For Quick Alerts
ALLOW NOTIFICATIONS  
For Daily Alerts

ಚಪಾತಿ- ದೋಸೆಗೆ ಸಕತ್ ಕಾಂಬಿನೇಷನ್: ಬದನೆಕಾಯಿ ಚಟ್ನಿ!

|

ಇತ್ತೀಚೆಗೆ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸ್ವಾದಿಷ್ಟ ಊಟವನ್ನು ಸವಿಯುವುದನ್ನು ಬಿಟ್ಟು ಆರೋಗ್ಯಕರ ಪದಾರ್ಥಗಳನ್ನು ಸೇವಿಸುವುದೂ ಕೂಡ ದುಸ್ತರವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವೊಂದು ಸಂಸ್ಥೆಗಳು, ಜನರಿಗೆ ಮರುಳು ಮಾಡುವಂತಹ ಸಿದ್ಧ ಆಹಾರಗಳನ್ನು ಜಾಹೀರಾತಿನಲ್ಲಿ ಪದೇ ಪದೇ ತೋರಿಸಿ, ಅವರನ್ನು ಆದಷ್ಟು ಬೇಗ ತಮ್ಮ ತೆಕ್ಕೆಗೆ ಬೀಳುಸುತ್ತಿದ್ದಾರೆ. ಅದು ಏನೇ ಇರಲಿ, ಆದರೆ ಇಂತಹ ಆಹಾರಗಳು ಮನೆಯಲ್ಲಿ ಅಮ್ಮ ತಯಾರಿಸಿದ ಅಡುಗೆಯ ಕೈರುಚಿಯನ್ನು ನೀಡಲು ಸಾಧ್ಯವೇ?

ಹೌದು ನಿಮ್ಮ ನಾಲಗೆಗೆ ಕ್ಷಣ ಮಾತ್ರದಲ್ಲಿ ರುಚಿಯನ್ನು ಒದಗಿಸುವ ಈ ರೆಡಿಮೇಡ್ (ಸಿದ್ಧ ಆಹಾರಗಳು) ಆಹಾರಗಳನ್ನು ಸ್ವಾದಭರಿತ ಸಾಮಾಗ್ರಿಗಳೊಂದಿಗೆ ಬೆರೆಸಿ ತಯಾರಿಸುತ್ತಾರೆ, ಮತ್ತು ಅವುಗಳು ಕೆಡದಂತಿರಿಸಲು ಕೆಲವೊಂದು ಉಪವಸ್ತುಗಳನ್ನು ಇದಕ್ಕೆ ಬಳಸುತ್ತಾರೆ. ಅಂತೂ ಒಂದರ್ಥದಲ್ಲಿ ಹೇಳುವುದಾದರೆ ನೀವು ಸೇರಿಸುತ್ತಿರುವುದು ವಿಷದ ರೂಪದಲ್ಲಿರುವ ಆಹಾರವನ್ನು ಎಂಬುದನ್ನು ನೀವು ಮನಗಾಣಲೇಬೇಕು.

ಇನ್ನು ಹೊರಗಿನ ಆಹಾರವನ್ನು ಆಗಾಗ್ಗೆ ಸೇವಿಸುವುದು ಸ್ವಲ್ಪ ಬದಲಾವಣೆಯನ್ನುಂಟು ಮಾಡುತ್ತವೆ. ಆದರೆ ನಿತ್ಯವೂ ಇವುಗಳ ಸೇವನೆಯಿಂದ ಕೊಬ್ಬು, ಆಸಿಡಿಟಿ, ಹೊಟ್ಟೆಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಖಂಡಿತ. ಇದಕ್ಕೆ ತಕ್ಕ ಪರಿಹಾರ ಎಂದರೆ ಮನೆಯಲ್ಲೇ ನಿಮಗೆ ಬೇಕಾದ ಸ್ವಾದಿಷ್ಟ ಖಾದ್ಯವನ್ನು ತಯಾರಿಸುವುದಾಗಿದೆ. ಮನೆಯಲ್ಲಿ ತಯಾರಿಸುವ ರೆಸಿಪಿ ಹೇಗಿರಬೇಕೆಂದರೆ ಸಮಯವನ್ನು ಉಳಿಸಿ ಎಲ್ಲರಿಂದಲೂ ನಿಮಗೆ ಮೆಚ್ಚುಗೆಯನ್ನು ನೀಡುವಂತೆ ಮಾಡುಬೇಕು.

ಅದಕ್ಕೆಂದೇ ಇಂದಿನ ಲೇಖನದಲ್ಲಿ ಬಾಯಲ್ಲಿ ನೀರೂರಿಸುವ ಬದನೆಕಾಯಿ ಚಟ್ನಿಯೊಂದಿಗೆ ನಾವು ಬಂದಿದ್ದು ಈ ಚಟ್ನಿ ರೊಟ್ಟಿ, ಚಪಾತಿ ದೋಸೆಗೆ ಸೂಪರ್ ಕಾಂಬಿನೇಷನ್ ಎಂದೆನಿಸಿದೆ. ನಿಮ್ಮ ಸಮಯವನ್ನು ವ್ಯಯಿಸದೇ ಕೆಲವೇ ನಿಮಿಷಗಳಲ್ಲಿ ಈ ಚಟ್ನಿಯನ್ನು ನಿಮಗೆ ತಯಾರಿಸಬಹುದಾಗಿದೆ. ಹಾಗಿದ್ದರೆ ಈ ಚಟ್ನಿಯನ್ನು ಹೇಗೆ ಸಿದ್ಧಪಡಿಸುವುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೇ ಬನ್ನಿ ಬದನೆಕಾಯಿ ಚಟ್ನಿ ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ.

Brinjal chutney recipe expecially for dosa and chapathi

*ಸಿದ್ಧತಾ ಸಮಯ: 10 ನಿಮಿಷ
*ಅಡುಗೆಗೆ ಬೇಕಾದ ಸಮಯ: 15 ನಿಮಿಷ

ಬೇಕಾದ ಸಾಮಾಗ್ರಿಗಳು
*ಸಣ್ಣ ಬದನೆಕಾಯಿ - 4 (ಕತ್ತರಿಸಲಾಗಿರುವ)
*ನೆಲಗಡಲೆ ಹುರಿದದ್ದು - ಎರಡು ಚಮಚ
*ಹಸಿಮೆಣಸು - 2 (ಸಣ್ಣಗೆ ಕತ್ತರಿಸಲಾಗಿರುವ)
*ಕೊತ್ತಂಬರಿ ಸೊಪ್ಪು - (ಸಣ್ಣದಾಗಿ ಕತ್ತರಿಸಲಾಗಿರುವ 1/2 ಕಪ್)
*ತೆಂಗಿನಕಾಯಿ ತುರಿ - 1 ಕಪ್
*ಬೆಳ್ಳುಳ್ಳಿ - 2 ಎಸಳು
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 1 ಚಮಚ
*ಸಾಸಿವೆ - 1/2 ಚಮಚ
*ಕರಿಬೇವಿನೆಸಳು - 2 - 3

ಮಾಡುವ ವಿಧಾನ
*ಮೊದಲಿಗೆ ಒಂದು ಕಪ್‌ನಷ್ಟು ನೀರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿಕೊಳ್ಳಿ. ಬದನೆ ಮತ್ತು ಬೆಳ್ಳುಳ್ಳಿಯನ್ನು ಇದಕ್ಕೆ ಸೇರಿಸಿ. ಚೆನ್ನಾಗಿ ಬೇಯಿಸಿಕೊಳ್ಳಿ. ನೀರಿನಿಂದ ಹೊರತೆಗೆದು ತಣ್ಣಗಾಗಲು ಬಿಡಿ.
*ಇನ್ನು ಬೇಯಿಸಿದ ಬದನೆ, ಬೆಳ್ಳುಳ್ಳಿಯೊಂದಿಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ನೆಲಗಡಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿಕೊಳ್ಳಿ.
*ಇನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿಬೇವಿನೆಸಳನ್ನು ಇದಕ್ಕೆ ಸೇರಿಸಿ. ಚಟ್ನಿಗೆ ಒಗ್ಗರಣೆಯನ್ನು ಮಾಡಿಕೊಳ್ಳಿ.

English summary

Brinjal chutney recipe especially for dosa and chapathi

Brinjal Chutney (Eggplant Chutney), a spicy and tempting condiment made from brinjal, onion, garlic and tamarind with many other spices, is indispensable south Indian relish. The south Indian chutney prepared with this recipe is household item in Andhra and can simply be served with rice, roti, chapatti, idli, dosa, vada, etc. for scrumptious meal.
X
Desktop Bottom Promotion