Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾರು, ಗ್ರೇವಿಯಿಂದ ಅಧಿಕ ಎಣ್ಣೆಯಂಶ ತೆಗೆಯಲು ಟ್ರಿಕ್ಸ್, ನೀರಿನಲ್ಲಿ ಎಣ್ಣೆ ಮಿಕ್ಸ್ ಆದರೂ ಪ್ರತ್ಯೇಕಿಸಬಹುದು
ಎಣ್ಣೆಯಲ್ಲಿ ಕರಿದ ತಿಂಡಿಯಾಗಲಿ, ಸಾರು, ಗ್ರೇವಿಯಾಗಿರಲಿ ಎಣ್ಣೆಯಂಶ
ತುಂಬಾ ಅಧಿಕವಿದ್ದರೆ ತಿನ್ನಲು ಇಷ್ಟವಾಗಲ್ಲ, ಅದರಲ್ಲಿ ಫಿಟ್ನೆಸ್ ಬಗ್ಗೆ
ಕಾಳಜಿಯಿರುವವರು ಎಣ್ಣೆಯಂಶ ಸ್ವಲ್ಪ ಹೆಚ್ಚಾದರೂ ತಿನ್ನಲ್ಲ, ಆದರೆ ಕೆಲವೊಮ್ಮೆ
ಎಣ್ಣೆಯಂಶ ಜಾಸ್ತಿಯಾಗುತ್ತೆ, ಆವಾಗ ಆ ಅಧಿಕ ಎಣ್ಣೆಯಂಶ ತೆಗೆಯಲು ಈ ಟ್ರಿಕ್ಸ್
ಪಾಲಿಸುವುದು ಒಳ್ಳೆಯದು:

ಸರಿಯಾದ ಉಷ್ಣಾಂಶದಲ್ಲಿ ಫ್ರೈ ಮಾಡಬೇಕು
ಎಣ್ಣೆಯಲ್ಲಿ ತಿಂಡಿ ಕರಿಯುವಾಗ ಅದರ ಉಷ್ಣಾಂಶ ತುಂಬಾ ಮುಖ್ಯ.ಎಣ್ಣೆ ತುಂಬಾ
ಕಾಯಬೇಕು, ಎಣ್ಣೆ ಉಷ್ಣಾಂಶ ಕಡಿಮೆಯಾದರೆ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ,
ಹಾಗಾಗಿ ಎಣ್ಣೆ ಚೆನ್ನಾಗಿ ಕಾದ ಬಳಿಕ ಫ್ರೈ ಮಾಡಬೇಕು, ಆವಾಗ ಎಣ್ಣೆಯಂಶ ತುಂಬಾ
ಕಡಿಮೆ ಹೀರಿಕೊಳ್ಳುತ್ತದೆ. ನೀವು ಎಣ್ಣೆಯಲ್ಲಿ ತಿಂಡಿ ಕರಿಯುವಾಗ ಚೆನ್ನಾಗಿ ಕಾದ
ಮೇಲೆ ನಂತರ ಬೇಕಾದರೆ ಸ್ವಲ್ಪ ಉರಿ ಕಡಿಮೆ ಮಾಡಬಹುದು.
ಟಿಶ್ಯೂ ಟವಲ್‌ನಿಂದ ಎಣ್ಣೆಯಂಶ ತೆಗೆಯಿರಿ
ಕೆಲವೊಮ್ಮೆ ಸಾರು ಮಾಡುವಾಗ ಕೈತಪ್ಪಿ ಎಣ್ಣೆಯಂಶ ಹೆಚ್ಚಾಗುವುದು, ಈ ರೀತಿ ಎಣ್ಣೆಯಂಶ ಹೆಚ್ಚಾದಾಗ ಕೆಲವರಿಗೆ ಏನು ಮಾಡಬೇಕೆಂಬುವುದೇ ಗೊತ್ತಾಗಲ್ಲ, ಶುದ್ಧ ಕಾಟನ್ ಟವಲ್ ಅನ್ನು ಸುರುಳಿಯಾಕಾರದ ಸುತ್ತಿ ಆ ಆಧಿಕ ಎಣ್ಣೆಯಂಶ ತೆಗೆಯಬಹುದಾಗಿದೆ. ಸಾಮಾನ್ಯವಾಗಿ ಈ ನಾನ್‌ವೆಜ್ ಸಾರು ಮಾಡುವಾಗ ಎಣ್ಣೆ ಹಾಕಿರುತ್ತೇವೆ, ಆ ಮಾಂಸದಲ್ಲಿರುವ ಕೊಬ್ಬಿನಂಶದಿಂದ ಎಣ್ಣೆಬಿಡುವುದರಿಂದ ಮತ್ತಷ್ಟು ಎಣ್ಣೆ- ಎಣ್ಣೆ ಅನಿಸುವುದು, ಆವಾಗ ಈ ಟೆಕ್ನಿಕ್ ವರ್ಕ್ ಆಗುತ್ತೆ.
ಗುಣಮಟ್ಟದ ಬಾಣಲೆ ಬಳಸಿ
ಗುಣಮಟ್ಟದ ಬಾಣಲಿ ಅಥವಾ ಪಾತ್ರೆ ಬಳಸಬೇಕು, ಇದು ಎಣ್ಣೆಯಂಶ ಹೆಚ್ಚು
ಹೀರಿಕೊಳ್ಳುವುದನ್ನು ತಡೆಗಟ್ಟಲು ಸಹಕಾರಿ. ನೀವು ದಪ್ಪ ತಳದ ಬಾಣಲೆ ಅಥವಾ ಪಾತ್ರೆ
ಬಳಸಬೇಕು.ಆವಾಗ ತಿಂಡಿ ಬೇಗ ಕಪ್ಪಾಗುವುದಿಲ್ಲ ಅಲ್ಲದೆ ತಿಂಡಿ ತುಂಬಾ ಎಣ್ಣೆ ಕೂಡ
ಹೀರಿಕೊಳ್ಳುವುದಿಲ್ಲ.
ಫ್ರಿಡ್ಜ್‌ನಲ್ಲಿಡಿ
ಸಾರು, ಸೂಪ್, ಗ್ರೇವಿ ಇವುಗಳಲ್ಲಿ ತುಂಬಾನೇ ಎಣ್ಣೆಯಂಶವಿದ್ದರೆ ನೀವು ಆ ಆಹಾರ ರೆಡಿಯಾದ ಮೇಲೆ ಬಿಸಿ ಆರಲು ಬಿಡಿ, ನಂತರ ಫ್ರೀಝರ್‌ನಲ್ಲಿಡಿ, ಆವಾಗ ಎಣ್ಣೆಯಂಶ ಮೇಲ್ಭಾಗದಲ್ಲಿ ಗಟ್ಟಿಯಾಗುವುದು, ಅದನ್ನು ತೆಗೆದು ನಂತರ ಬಿಸಿ ಮಾಡಿದರೆ ಆ ಗ್ರೇವಿ ಸರಿಯಾಗಿರುತ್ತದೆ.
ಐಸ್ ಕ್ಯೂಬ್ ಟ್ರಿಕ್ ಟ್ರೈ ಮಾಡಿ
ಐಸ್ ಕ್ಯೂಬ್ ತೆಗೆದು ಅದನ್ನು ಗ್ರೇವಿ ಅಥವಾ ಸಾರಿಗೆ ಡಿಪ್ ಮಾಡಿದರೆ ಆ
ಐಸ್ ಎಣ್ಣೆಯಂಶ ಹೀರಿಕೊಳ್ಳುತ್ತದೆ, ಈ ರೀತಿ ಕೂಡ ತೆಗೆಯಬಹುದು.
ಎಣ್ಣೆ ತಿಂಡಿಯನ್ನು ಟಿಶ್ಯೂ ಹರಡಿ ಅದರ ಮೇಲೆ ಹಾಕಿದರೆ ಎಣ್ಣೆಯಂಶ
ಹೀರಿಕೊಳ್ಳುತ್ತದೆ.
ಸ್ಪೂನ್‌ನ ಒತ್ತಿ ಹಿಡಿದು ತೆಗೆಯಬಹುದು
ಈ ರೆಸ್ಟೋರೆಂಟ್‌ಗಳಿಂದ ಸಾರು ಅಥವಾ ಗ್ರೇವಿ ತರಿಸಿದಾಗ ಎಣ್ಣೆಯಂದ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ. ನಿಮಗೆ ಆ ರೀತಿ ಎಣ್ಣೆ ತೇಲುತ್ತಿರುವುದು ಇಷ್ಟವಿಲ್ಲ ಅಥವಾ ಆರೋಗ್ಯದ ಕಾಳಜಿಯಿಂದ ಆ ಎಣ್ಣೆಯಂಶ ಬಳಸುವುದು ಇಷ್ಟವಿಲ್ಲಾ ಎಂದಾದರೆ ನೀವು ಐಸ್‌ಕ್ಯೂಬ್ಸ್ ಟೆಕ್ನಿಕ್ ಬಳಸಬಹುದು ಅಥವಾ ಸ್ಪೂನ್ ಆ ಗ್ರೇವಿ ಅಥವಾ ಸಾರಿನ ಮೇಲ್ಭಾಗದಲ್ಲಿ ಇಟ್ಟು ಒತ್ತಿದರೆ ಸಾಕು ಎಣ್ಣೆಯಂಶ ಮೇಲಕ್ಕೆ ಬರುತ್ತದೆ, ಈ ರೀತಿ ಕೂಡ ಅಧಿಕ ಜಿಡ್ಡಿನಂಶ ತೆಗೆಯಬಹುದು.
ನೀರಿನ ಜೊತೆ ಎಣ್ಣೆ ಮಿಕ್ಸ್ ಮಾಡಿ
ಕೆಲವೊಮ್ಮೆ ಮಕ್ಕಳು ಈ ರೀತಿ ಮಾಡುವುದುಂಟು ಎಣ್ಣೆ ಇಟ್ಟ ಬೌಲ್‌ಗೆ ತಂದು ನೀರು ಸುರಿದು ಬಿಡುತ್ತಾರೆ. ಆವಾಗ ನೀವು ಅದನ್ನು ಪ್ಲಾಸ್ಟಿಕ್ ಕವರ್‌ಗೆ ತುಂಬಿ, ನಂತರ ಹಿಡಿದರೆ ಎಣ್ಣೆ ತಳಭಾಗದಲ್ಲಿ ಇರುತ್ತದೆ. ಕೆಳಭಾಗದಲ್ಲಿ ರಂಧ್ರ ಮಾಡಿ ನಂತರ ಒಂದು ಬೌಲ್‌ಗೆ ಹಿಡಿದರೆ ಸಾಕು ಎಣ್ಣೆ ತುಂಬಬಹುದು, ನೀರು ಚೆಲ್ಲಬಹುದು. ಈ ರೀತಿ ಎಣ್ಣೆ ಮತ್ತು ನೀರನ್ನು ಪ್ರತ್ಯೇಕಿಸಬಹುದು.



Click it and Unblock the Notifications