Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿಕನ್ ಕರಿಗೆ ನೀವು ಹೀಗೆ ಮಸಾಲೆ ಮಾಡಿ, ಅಂಗಡಿ ಮಸಾಲೆ ಬೇಕಾಗಿಲ್ಲ
ನೀವು ಅಂಗಡಿ ಚಿಕನ್ ಮಸಾಲೆ ಬಳಸಿ ಮಾಡಿದರೆ ಯಾವಾಗಲೂ ನೀವು ಮಾಡುವ ಚಿಕನ್ ಸಾರಿನ ರುಚಿ ಒಂದೇ ರೀತಿ ಇರುತ್ತದೆ, ಆದ್ದರಿಂದ ಚಿಕನ್ ಮಸಾಲೆ ಮನೆಯಲ್ಲಿಯೇ ರೆಡಿ ಮಾಡಿ ನಂತರ ಚಿಕನ್ ಸಾರು ಮಾಡಿ ನೋಡಿ ಆ ಚಿಕನ್ ಸಾರು ನಿಮಗೆ ನೀವು ಮಾಮೂಲಿ ಮಾಡುವ ಚಿಕನ್ ಸಾರಿಗಿಂತ ತುಂಬಾನೇ ಇಷ್ಟವಾಗುವುದು. ಚಿಕನ್ ಮಸಾಲೆ ರೆಡಿ ಮಾಡಿ ಚಿಕನ್ ಸಾರು ಮಾಡುವ ರೆಸಿಪಿ ಇಲ್ಲಿ ನೀಡಲಾಗಿದೆ ನೋಡಿ.

ಮೊದಲಿಗೆ ಚಿಕನ್ ಮಸಾಲೆ ಮಾಡುವುದು ಹೇಗೆ ನೋಡೋಣ
7-8 ಒಣ ಮೆಣಸು (ಖಾರ ಕಡಿಮೆ ಬೇಕೆಂದರೆ 4-5)
ಕೊತ್ತಂಬರಿ ಬೀಜ
ಒಂದು ಇಂಚಿನಷ್ಟು ದೊಡ್ಡ ಚಕ್ಕೆ
ಲವಗ 3-4
1 ಏಲಕ್ಕಿ
1/2 ಚಮಚ ಚೀರಿಗೆ
1/4 ಚಮಚ ಮೆಂತೆ ಬೀಜ
ನೀವು ಒಣ ಮೆಣಸು ತವಾದಲ್ಲಿ ಹುರಿದುಕೊಳ್ಳಿ, ನಂತರ ಬಿಸಿ ಆರಲು ತಟ್ಟೆಗೆ
ಹಾಕಿಡಿ
ಕೊತ್ತಂಬರಿ ಬೀಜ ಕೂಡ ಸಾಧಾರಣ ಹುರಿಯಲ್ಲಿ ತವಾದಲ್ಲಿ ಹಾಕಿ ರೋಸ್ಟ್ ಮಾಡಿ
ತಟ್ಟೆಗೆ ಹಾಕಿ
ಈಗ ಲವಂಗ, ಚಕ್ಕೆ, ಮೆಂತೆ, ಜೀರಿಗೆ, ಏಲಕ್ಕಿ ಎಲ್ಲಾ ಒಂದು ನಿಮಿಷ ಹುರಿಯಿರಿ
ಈಗ ಎಲ್ಲಾ ವಸ್ತುಗಳು ಸ್ವಲ್ಪ ತಣ್ಣಗೆ ಆದ ಮೇಲೆ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ,
ಅದಕ್ಕೆ 1/4 ಚಮಚ ಅರಿಶಿಣ ಹುಡಿ ಸೇರಿಸಿ ರುಬ್ಬಿ ಪುಡಿ ಮಾಡಿ (ಈ ಪುಡಿ ತರಿತರಿ
ಮಾಡಬಹುದು, ಇಲ್ಲಾ ನುಣ್ಣನೆ ಮಾಡಬಹುದು, ತರಿತರಿ ಮಾಡಿ ಮಾಡಿದಾಗ ಒಂದು ರುಚಿ
ಸಿಗುವುದು, ನುಣ್ಣನೆ ಮಾಡಿ ಮಾಡಿ ಸಾರು ಮಾಡಿದಾಗ ಒಂದು ರುಚಿ ಸಿಗುವುದು, ಹಾಗಾಗಿ
ಇದನ್ನು ಟ್ರೈ ಮಾಡಿ ನೋಡಿ ನೋಡಿ)
ಚಿಕನ್ ಸಾರಿಗೆ ಬೇಕಾಗುವ ಸಾಮಗ್ರಿ
ರೆಡಿ ಮಾಡಿಟ್ಟ ಚಿಕನ್ ಪುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಈರುಳ್ಳಿ 1
ಟೊಮೆಟೊ 2
ಸ್ವಲ್ಪ ಕರಿಬೇವು
ತೊಳೆದಿಟ್ಟ 1ಕೆಜಿ ಚಿಕನ್
ಉಪ್ಪು
1 ಚಮಚ ಎಣ್ಣೆ
ಸಾಸಿವೆ
ನೀವು ಸಾರಿನ ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಈರುಳ್ಳಿ, ಕರಿಬೇವು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ, ಈರುಳ್ಳಿ ಮೆತ್ತಗಾದ ಮೇಲೆ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ ಬಳಿಕ ಚಿಕನ್ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಬೇಯಲು ಬಿಡಿ. ನಂತರ ರೆಡಿ ಮಾಡಿಟ್ಟ ಮಸಾಲೆ ಹಾಕಿ ಮಿಕ್ಸ್ ಮಾಡಿ, ನಿಮಗೆ ಸಾರಿನ ಗ್ರೇವಿ ಯಾವ ಹದಕ್ಕೆ ಬೇಕು ಅದರಂತೆ ನೀರು ಸೇರಿಸಿ. ಗಟ್ಟಿ ಗ್ರೇವಿ ಬೇಕೆಂದರೆ ನೀರು ಸೇರಿಸುವ ಅಗ್ಯತವಿಲ್ಲ, ಹಾಗೇ ಬೇಯುತ್ತದೆ, ಇಲ್ಲಾಂದ್ರೆ ಒಂದು ಕಪ್ ನೀರು ಸೇರಿಸಿ ಬೇಯಿಸಿ. ಚಿಕನ್ ಬೆಂದ ಮೇಲೆ ಬೇಕಿದ್ದರೆ ಸ್ವಲ್ಪ ಕೊತ್ತಂಬರಿ ಸೊಪ್ಪಯ, ಸ್ವಲ್ಪ ನಿಂಬೆರಸ ಸೇರಿಸಬಹುದು.
ಈ ಸಿಂಪಲ್ ರೆಸಿಪಿ ಟ್ರೈ ಮಾಡಿ ನೋಡಿ ಖಂಡಿತ ಇಷ್ಟವಾಗುತ್ತೆ.



Click it and Unblock the Notifications