Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Recipe: ಸಕತ್ ಟೇಸ್ಟಿಯಾಗಿರುತ್ತದೆ ಈ ಟೊಮೆಟೊ ಗೋಡಂಬಿ ಗ್ರೇವಿ
ನಾವಿಲ್ಲಿ ಟೊಮೆಟೊ ಗೋಡಂಬಿ ಸಾರಿನ ರೆಸಿಪಿ ನೀಡಿದ್ದೇವೆ, ಇದೇ ಗ್ರೇವಿಗೆ ನೀವು ಪನ್ನೀರ್ ಸೇರಿಸಬಹುದು, ಬಟಾಣಿ ಸೇರಿಸಬಹುದು. ಇಲ್ಲಿ ಗೋಡಂಬಿ ಸೇರಿಸಿ ಮಾಡುವ ಟೊಮೆಟೊ ಗ್ರೇವಿ ರೆಸಿಪಿ ನೀಡಿದ್ದೇವೆ. ತುಂಬಾನೇ ರುಚಿಯಾಗಿರುವ ಈ ಗ್ರೇವಿಯ ರೆಸಿಪಿ ಮಾತ್ರ ಸರಳವಾಗಿದೆ:

ಬೇಕಾಗುವ ಸಾಮಗ್ರಿ
ತುಪ್ಪ ಒಟ್ಟು 3-4 ಚಮಚ ಹಾಕಿ
1 ಕಪ್ ಗೋಡಂಬಿ
1ಚಮಚ ಎಣ್ಣೆ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
1 ಲವಂಗ
1 ನಕ್ಷತ್ರ ಮೊಗ್ಗು
1 ಚಮಚ ಜೀರಿಗೆ
ಒಂದೂವರೆ ಚಮಚ ಖಾರದ ಪುಡಿ
ಮೆಣಸಿನ ಪುಡಿ
10 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ
ಸಕ್ಕರೆ
ಸ್ವಲ್ಪ ಮೊಸರು
2-3 ಚಮಚ ಕ್ರೀಮ್ ( ಬಳಸದಿದ್ದರೂ ಆಗುತ್ತೆ
ಸ್ವಲ್ಪ ಏಲಕ್ಕಿ ಪುಡಿ
ಮಾಡುವ ವಿಧಾನ:
ಪಾತ್ರೆ ಬಿಸಿ ಮಾಡಿ ಅದರಲ್ಲಿ 2 ಚಮಚ ತುಪ್ಪ ಹಾಕಿ. ನಂತರ ಒಂದು ಕಪ್ ಗೋಡಂಬಿ
ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ, ನಂತರ ತೆಗೆದು ತಟ್ಟೆಯಲ್ಲಿ ಹಾಕಿ
ಈಗ ಅದೇ ಪ್ಯಾನ್‌ನಲ್ಲಿ 1 ಚಮಚ ತುಪ್ಪ, 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ
ಚಕ್ಕೆ, ಪವಾವ್ ಎಲೆ, ಲವಂಗ, ನಕ್ಷತ್ರ ಮೊಗ್ಗು, ಜೀರಿಗೆ ಸೇರಿಸಿ.
ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಮೆಣಸಿನ ಪುಡಿ ಹಕಿ 10-15 ನಿಮಿಷ ಫ್ರೈ
ಮಾಡಿ.
ಬಲಿಕ ಕತ್ತರಿಸಿದ ಈರುಳ್ಳಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿ. ಈಗ
ಚಿಕ್ಕದಾಗಿ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ ಸೇರಿಸೋಣ.
ನಂತರ ಸ್ವಲ್ಪ ಗೋಡಂಬಿ ಹಾಕಿ ರುಬ್ಬಿದ ಟೊಮೆಟೊ ಪೇಸ್ಟ್ ಹಾಕಿ, ನಂತರ ಒಂದು 5
ನಿಮಿಷ ಕುದಿಸಿ
ಬಳಿಕ ಕೊತ್ತಂಬರಿ ಪುಡಿ, ಖಾರದ ಪುಡಿ , ಕೆಂಪು ಬಣ್ಣ ಕಾಣಿಸಲು ಕಾಶ್ಮೀರಿ ಖಾರದ
ಪುಡಿ, 3/4 ಚಮಚ ಉಪ್ಪು ನಂತರ ಸ್ವಲ್ಪ ನೀರು ಹಾಕಿ ಕುದಿಸಿ
ನಂತರ ಸ್ವಲ್ಪ ಮೊಸರು ಹಾಕಿ, ಬಳಿಕ ಕಸೂರಿ ಮೇತಿ ಹಾಕಿ ಮಿಕ್ಸ್ ಮಾಡಿ
ಈಗ ಫ್ರೈ ಮಾಡಿಟ್ಟ ಗೋಡಂಬಿ ಸೇರಿಸಿ
ಇಷ್ಟು ಮಾಡಿದರೆ ಟೊಮೆಟೊ ಗೋಡಂಬಿ ಕರಿ ರೆಡಿ.
ಸಲಹೆ: ನೀವು ಇದಕ್ಕೆ ಕಾಶ್ಮೀರಿ ಮೆಣಸಿನ ಪುಡಿ
ಬಳಸಲೇಬೇಕು ಎಂದೇನು ಇಲ್ಲ, ಆದರೆ ಹಾಕಿದರೆ ಸಾರು ಕೆಂಪಗೆ ಚೆನ್ನಾಗಿ
ಕಾಣುತ್ತದೆ.
ನೀವು ಟೊಮೆಟೊ ಜೊತೆ ಸ್ವಲ್ಪ ಗೋಡಂಬಿ ಹಾಕಿ ರುಬ್ಬಿದರೆ ಅದರ ಪ್ಲೇವರ್
ಚೆನ್ನಾಗಿರುತ್ತದೆ
ಬೇಕಿದ್ದರೆ ಇದಕ್ಕೆ ಪನ್ನೀರ್ ಹಾಕಬಹುದು
ಬಟಾಣಿ ಸೇರಿಸಬಹುದು
ತುಪ್ಪದನ್ನ, ಚಪಾತಿ, ರೋಟಿಗೆ ತುಂಬಾ ಚೆನ್ನಾಗಿರಲಿದೆ.
ಇದಲ್ಲಿ ಇರಲೇಬೇಕಾದ ಸಾಮಗ್ರಿಗಳಿವು
ಗೋಡಂಬಿ: ಅನ್ ಸಾಲ್ಟಡ್ ಹಾಗೂ ರೋಸ್ಟ್ ಮಾಡಿರದ ಗೋಡಂಬಿ
ಬಳಸಿ
ಟೊಮೆಟೊ ಮತ್ತು ಈರುಳ್ಳಿ: ಇದಕ್ಕೆ 1-2 ಈರುಳ್ಳಿ 3-4
ನಾಲ್ಕು ಹಣ್ಣಾದ ಟೊಮೆಟೊ ಬಳಸಿ ( ಸ್ವಲಪ್ ಹೆಚ್ಚು ಸಾರು ಬೇಕೆಂದರೆ ಇವುಗಳನ್ನು
ಹೆಚ್ಚಾಗಿ ಹಾಕಿ
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಬದಲಿಗೆ ಚಿಕ್ಕದಾಗಿ ಕತ್ತರಿಸಿ
ಬಳಸಿ
ಮೊಸರು ಮತ್ತು ಕ್ರೀಮ್ ಬಳಸಿ, ಇದು ಗ್ರೇವಿಯನ್ನು ಕ್ರೀಮಿಯಾಗಿ ಮಾಡುತ್ತದೆ
ಟಿಪ್ಸ್: ನೀವು ಇದನ್ನು ಮನೆಗೆ ಯಾರದರೂ ಗೆಸ್ಟ್ ಬಂದಾಗ ಮಾಡಿದರೆ ಸ್ಪೆಷಲ್ ಅಡುಗೆಯಾಗುವುದು, ತುಪ್ಪದನ್ನ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತದೆ. ಇನ್ನು ಬಟರ್ ನಾನ್ ಇದಕ್ಕೂ ಕೂಡ ಒಳ್ಳೆಯ ಕಾಂಬಿನೇಷನ್, ಅನ್ನಕ್ಕೂ ರುಚಿಯಾಗಿರುತ್ತದೆ.



Click it and Unblock the Notifications