Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವೀಟ್ ಕಾರ್ನ್ ಫ್ರೈಡ್ ರೈಸ್ ರೆಸಿಪಿ
ನೀವು ಫ್ರೈಡ್ ರೈಸ್ ಇಷ್ಟಪಡುವುದಾದರೆ ಹಲವಾರು ರುಚಿಯಲ್ಲಿ ಸವಿಯಬಹುದು. ವೆಜ್ ಫ್ರೈಡ್ ರೈಸ್, ಎಗ್, ನಾನ್‌ವೆಜ್ ಫ್ರೈಡ್ ರೈಸ್ ಹೀಗೆ ನಾನಾ ರುಚಿಯಲ್ಲಿ ಮಾಡಿ ಸವಿಯಬಹುದು. ಇಲ್ಲಿ ನಾವು ಸ್ವೀಟ್ ಕಾರ್ನ್ ಫ್ರೈಡ್ ರೈಸ್ ರೆಸಿಪಿ ನೀಡಿದ್ದೇವೆ.

ಈ ಸ್ವೀಟ್ ಕಾರ್ನ್ ಫ್ರೈಡ್‌ರೈಸ್ ಬಾಯಿರುಚಿ ಹೆಚ್ಚಿಸುವುದರ ಜೊತೆಗೆ ದಿನಚರಿ ಪೋಷಕಾಂಶ ಹಾಗೂ ನಾರಿನಂಶವಿರುವ ಆಹಾರವಾಗಿದೆ. ಬನ್ನಿ ಸ್ವೀಟ್ ಕಾರ್ನ್ ಫ್ರೈಡ್ ರೈಸ್ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Meal
Serves: 2
-
ಬೇಕಾಗುವ ಸಾಮಗ್ರಿ
ಬಾಸುಮತಿ ಅಕ್ಕಿ-1 ಕಪ್
ಸ್ವೀಟ್ ಕಾರ್ನ್ 1 ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಸೋಯಾ ಸಾಸ್ 1 ಚಮಚ
ವಿನೆಗರ್ 1 ಚಮಚ
ಚಿಲ್ಲಿ ಸಾಸ್ 1 ಚಮಚ
ಸ್ಪ್ರಿಂಗ್‌ಆನಿಯನ್ 2 ಚಮಚ
2 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸಿನಕಾಯಿ 2
-
{recipe}ತಯಾರಿಸುವುದು ಹೇಗೆ?
1.ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಹಾಕಿ. ನಂತರ ಬೇಯಿಸಿ.
2. ಸ್ವೀಟ್ ಕಾರ್ನ್ ಬೇಯಿಸಿ ಇಡಿ.
3. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಈರುಳ್ಳಿ, 2 ಚಮಚ ಸ್ಪ್ರಿಂಗ್ ಆನಿಯನ್ ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ.ಈಗ ಸ್ವೀಟ್ ಕಾರ್ನ್ ಸೇರಿಸಿ ಅಧಿಕ ಉರಿಯಲ್ಲಿ ಫ್ರೈ ಮಾಡಿ.
4. ಈಗ 2 ಚಮಚ ವಿನೆಗರ್, 2 ಚಮಚ ಸೋಯಾ ಸಾಸ್, 1 ಚಮಚ ಚಿಲ್ಲಿ ಸಾಸ್ ಹಾಕಿ 30 ನಿಮಿಷ ಆಡಿಸಿ.
5. ಈಗ ಸ್ವೀಟ್ ಕಾರ್ನ್ ಹಾಕಿ ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ.
6. ಈಗ ಬೇಯಿಸಿದ ಅನ್ನ ಹಾಕಿ ಮಿಶ್ರ ಮಾಡಿದರೆ ಸ್ವೀಟ್ ಕಾರ್ನ್ ಫ್ರೈಡ್ ರೈಸ್ ರೆಡಿ.
ಇದಕ್ಕೆ ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್ ಇವೆಲ್ಲಾ ಸೇರಿಸಿದರೆ ಇನ್ನೂ ರುಚಿಯಾಗಿರುತ್ತದೆ.
- ಸೂಚನೆ: ಇದನ್ನು ಕಡಿಮೆ ಗ್ಯಾಸ್ ಉರಿಯಲ್ಲಿಟ್ಟು ತಯಾರಿಸಿ.
- ಸರ್ವ್ ಸೈಜ್ - 1 ಬೌಲ್ (289ಗ್ರಾಂ)
- ಕ್ಯಾಲೋರಿ - 313 ಕ್ಯಾ
- ಕೊಬ್ಬು - 6.3ಗ್ರಾಂ
- ಪ್ರೊಟೀನ್ - 6.5ಗ್ರಾಂ
- ಕಾರ್ಬ್ಸ್ - 58.2ಗ್ರಾಂ
- ನಾರಿನಂಶ - 1.3ಗ್ರಾಂ



Click it and Unblock the Notifications