For Quick Alerts
ALLOW NOTIFICATIONS  
For Daily Alerts

ಗೋಧಿ ಕಡಿ ಮತ್ತು ಕಡ್ಲೆ ಬೇಳೆ ಪಾಯಸ

Posted By:
|

ಸಿಹಿ ತಿನ್ನೋದಕ್ಕೆ ಹಬ್ಬಹರಿದಿನಗಳೇ ಅಗಬೇಕೆಂದೇನಿಲ್ಲ... ನಿಮಗೆ ಬೇಕನ್ನಿಸಿದಾಗೆಲ್ಲ ಸುಲಭವಾಗಿ ಕೆಲವು ಸಿಹಿ ತಿನಿಸುಗಳನ್ನ ಮಾಡಿಕೊಂಡು ತಿನ್ನಬಹುದು. ಅಂಥ ಒಂದು ರುಚಿಕರವಾದ ತಿನಿಸು ಗೋಧಿ ಕಡಿ ಹಾಗೂ ಕಡ್ಲೆ ಬೆಳೆ ಹಾಕಿ ಮಾಡುವ ಪಾಯಸ.

ಇದನ್ನು ಹಬ್ಬದ ಸಮಯದಲ್ಲಿ, ಪೂಜೆ ಸಮಯದಲ್ಲಿ ನೈವೇದ್ಯ ಇಡಲು ಕೂಡ ಬಳಸಬಹುದು. ನೀವು ಈ ಪಾಯಸ ಮಾಡಲು ಗೋಧಿಯನ್ನು ಕುಟ್ಟಿ ಪುಡಿ ಮಾಡಬಹುದು, ಇಲ್ಲಾಂದರೆ ಗೋಧಿ ಕಡಿ ಸಿಗುತ್ತೆ ಅದನ್ನೇ ಬಳಸಬಹುದು.

broken wheat and channa dal payasa

ಇದು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಗೋಧಿಯಲ್ಲಿ ಫೈಬರ್, ಕಾರ್ಬೋ ಮೊದಲಾದ ಅಂಶಗಳಿದ್ದು, ಮಕ್ಕಳಿಗೆ ಶಕ್ತಿವರ್ಧಕವಾಗಿ ಕೂಡ ಬಳಸಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

broken wheat and channa dal payasa, ಗೋಧಿ ಕಡಿ ಮತ್ತು ಕಡ್ಲೆ ಬೇಳೆ ಪಾಯಸ
broken wheat and channa dal payasa, ಗೋಧಿ ಕಡಿ ಮತ್ತು ಕಡ್ಲೆ ಬೇಳೆ ಪಾಯಸ
Prep Time
15 Mins
Cook Time
30M
Total Time
45 Mins

Recipe By: Reena TK

Recipe Type: sweet

Serves: 4

Ingredients
  • ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು:

    ಗೋಧಿ ಕಡಿ - ಒಂದು ಬೌಲ್

    ಕಡಲೆ ಬೇಳೆ - ಅರ್ಧ ಬೌಲ್

    ಸಕ್ಕರೆ - ಅರ್ಧ ಬೌಲ್

    ಬೆಲ್ಲ - ಕಾಲು ಬೌಲ್

    ತೆಂಗಿನ ತುರಿ- ಒಂದು ಬೌಲ್

    ಏಲಕ್ಕಿ - 4-5

    ತುಪ್ಪ - ಸ್ವಲ್ಪ

    ಗೋಡಂಬಿ ಮತ್ತು ದ್ರಾಕ್ಷಿ - ಸ್ವಲ್ಪ

Red Rice Kanda Poha
How to Prepare
  • ಮಾಡುವ ವಿಧಾನ

    ಮೊದಲಿಗೆ ಗೋಧಿ ಕಡಿ ಹಾಗೂ ಕಡಲೆ ಬೆಳೆಯನ್ನು ಚೆನ್ನಾಗಿ ತೊಳೆದು ನೀರು ಹಾಕಿ ಕುಕ್ಕರ್ ನಲ್ಲಿಟ್ಟು 4- 5 ವಿಷಲ್ ಕೂಗಿಸಿಕೊಳ್ಳಿ.

    ಈಗ ತೆಂಗಿನತುರಿ ಹಾಗೂ ಏಲಕ್ಕಿಯನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    ನಂತರ ಬೆಂದ ಗೋದಿಕಡಿ ಮತ್ತು ಕಡ್ಲೆಬೇಳೆಯನ್ನು ಗ್ಯಾಸ್ ಮೇಲೆ ಕುಡಿಸಲು ಇಡಿ.

    ಇದಕ್ಕೆ ಬೆಲ್ಲ ಹಾಗೂ ಸಕ್ಕರೆಯನ್ನು ಸೇರಿಸಿ ಕುದಿಸಿ. ಈಗ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಇದಕ್ಕೆ ಸೇರಿಸಿ 2 ನಿಮಿಷಗಳ ಕಾಲ ಕುದಿಸಿ.

    ನಂತರ ತುಪ್ಪದಲ್ಲಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹುರಿದು ಪಾಯಸಕ್ಕೆ ಸೇರಿಸಿದರೆ ರುಚಿಕರವಾದ ಪಾಯಸ ಸವಿಯಲು ಸಿದ್ಧ.

Instructions
  • ನೀವು ಬೇಕಾದರೆ ನುಚ್ಚು ಗೋಧಿಗೆ ತೆಂಗಿನ ಹಾಲು ಹಾಕಿಯೂ ಈ ಪಾಯಸ ಮಾಡಬಹುದು.
Nutritional Information
[ 3.5 of 5 - 40 Users]
X
Desktop Bottom Promotion