರಿಸಬಹುದು, ಮಿಶ್ರಣ ಕೇಸರಿಬಾತ್ ರೀತಿ
ಮೃದುವಾಗಿರಬೇಕು, ಆವಾಗ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ
ನಂತರ ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಮಿಶ್ರಣ ಸುರಿದು ತಣ್ಣಗಾಗಲು ಬಿಡಿ.
ನಂತರ ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿ, ಸರ್ವ್ ಮಾಡಿ.
ಇಷ್ಟು ಸಾಮಗ್ರಿಯಿಂದ 15-20 ಬರ್ಫಿ ಮಾಡಬಹುದು
ಹುಟ್ಟುಹಬ್ಬಕ್ಕೆ ಹೊರಗಡೆಯಿಂದ ಸ್ವೀಟ್ಸ್ ತರಬೇಕಾಗಿಲ್ಲ, ಇಂಥ ಬರ್ಫಿ ನೀವೇ ತಯಾರಿಸಿ ಸರ್ವ್ ಮಾಡಬಹುದು.
ಆರೇಂಜ್ ಜ್ಯೂಸ್ ಕೂಡ 2 ಕಿತ್ತಳೆ ಹಾಕಿ ತಯಾರಿಸಿ, ಮಿಶ್ರಣಕ್ಕೆ 2-3 ಕಿತ್ತಳೆ ಅದರ ನಾರು ತೆಗೆದು ಸೇರಿಸಿ, ತಿನ್ನುವಾಗ ಬಾಯಿಗೆ ಸಿಗುವುದು, ರುಚಿ ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications