Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಲೂ ಪಕೋಡ ಬೇಡ್ವಾ? 10 ಪಟ್ಟು ರುಚಿಯಾದ ಈ ಕ್ಯಾಬೇಜ್ ಟ್ವಿಸ್ಟ್ ಟ್ರೈ ಮಾಡಿ!
ಟೀ ಟೈಮ್ ಗೊಂದು ಪಕೋಡ ಇದ್ದರೆ ಹೇಗೆ? ಈರುಳ್ಳಿ ಪಕೋಡ ಬೇಡವೇ ಬೇಡ! ಮನೆಯಲ್ಲೇ ಮಾಡಿ ಕ್ಯಾಬೇಜ್ ಅಥವಾ ಎಲೆಕೋಸಿನ ಪಕೋಡ (Cabbage Pakoda). ಹೌದು, ಸಂಜೆ ಟೀ ಅಥವಾ ಕಾಫಿ ಜೊತೆಗೆ ಬಿಸಿಬಿಸಿಯಾದ ಪಕೋಡ ಸಿಕ್ಕರೆ ಆಹಾ.. ಅದರ ಮಜವೇ ಬೇರೆ. ಅದರಲ್ಲೂ, ಈಗ ಸುರಿಯುತ್ತಿರುವ ಮಳೆಯೊಂದಿಗೆ ಕ್ಯಾಬೇಜ್ ಪಕೋಡ ಮಾಡಿ ನೋಡಿ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ. ಈ ಸುಂದರ ಮಳೆಗಾಲವನ್ನು ಆನಂದಿಸಲು, ಎಲೆಕೋಸಿನ ಪಕೋಡ (Cabbage Pakoda Recipe) ಒಮ್ಮೆ ಟ್ರೈ ಮಾಡಲೇಬೇಕು.
ಸ್ವಲ್ಪ ಮಳೆ ಸುರಿಯುತ್ತಿದ್ದಂತೆ, ಏನಾದರೂ ತಿನ್ನಬೇಕು ಅನಿಸುತ್ತೆ. ಕೆಲವರಿಗೆ ಖಾರವಾದ ಪಕೋಡ ಇಷ್ಟವಾಗುತ್ತದೆ. ಅದರಲ್ಲೂ ಬಿಸಿಬಿಸಿ ಪಕೋಡಾ ಮಳೆಗಾಲದ ಮಜವನ್ನು ಇಮ್ಮಡಿಗೊಳಿಸುತ್ತದೆ. ನೀವು ಕೂಡ ಈ ಮಳೆಗಾಲವನ್ನು ಎಂಜಾಯ್ ಮಾಡಲು ಬಯಸಿದರೆ, ಒಮ್ಮೆ ಮನೆಯಲ್ಲಿಯೇ ಕ್ಯಾಬೇಜ್ ಪಕೋಡ ತಯಾರಿಸಿ ನೋಡಿ. ಇದನ್ನು ಚಟ್ನಿಯೊಂದಿಗೆ ಸೇವಿದರೆ ಇನ್ನೂ ಉತ್ತಮ. ನೀವು ಹೆಚ್ಚು ರಿಸ್ಕ್ ಇಲ್ಲದೆ ಸುಲಭವಾಗಿ ಮಾಡಬಹುದು. ಸಂಜೆ ವೇಳೆಯಲ್ಲಿ ಮಕ್ಕಳಿಗೆ ಅಥವಾ ಅತಿಥಿಗಳಿಗೆ ನೀಡಲು ಇದು ಬೆಸ್ಟ್. ಬನ್ನಿ, ಟೇಸ್ಟಿಯಾದ ಕ್ಯಾಬೇಜ್ ಪಕೋಡಾ ಮಾಡುವ ವಿಧಾನವನ್ನು ತಿಳಿಯೋಣ.

ಕ್ಯಾಬೇಜ್ (ಎಲೆಕೋಸು) ಪಕೋಡ ತಯಾರಿಸಲು ಬೇಕಾದ ಪದಾರ್ಥಗಳು
- ಎಲೆಕೋಸು
- ಈರುಳ್ಳಿ
- ಕಡ್ಲೆ ಹಿಟ್ಟು
- ಅಕ್ಕಿ ಹಿಟ್ಟು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಹಸಿ ಮೆಣಸಿನಕಾಯಿ
- ಅಚ್ಚಕಾರದ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲಾ
- ಜೀರಿಗೆ ಪುಡಿ
- ಅರಿಶಿಣದ ಪುಡಿ
- ಇಂಗು
- ಅಡುಗೆ ಎಣ್ಣೆ
- ಉಪ್ಪು
ಎಲೆಕೋಸು ಪಕೋಡ ಮಾಡುವುದು ಹೇಗೆ?
ಮೊದಲು, ಕಾಲು ಕೆಜಿ ಎಲೆಕೋಸು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ. ಬಳಿಕ ಒಂದು ಈರುಳ್ಳಿ ತೆಗೆದುಕೊಂಡು ಸಣ್ಣಗೆ ಹೆಚ್ಚಿ ಅದಕ್ಕೆ ಸೇರಿಸಿ. ಈಗ 1 ಕಪ್ ಕಡ್ಲೆ ಹಿಟ್ಟು ಮತ್ತು ಎರಡು ಚಮಚ ಅಕ್ಕಿ ಹಿಟ್ಟು ತೆಗೆದುಕೊಂದು ಅದಕ್ಕೆ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನಪುಡಿ ಮತ್ತು ಅರ್ಧ ಟೀ ಸ್ಪೂನ್ ಗರಂ ಮಸಾಲಾ ಹಾಕಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಂದು ಚಮಚ ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವಿನ ಸೊಪ್ಪು, ಚಿಟಿಕೆಯಷ್ಟು ಇಂಗು, 1/2 ಸ್ಪೂನ್ ಜೀರಿಗೆ ಪುಡಿ, 4 ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ನೀರನ್ನು ಹಾಕಿ ಪಕೋಡಾ ಹಿಟ್ಟು ತಯಾರಿಸಿ.
ಈಗ ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬ್ಯಾಟರ್ ಅನ್ನು ಪಕೋಡಾ ಗಾತ್ರದ ತುಂಡುಗಳಾಗಿ ಹುರಿಯಿರಿ. ಎರಡೂ ಬದಿಗಳಲ್ಲಿ ಗರಿಗರಿಯಾಗುವವರೆಗೆ ಡೀಪ್ ಆಗಿ ಫ್ರೈ (ಚೆನ್ನಾಗಿ ಬೇಯಿಸಿ) ಮಾಡಿ. ಅದು ಗೋಲ್ಡ್ ಬಣ್ಣಕ್ಕೆ ತಿರುಗಿದಾಗ ಹೊರಗೆ ತೆಗೆಯಿರಿ. ಈ ರೀತಿ ಮಾಡಿದರೆ ಬಿಸಿಬಿಸಿಯಾದ ಕ್ಯಾಬೇಜ್ (ಎಲೆಕೋಸು) ಪಕೋಡ ಸಿದ್ಧವಾಗುತ್ತದೆ. ನೀವು ಇದನ್ನು ಚಟ್ನಿಯೊಂದಿಗೆ ಸವಿಯಬಹುದು. ಇದಲ್ಲದೆ, ಸಂಜೆ ಟೀ ಅಥವಾ ಕಾಫಿಯೊಂದಿಗೆ ತಿನ್ನಬಹುದು.
ಈ ಪಕೋಡ ಬೇಡ ಅಂದರೆ, ಆ ಪಕೋಡ ಮಾಡಿ
ನೀವು ಈರುಳ್ಳಿ ಪಕೋಡ ಎಲ್ಲಾ ಕಡೆ ತಿಂದಿರುತ್ತೀರಿ. ನಿಮಗೆ ಅದೇ ಬೇಕು ಎನಿಸಿದರೆ, ಎಲೆಕೋಸಿನ ಬದಲಾಗಿ ಈರುಳ್ಳಿಯನ್ನು ಬಳಸಬಹುದು. ಆಗ, ಇದು ಈರುಳ್ಳಿ ಪಕೋಡ ಆಗುತ್ತದೆ. ಆದರೆ, ಆಲೂ ಅಥವಾ ಈರುಳ್ಳಿ ಪಕೋಡಕ್ಕಿಂತಲೂ ಎಲೆಕೋಸಿನ ಪಕೋಡಾದ ರುಚಿಯೇ ಬೇರೆ. ಆ ಹೀಗಾಗಿ, ಮನೆಯಲ್ಲಿಯೇ ಒಮ್ಮೆ ಇದನ್ನು ಟ್ರೈ ಮಾಡಿ, ರುಚಿ ನೋಡಿ.



Click it and Unblock the Notifications