For Quick Alerts
ALLOW NOTIFICATIONS  
For Daily Alerts

ರೆಸಿಪಿ: ಬಾಯಲ್ಲಿ ನೀರೂರಿಸುವ ರುಚಿಯ ಕ್ರ್ಯಾಬ್ ಸುಕ್ಕ

Posted By:
|

ಕ್ರ್ಯಾಬ್‌ ಅಥವಾ ಏಡಿ ರುಚಿಕರವಾದ ಸಮುದ್ರ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಸಾರು ರೀತಿ ಮಾಡಿ ತಿನ್ನುವುದಕ್ಕಿಂತ ಡ್ರೈಯಾಗಿ ಮಾಡಿದರೆ ಸಕತ್ ಟೇಸ್ಟ್.

crab sukka recipe

ನೀವು ಕ್ರ್ಯಾಬ್ ಪ್ರಿಯರಾಗಿದ್ದರೆ ಈ ರೆಸಿಪಿ ಖಂಡಿತ ನಿಮಗೆ ಇಷ್ಟವಾಗುವುದು. ಇಲ್ಲಿ ನಾವು ನೀಡಿರುವುದು ಮಂಗಳೂರು ಶೈಲಿಯ ರೆಸಿಪಿಯಾಗಿದೆ. ಇದನ್ನು ಮಾಡುವ ವಿಧಾನ ಕೂಡ ಸರಳವಾಗಿದ್ದು, ಟೇಸ್ಟ್ ಸೂಪರ್‌ ಆಗಿರುತ್ತೆ. ಬನ್ನಿ ಕ್ರ್ಯಾಬ್ ಸುಕ್ಕ ಮಾಡುವುದು ಹೇಗೆ ಎಂದು ನೋಡೋಣ:

Crab Sukka Recipe, ಕ್ರ್ಯಾಬ್‌ ಸುಕ್ಕ ರೆಸಿಪಿ
Crab Sukka Recipe, ಕ್ರ್ಯಾಬ್‌ ಸುಕ್ಕ ರೆಸಿಪಿ
Prep Time
20 Mins
Cook Time
30M
Total Time
50 Mins

Recipe By: Reena TK

Recipe Type: Dry

Serves: 6

Ingredients
  • ಬೇಕಾಗುವ ಸಾಮಗ್ರಿ

    ಏಡಿ 1 ಕೆಜಿ

    ಒಣಮೆಣಸು 10-15

    ಹುಣಸೆ ಹಣ್ಣು (ನಿಂಬೆಹಣ್ಣು ಗಾತ್ರದಷ್ಟು)

    ಜೀರಿಗೆ 1 ಚಮಚ

    ಮೆಂತೆ1/4 ಚಮಚ

    ಸಾಸಿವೆ 1/2 ಚಮಚ

    ಕೊತ್ತಂಬರಿ ಹುಡಿ 2 ಚಮಚ

    ಅರಿಶಿಣ ಪುಡಿ 1 ಚಮಚ

    ಟೊಮೆಟೊ 2

    ಬೆಳ್ಳುಳ್ಳಿ 13-15 ಎಸಳು

    ಹಸಿ ಮೆಣಸು 2

    ಅರ್ಧ ತೆಂಗಿನಕಾಯಿ ತುರಿ

    ರುಚಿಗೆ ತಕ್ಕ ಉಪ್ಪು

Red Rice Kanda Poha
How to Prepare
  • ಮಾಡುವ ವಿಧಾನ:

    * ಮೊದಲಿಗೆ ಒಣ ಮೆಣಸು ಸ್ವಲ್ಪ ರೋಸ್ಟ್ ಮಾಡಿ, ಅದಕ್ಕೆ ಜೀರಿಗೆ, ನಿಂಬೆಹಣ್ಣು ಗಾತ್ರದಷ್ಟು ಹುಳಿ ಹಾಗೂ ಮೆಂತೆ ಹಾಕಿ ರುಬ್ಬಿ.

    * ಈಗ ದಪ್ಪ ತಳವಿರುವ ಪ್ಯಾನ್‌ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ, ಹಸಿ ಮೆಣಸು ಹಾಕಿ 2-3 ನಿಮಿಷ ಫ್ರೈ ಮಾಡಿ.

    * ಈಗ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾದ ಮೇಲೆ ಸ್ವಚ್ಛ ಮಾಡಿಟ್ಟ ಏಡಿ ಹಾಕಿ, ಮಸಾಲೆ ಹಾಕಿ, ಕೊತ್ತಂಬರಿ, ಅರಿಶಿಣ ಪುಡಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ.

    * ಏಡಿ ಬೆಂದು ನೀರು ಸಂಪೂರ್ಣ ಡ್ರೈಯಾದ ಮೇಲೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ ಮತ್ತೆ 10 ನಿಮಿಷ ಬೇಯಿಸಿದರೆ ಏಡಿ ಸುಕ್ಕ ರೆಡಿ.

Instructions
  • ಒಣ ಮೆಣಸು ಬ್ಯಾಡಗಿ ಮೆಣಸು ಬಳಸಿರುವುದು, ನೀವು ಇತರ ಒಣ ಮೆಣಸು ಹಾಕುವುದಾದರೆ 5-6 ಹಾಕಿದರೆ ಸಾಕು
Nutritional Information
  • ಸರ್ವ್ - 1 ಕೆಜಿ
  • ಕ್ಯಾಲೋರಿ - 1565ಕ್ಯಾ
  • ಕೊಬ್ಬು - 78ಗ್ರಾಂ
  • ಪ್ರೊಟೀನ್ - 65ಗ್ರಾಂ
  • ಕಾರ್ಬ್ಸ್ - 147ಗ್ರಾಂ
[ 5 of 5 - 95 Users]
X
Desktop Bottom Promotion