ಮೆದು ಮೆದುವಾದ ಬನ್ ದೋಸೆ..! ಮಾಡುವ ವಿಧಾನ ಇಲ್ಲಿದೆ..!

Posted By:

ಬೆಳಗ್ಗೆಯ ತಿಂಡಿಗೆ ವಿಶೇಷವಾದ ಖಾದ್ಯ ಏನಾದರು ಮಾಡುವ ಯೋಚನೆ ನಿಮ್ಮಲ್ಲಿದ್ದರೆ ಈ ಬನ್ ದೋಸೆಯನ್ನು ಒಮ್ಮೆ ಪ್ರಯತ್ನಿಸಿ. ಬನ್ ದೋಸೆ ನೀವು ಸಾಮಾನ್ಯ ದೋಸೆಯಂತೆ ಮಾಡಲು ಸಾಧ್ಯವಿಲ್ಲ. ಇಲ್ಲಿ ಅಕ್ಕಿ ಹಿಟ್ಟಿನ ಬದಲು ರವೆಯನ್ನು ಬಳಸಿ ಈ ಬನ್ ದೋಸೆ ಮಾಡಲಾಗುತ್ತದೆ.

ಬನ್ ದೋಸೆಗೆ ಯಾವುದೇ ಮೈದಾ ಹಿಟ್ಟು ಅಥವಾ ಕಡಲೇ ಹಿಟ್ಟಿನ ಅಗತ್ಯವಿಲ್ಲ. ಹೀಗಾಗಿ ಇದೊಂದು ಆರೋಗ್ಯಕರ ತಿಂಡಿಯಾಗಿದೆ. ಜೊತೆಗೆ ಕಡಿಮೆ ಎಣ್ಣೆಯನ್ನು ಬಳಸಿಯೂ ಸಹ ಮಾಡಬಹುದಾಗಿದ್ದು, ಎಲ್ಲಾ ವಿಧದಲ್ಲೂ ಆರೋಗ್ಯಕ್ಕೆ ಉತ್ತಮವಾಗಿದೆ.

ನೋಡಲು ಸಹ ಅಚ್ಚುಕಟ್ಟಾಗಿ ಕಾಣುವುದಷ್ಟೇ ಅಲ್ಲ ಸೇವಿಸಲು ಸಹ ಬಲು ರುಚಿಯಾಗಿರುತ್ತದೆ. ಹಾಗಾದರೆ ಈ ಮೆದು ಮೆದು ಬನ್ ದೋಸೆ ಮಾಡುವುದು ಹೇಗೆ? ಬೇಕಾಗುವ ಪದಾರ್ಥವೇನು? ಪಾಕವಿಧಾನ ಕುರಿತು ತಿಳಿದುಕೊಳ್ಳೋಣ.

Bun Dosa Recipe in Kannada


ಬನ್ ದೋಸೆ ತಯಾರಿಸಲು ಅಗತ್ಯವಿರುವ ವಸ್ತುಗಳು

  • ರವೆ - 1 ಕಪ್
  • ಅಕ್ಕಿ ಹಿಟ್ಟು - ಅರ್ಧ ಕಪ್
  • ದೊಡ್ಡ ಈರುಳ್ಳಿ - 1
  • ಹಸಿರು ಮೆಣಸಿನಕಾಯಿ - 1
  • ಮೊಸರು - 1/4 ಕಪ್
  • ಶುಂಠಿ ತುಂಡು - 1
  • ಸಾಸಿವೆ - 1/2 ಟೀಸ್ಪೂನ್
  • ಜೀರಿಗೆ - 1/2 ಟೀಸ್ಪೂನ್
  • ಉದ್ದು- 1 tbsp
  • ಮೆಂತ್ಯ ಪುಡಿ - ಸ್ವಲ್ಪ
  • ಅಡಿಗೆ ಸೋಡಾ - 2 ಟೀಸ್ಪೂನ್
  • ಎಣ್ಣೆ - 2 ಟೀಸ್ಪೂನ್
  • ಕರಿಬೇವಿನ ಎಲೆಗಳು
  • ಕೊತ್ತಂಬರಿ ಸೊಪ್ಪು
  • ನೀರು - ಅಗತ್ಯವಿರುವ ಪ್ರಮಾಣ
  • ಇಂಗು ಚಿಟಿಕೆಯಷ್ಟು


ಬನ್ ದೋಸೆ ಮಾಡುವ ವಿಧಾನ

ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಿ. ಸಾಸಿವೆ ಹುರಿದ ನಂತರ ಉದ್ದಿನಬೇಳೆ ಮತ್ತು ಇಂಗು ಹಾಕಿ ಹುರಿಯಿರಿ. ಮುಂದೆ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.

ಈಗ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಹುರಿದ ನಂತರ, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ನಂತರ ರವೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ಅಕ್ಕಿ ಹಿಟ್ಟು, ಸ್ವಲ್ಪ ಹುಳಿ ಮೊಸರು ಮತ್ತು ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ನಂತರ ಹಿಟ್ಟಿನಲ್ಲಿ ಸ್ವಲ್ಪ ನೀರು ಮತ್ತು ಉಪ್ಪನ್ನು ಕರಗಿಸಿ ಮತ್ತು ಈಗಾಗಲೇ ಮಸಾಲೆ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ.

20 ನಿಮಿಷಗಳ ಕಾಲ ಇರಿಸಿ. ಇದರಿಂದ ರವೆ ಚೆನ್ನಾಗಿ ನೆನೆಯುತ್ತದೆ. ನಂತರ ಎರಡು ಚಿಟಿಕೆ ಅಡಿಗೆ ಸೋಡಾ ಮತ್ತು ಸ್ವಲ್ಪ ನೀರು ತೆಗೆದುಕೊಂಡು ಮತ್ತೆ ಮಿಶ್ರಣ ಮಾಡಿ. ಈಗ ದೋಸೆ ಹಾಕಲು ಬೇಕಾದ ಪಾತ್ರ ತೆಗೆದುಕೊಳ್ಳಿ, ಅದಕ್ಕೆ ಎಣ್ಣೆಯನ್ನು ಹಚ್ಚಿ ಸಣ್ಣ ಉರಿಯಲ್ಲಿ ಬಿಸಿ ಮಾಡಿದ ನಂತರ ಹಿಟ್ಟನ್ನು ಸುರಿಯಿರಿ ಮತ್ತು ಬೇಯಲು ಬಿಡಿ. ಎರಡೂ ಕಡೆ ದೋಸೆಯನ್ನು ಬೇಯಿಸಿ. 2ರಿಂದ 3 ನಿಮಿಷ ಬೇಯಿಸಿದರೂ ಸಾಕು ದೊಸೆ ರೆಡಿಯಾಗುತ್ತದೆ.

ಗಮನಿಸಿ: ಈ ದೋಸೆ ಮಾಡಲು ಹಿಂದಿನ ದಿನವೇ ಹಿಟ್ಟನ್ನು ನೆನಸಿಡಬೇಕು ಇಲ್ಲವೆ ತಯಾರಿ ಮಾಡಿಟ್ಟುಕೊಳ್ಳಬೇಕು ಎಂದೇನಿಲ್ಲ. ತಕ್ಷಣವೇ ಮೊಸರು ಬಳಸಿ ಇದನ್ನು ಹೂದಲು ಬರುವಂತೆ ಮಾಡಬಹುದು. ಆದರೆ ರವೆ ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಸರಿಯಾದ ಪ್ರಮಾನದಲ್ಲಿ ಮಾಡಬೇಕಿರುವುದು ಮುಖ್ಯ.

[ of 5 - Users]
Story first published: Friday, February 16, 2024, 15:00 [IST]
X
Desktop Bottom Promotion