Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪನ್ನೀರ್ ದೋಸೆ -ಬ್ರೇಕ್ ಫಾಸ್ಟ್ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
3 ಕಪ್ ಅಕ್ಕಿ
1 ಕಪ್ ಉದ್ದಿನ ಬೇಳೆ
1 ಚಮಚ ಮೆಂತೆ
ಬೆಣ್ಣೆ
2-3 ಆಲೂಗೆಡ್ಡೆ
ಅರ್ಧ ಕಪ್ ತುರಿದ ಪನ್ನೀರ್
3 ಹಸಿ ಮೆಣಸಿನಕಾಯಿ
1 ಚಮಚ ಸಾಸಿವೆ
ಕಾಲು ಚಮಚ ಅರಿಶಿಣ
10-12 ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
1. ಅಕ್ಕಿ, ಉದ್ದಿನಬೇಳೆ, ಮೆಂತೆಯನ್ನು 6-8 ಗಂಟೆಗಳ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ಸಾಯಂಕಾಲ ಹೊತ್ತಿಗೆ ಅವುಗಳಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯಬೇಕು.
3. ರುಚಿಗೆ ತಕ್ಕ ಉಪ್ಪು ಸೇರಿಸಿ ಒಂದು ರಾತ್ರಿ ಇಡಬೇಕು.
4. ಆಲೂಗೆಡ್ಡೆಯ ಸಿಪ್ಪೆ ತೆಗೆದು ಕತ್ತರಿಸಿ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.
5. ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನೂ ಕೂಡ ಚಿಕ್ಕದಾಗಿ ಕತ್ತರಿಸಬೇಕು.
6. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಸಸಿವೆಯನ್ನು ಹಾಕಬೇಕು, ಸಾಸಿವೆ ಚಟಾಪಟ ಶಬ್ದ ಬರುವಾಗ ಕರಿಬೇವಿನ ಎಲೆ, ಕತ್ತರಿಸಿದ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವಾಗ ಆಲೂಗೆಡ್ಡೆ, ಹಸಿಮೆಣಸಿನಕಾಯಿ ಮತ್ತು ಪನ್ನೀರ್ ಮೂರನ್ನು ಹಾಕಿ ಅರ್ಧ ಚಮಚದಷ್ಟು ಉಪ್ಪು ಮತ್ತು ಅರಿಶಿಣಪುಡಿ ಹಾಕಿ ಆಲೂಗೆಡ್ಡೆ ಬೇಯುವವರೆಗೆ ಹುರಿದು ಪಾತ್ರೆಯನ್ನು ಉರಿಯಿಂದ ತೆಗೆದು ಇಡಬೇಕು.
7. ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ ದೋಸೆ ಹುಯ್ಯಬೇಕು. ದೋಸೆ ಸ್ವಲ್ಪ ಬೆಂದಾಗ ಸ್ವಲ್ಪ ಬೆಣ್ಣೆ ಹಾಕಿ ಅದರ ಮೇಲೆ ಪನ್ನೀರ್ ಮಿಶ್ರಣವನ್ನು ಉದುರಿಸಿ, ಮಸಾಲೆದೋಸೆ ಮಡಚುವ ರೀತಿ ಮಡಚಿದರೆ ಪನ್ನಿರ್ ದೋಸೆ ರೆಡಿ. ನಂತರ ತವಾವನ್ನು ಬಟ್ಟೆಯಿಂದ ಒರೆಸಿ ಇದೇ ರೀತಿ ಉಳಿದ ಮಿಶ್ರಣದಿಂದ ದೋಸೆ ಮಾಡಬೇಕು.
ಈ ದೋಸೆಯನ್ನು ಸಾಂಬರ್ ಮತ್ತು ಚಟ್ನಿ ಜೊತೆ ನೆಚ್ಚಿಕೊಂಡು ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
