Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಮನೆಯಲ್ಲಿಯೇ ಮಾಡಿ ಆನಿಯನ್ ಬೆಲ್ ಪೆಪ್ಪರ್ ಪಿಜ್ಜಾ
ಪಿಜ್ಜಾ ಎಂದರೆ ಸಾಕು ಕೆಲವರಿಗಂತೂ ಪಂಚಪ್ರಾಣ, ನೀವೂ ಕೂಡ ಪಿಜ್ಜಾ ಪ್ರಿಯರಾಗಿದ್ದರೆ ಮನೆಯಲ್ಲಿಯೇ ಏಕೆ ಮಾಡಲು ಒಮ್ಮೆ ಟ್ರೈ ಮಾಡಬಾರದು.

ಪಿಜ್ಜಾ ಮಾಡುವುದು ಕಷ್ಟದ ಕೆಲಸ ಎಂದು ನೀವು ಅಂದುಕೊಂಡಿದ್ದರೆ, ನೀವು ಅಂದುಕೊಂಡಷ್ಟು ಕಷ್ಟವೇನಿಲ್ಲ, ಇದನ್ನು ನೀವು ಖಂಡಿತ ಟ್ರೈ ಮಾಡಬಹುದು. ನಾವಿಲ್ಲಿ ಚೀಸ್ ಆನಿಯನ್ ಬೆಲ್ ಪೆಪ್ಪರ್ ಪಿಜ್ಜಾ ಮಾಡುವುದು ಹೇಗೆ ಎಂದು ತುಂಬಾ ಸರಳವಾಗಿ ಹೇಳಿದ್ದೇವೆ ನೋಡಿ:
Recipe By: Reena TK
Recipe Type: Pizza
Serves: 4
-
ಬೇಕಾಗುವ ಸಾಮಗ್ರಿ
ಹಿಟ್ಟು ತಯಾರಿಸಲು
ಮೈದಾ 3 ಕಪ್
ನೀರು 1 ಕಪ್
ಡ್ರೈ ಆ್ಯಕ್ಟಿವ್ ಯೀಸ್ಟ್ 2 ಚಮಚ
ಸಕ್ಕರೆ 1/4 ಚಮಚ
ಪುಡಿ ಉಪ್ಪು 1/4 ಚಮಚ
ಆಲೀವ್ ಎಣ್ಣೆ 2 ಚಮಚ + 2 ಚಮಚ
ಪಿಜ್ಜಾ ಸಾಸ್ ಮಾಡಲು
ಟೊಮೆಟೊ ಪೇಸ್ಟ್ 2 ಕಪ್
ಆಲೀವ್ ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ಟೊಮೆಟೊ ಕೆಚಪ್ ಅರ್ಧ ಕಪ್
ಖಾರದ ಪುಡಿ 2 ಚಮಚ
ಬೆಳ್ಳುಳ್ಳಿ ಎಸಳು 5-6
ಮಿಕ್ಸ್ಡ್ ಹರ್ಬ್ಸ್ 2 ಚಮಚ
ಈರುಳ್ಳಿ 1 (ಕತ್ತರಿಸಿದ್ದು)
ಟಾಪಿಂಗ್ ಮಾಡಲು
ಕೆಂಪು ದುಂಡು ಮೆಣಸು ಅರ್ಧ
ಹಸಿರು ಬಣ್ಣದ ದುಂಡು ಮೆಣಸು ಅರ್ಧ
ಹಳದಿ ಬಣ್ಣದ ದುಂಡು ಮೆಣಸು
ಈ ಮೂರನ್ನುತುಂಬಾ ತೆಳುವಾಗಿ ಕತ್ತರಿಸಿ
ಈರುಳ್ಳಿ 1 (ತೆಳುವಾಗಿ ಹೆಚ್ಚಿದ್ದು)
ಚೀಸ್ 1 ಕಪ್
ಒರೆಗ್ನೋ 1 ಚಮಚ
ರೆಡ್ ಚಿಲ್ಲಿ ಫ್ಲೇಕ್ಸ್
ಪಿಜ್ಜಾ ಸಾಸ್ 1 ಕಪ್
ಇವೆಲ್ಲಾ ಸೂಪರ್ ಮಾರ್ಕೆಟ್‌ನಲ್ಲಿ ಸಿಗುವುದು.
-
ಮಾಡುವ ವಿಧಾನ
* ಮೊದಲಿಗೆ ಪಿಜ್ಜಾ ಬೇಸ್ ತಯಾರಿಸಿ. ಹಿಟ್ಟು ಸಾಫ್ಟ್ ಆಗಿರಬೇಕು, ಹಾಗಂತ ಅಂಟು-ಅಂಟಾಗಿ ಇರಬಾರದು. ಬೇಸ್ ಅನ್ನು ದೊಡ್ಡ ಪಾತ್ರೆಯಲ್ಲಿ ಕಲೆಸಿ ಇಡಿ.
* ಈಗ ಪಿಜ್ಜಾ ಸಾಸ್ ತಯಾರಿಸಬೇಕು. ಪಿಜ್ಜಾ ಸಾಸ್ ತಯಾರಿಸಲು ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಸೌಟ್‌ನಿಂದ ಆಡಿಸಿ. ಇವು ಮೆತ್ತಗಾದ ಮೇಲೆ ಟೊಮೆಟೊ ಪೇಸ್ಟ್ ಹಾಕಿ, ರುಚಿಗೆ ತಕ್ಕ ಉಪ್ಪು, ಖಾರದ ಪುಡಿ, ಮಿಕ್ಸ್ಡ್ ಹರ್ಬ್ಸ್ ಹಾಕಿ ಮಿಶ್ರ ಮಾಡಿ, ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಟೊಮೆಟೊ ಕೆಚಪ್ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ.
* ಈಗ ರೆಡಿ ಮಾಡಿಟ್ಟ ಹಿಟ್ಟಿನಿಂದ ಪಿಜ್ಜಾ ಬೇಸ್ ತಯಾರಿಸಿ. ನಂತರ ಅದರ ಮೇಲೆ ಫೋರ್ಕ್‌ನಿಂದ ಚುಚ್ಚಿ, ಆಗ ತೂತ-ತೂತಾಗುವುದು.
* ಈಗ ಅದರ ಮೇಲೆ ಪಿಜ್ಜಾ ಸಾಸ್ ಸವರಿ, ಟಾಪಿಂಗ್‌ನಲ್ಲಿ ಹೇಳಿರುವ ಎಲ್ಲಾ ವಸ್ತುಗಳನ್ನು ಹಾಕಿ ಅಲಂಕರಿಸಿ.
* ಈಗ ಪಿಜ್ಜಾ ಪ್ಯಾನ್ ಅನ್ನು ಪ್ರೀ ಹೀಟ್ (10 ನಿಮಿಷ) ಮಾಡಿರು ಓವನ್‌ನಲ್ಲಿ ಇಟ್ಟು 160 ಡಿಗ್ರಿ c ಉಷ್ಣತೆಯಲ್ಲಿ 20 ನಿಮಿಷ ಬೇಯಿಸಿ.
* ನಂತರ ಕಟ್ ಮಾಡಿ, ಅದರ ಮೇಲೆ ಸ್ವಲ್ಪ ಚಿಲ್ಲಿ ಫ್ಲೇಕ್ಸ್ ಉದುರಿಸಿ, ಸರ್ವ್ ಮಾಡಿ.
- ನೀವು ಈ ಪಿಜ್ಜಾವನ್ನು ಗ್ಯಾಸ್ ಮೇಲೆಯೂ ಮಾಡಬಹುದು. ಒಂದು ಪ್ಯಾನ್‌ನಲ್ಲಿ ಪಿಜ್ಜಾ ಬೇಸ್ ಅನ್ನು ಪಾತ್ರೆ ಜೊತೆಗೆ ಇಟ್ಟು 20 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ಸಾಕು
- ಸರ್ವ್ - 1 ಸ್ಲೈಸ್
- ಕ್ಯಾಲೋರಿ - 270ಕ್ಯಾ
- ಕೊಬ್ಬು - 5ಗ್ರಾಂ
- ಪ್ರೊಟೀನ್ - 10ಗ್ರಾಂ
- ಕಾರ್ಬ್ಸ್ - 35ಗ್ರಾಂ



Click it and Unblock the Notifications