Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಳ್ಳು ಉಂಡೆ ರೆಸಿಪಿ
ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು ಎಳ್ಳುಂಡೆ. ಬಹುತೇಕವಾಗಿ ಇದನ್ನು ಗಣೇಶ ಚತುರ್ಥಿ, ದೀಪಾವಳಿ, ಜನ್ಮಾಷ್ಟಮಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ನೈವೇದ್ಯಕ್ಕಾಗಿ ಮಾಡುತ್ತಾರೆ. ಇದಕ್ಕೆ ಚಿಗಳಿ ಎಂತಲೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಇದನ್ನು ಎಲುರುಂಡೈ ಎಂದು ಕರೆಯುತ್ತಾರೆ. ಈ ಸಿಹಿ ಉಂಡೆಯಲ್ಲಿ ಕ್ಯಾಲ್ಸಿಯಂ ಮತ್ತು ಐರನ್ ಬಹಳ ಸಮೃದ್ಧವಾಗಿರುತ್ತವೆ.
ಇದು ಸಿಹಿಯಾದ ತಿನಿಸಾದ್ದರಿಂದ ಮಕ್ಕಳು ಇದನ್ನು ಸವಿಯಲು ಇಷ್ಟಪಡುತ್ತಾರೆ. ಇದು ದೇಹದಲ್ಲಿ ಹೆಚ್ಚು ಉಷ್ಣತೆಯನ್ನು ಸೃಷ್ಟಿಸುವುದರಿಂದ ಅತಿಯಾಗಿ ತಿನ್ನಬಾರದು. ಇದನ್ನು ಮಾಡಲು ಹೆಚ್ಚು ಸಮಯ ಹಿಡಿಯುವುದಿಲ್ಲವಾದ್ದರಿಂದ ಹಬ್ಬಗಳ ಗಡಿಬಿಡಿಯಲ್ಲಿ ಬಹುಬೇಗ ತಯಾರಿಸಬಹುದು. ಶ್ರಾವಣ ಮಾಸದ ಹಬ್ಬದ ಆಚರಣೆಗೆ ಈ ಸಿಹಿಯನ್ನು ತಯಾರಿಸುವ ಉತ್ಸಾಹದಲ್ಲಿದ್ದರೆ ಇಲ್ಲಿದೆ ನೋಡಿ ವೀಡಿಯೋ ಹಾಗೂ ಚಿತ್ರ ಬರಹದ ಹಂತ ಹಂತವಾದ ವಿವರಣೆ.

Recipe By: ಕಾವ್ಯಶ್ರೀ ಎಸ್.
Recipe Type: ಸಿಹಿ ತಿಂಡಿ
Serves: 8-10 ಉಂಡೆ
-
ಬಿಳಿ ಎಳ್ಳು - 1 ಕಪ್
ಬೆಲ್ಲ - 1 ಕಪ್
ಶೇಂಗಾ/ ಕಡಲೇ ಕಾಯಿ - 1/4 ಕಪ್
-
1. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಳ್ಳನ್ನು ಹಾಕಿ ಹುರಿಯಿರಿ.
2. ಎಣ್ಣೆಯನ್ನು ಸೇರಿಸದೇ, ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು.
3. ನಂತರ ಉರಿಯನ್ನು ಆರಿಸಿ, ಹುರಿದ ಎಳ್ಳನ್ನು ಆರಲು ಇಡಿ.
4. ನಂತರ ಅದೇ ಪಾತ್ರೆಯಲ್ಲಿ ಶೇಂಗಾ/ಕಡಲೇ ಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಪರಿಮಳ ಬಂದಮೇಲೆ ನಿಲ್ಲಿಸಿ.
5. ಉರಿಯನ್ನು ಆರಿಸಿ, ಹುರಿದ ಕಡಲೇ ಕಾಯಿಯನ್ನು ಆರಲು ಇಡಿ.
6. ಹುರಿದುಕೊಂಡ ಎಳ್ಳು ಮತ್ತು ಶೇಂಗಾ ಎರಡನ್ನು ಒಮ್ಮೆಲೇ ಮಿಕ್ಸಿಗೆ ಹಾಕಿ.
7. ಒಟ್ಟಿಗೆ ರುಬ್ಬಿಕೊಳ್ಳಿ.
8. ಇದಕ್ಕೆ ಬೆಲ್ಲವನ್ನು ಸೇರಿಸಿ ಪುನಃ ರುಬ್ಬಿ.
9. ರುಬ್ಬಿಕೊಂಡ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ.
10. ಮಿಶ್ರಣದಿಂದ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಯನ್ನು ಕಟ್ಟಿ.
- 1. ಎಳ್ಳು ಮತ್ತು ಬೆಲ್ಲ ಸಮಪ್ರಮಾಣದಲ್ಲಿರಬೇಕು. ಹಾಗೊಮ್ಮೆ ನಿಮಗೆ ಅತಿ ಹೆಚ್ಚು ಸಿಹಿ ಬೇಕೆಂದರೆ ಹೆಚ್ಚು ಬೆಲ್ಲವನ್ನು ಸೇರಿಸಿಕೊಳ್ಳಬಹುದು.
- 2. ಶೇಂಗಾ/ಕಡಲೇ ಕಾಯಿ ಒಂದು ಆಯ್ಕೆ. ಇದನ್ನು ಸೇರಿಸದೆಯೂ ಮಾಡಬಹುದು. ಸೇರಿಸಿದರೆ ರುಚಿ ಹೆಚ್ಚುವುದು.
- ಸರ್ವಿಂಗ್ ಸೈಜ್ - 1 ಬೌಲ್
- ಕ್ಯಾಲೋರೀಸ್ - 144 ಕ್ಯಾಲ್
- ಫ್ಯಾಟ್ - 5.6 ಗ್ರಾಂ
- ಪ್ರೋಟೀನ್ - 5.1 ಗ್ರಾಂ
- ಕಾರ್ಬೋಹೈಡ್ರೇಟ್ - 18.2 ಗ್ರಾಂ
- ಸಕ್ಕರೆ - 7.3 ಗ್ರಾಂ
- ಫೈಬರ್ - 2.1 ಗ್ರಾಂ
ಎಳ್ಳು ಉಂಡೆ ರೆಸಿಪಿ ಮನೆಯಲ್ಲಿ ಮಾಡುವುದು ಹೇಗೆ
1. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಳ್ಳನ್ನು ಹಾಕಿ ಹುರಿಯಿರಿ.

2. ಎಣ್ಣೆಯನ್ನು ಸೇರಿಸದೇ, ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು.

3. ನಂತರ ಉರಿಯನ್ನು ಆರಿಸಿ, ಹುರಿದ ಎಳ್ಳನ್ನು ಆರಲು ಇಡಿ.

4. ನಂತರ ಅದೇ ಪಾತ್ರೆಯಲ್ಲಿ ಶೇಂಗಾ/ಕಡಲೇ ಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಪರಿಮಳ ಬಂದಮೇಲೆ ನಿಲ್ಲಿಸಿ.

5. ಉರಿಯನ್ನು ಆರಿಸಿ, ಹುರಿದ ಕಡಲೇ ಕಾಯಿಯನ್ನು ಆರಲು ಇಡಿ.

6. ಹುರಿದುಕೊಂಡ ಎಳ್ಳು ಮತ್ತು ಶೇಂಗಾ ಎರಡನ್ನು ಒಮ್ಮೆಲೇ ಮಿಕ್ಸಿಗೆ ಹಾಕಿ.

7. ಒಟ್ಟಿಗೆ ರುಬ್ಬಿಕೊಳ್ಳಿ.

8. ಇದಕ್ಕೆ ಬೆಲ್ಲವನ್ನು ಸೇರಿಸಿ ಪುನಃ ರುಬ್ಬಿ.

9. ರುಬ್ಬಿಕೊಂಡ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ.

10. ಮಿಶ್ರಣದಿಂದ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಯನ್ನು ಕಟ್ಟಿ.

Click it and Unblock the Notifications